ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ಹೊರತು ಪಡೆಸಿದರೆ ಅನಂತರ ಜನರನ್ನು ಅತ್ಯಧಿಕವಾಗಿ ಮನರಂಜಿಸುವ ಕಾರ್ಯಕ್ರಮಗಳು ಯಾವುದು ಎನ್ನುವುದಾದರೆ ಅವೇ ರಿಯಾಲಿಟಿ ಶೋ ಗಳು. ಡ್ಯಾಮ್ಸ್, ಕಾಮಿಡಿ, ಗಾಯನ, ಮಕ್ಕಳ ಪ್ರತಿಭೆ, ಜೋಡಿಗಳ ನಡುವಿನ ಪ್ರೀತಿ ಹೀಗೆ ವೈವಿದ್ಯಮಯ ರಿಯಾಲಿಟಿ ಶೋ ಗಳು ಈಗಾಗಲೇ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗ ಕನ್ನಡದ ಜನಪ್ರಿಯ ವಾಹಿನಿಯಲ್ಲಿ ಜೋಡಿ ನಂ 1 ಎನ್ನುವ ಹೊಸ ರಿಯಾಲಿಟಿ ಶೋ ಇಂದಿನಿಂದ ಭರ್ಜರಿಯಾಗಿ ಆರಂಭವಾಗಿದೆ. ಈ ಹೊಸ ರಿಯಾಲಿಟಿ ಶೋ ಪ್ರೋಮೋ ಈಗಾಗಲೇ ಜನರ ಗಮನ ಸೆಳೆದಿತ್ತು.
ಸೆಲೆಬ್ರಿಟಿ ಜೋಡಿಗಳನ್ನು ಕಾರ್ಯಕ್ರಮಕ್ಕೆ ಸ್ಪರ್ಧಿಗಳನ್ನಾಗಿ ಆಹ್ವಾನ ನೀಡಲಾಗಿದ್ದು, ಪ್ರೋಮೋಗಳನ್ನು ನೋಡಿಯೇ ಅನೇಕರು ಥ್ರಿಲ್ ಆಗಿದ್ದಾರೆ. ಇನ್ನು ಈ ಶೋ ಮೂಲಕ ಬಹಳ ದಿನಗಳ ನಂತರ ಶ್ವೇತ ಚೆಂಗಪ್ಪ ಅವರು ಕಿರುತೆರೆಗೆ ನಿರೂಪಕಿಯಾಗಿ ಕಮ್ ಬ್ಯಾಕ್ ಸಹಾ ಮಾಡಿದ್ದಾರೆ. ಸೆಲೆಬ್ರಿಟಿ ಜೋಡಿಗಳ ನಡುವಿನ ಪ್ರೀತಿ, ಅವರ ನಡುವಿನ ಸಿಹಿ ಕಹಿ ಅನುಭವಗಳು, ಜೀವನದ ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುವ ಜೊತೆಗೆ ಸ್ಪರ್ಧೆ ಕೂಡಾ ನಡೆಯಲಿದ್ದು, ಕೊನೆಗೆ ಒಂದು ಜೋಡಿ ಶೋ ಗೆದ್ದು ಜೋಡಿ ನಂಬರ್ ಒನ್ ಆಗಲಿದೆ.
ಶೋ ಕುರಿತಾಗಿ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಪುಟಗಳ ಮೂಲಕ ಭರ್ಜರಿ ಜಾಹೀರಾತು ನೀಡಿದೆ. ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದೆ. ಇನ್ನು ಹೊಸ ರಿಯಾಲಿಟಿ ಶೋ ಪ್ರೊಮೋ ನೋಡಿದ ಮೇಲೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿರುವುದು ಸಹಾ ವಾಸ್ತವ ಅಂಶವಾಗಿದೆ. ಅನೇಕರು ಕಾಮೆಂಟ್ ಗಳನ್ನು ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನೆಟ್ಟಿಗರಲ್ಲಿ ಶೋ ಬಗ್ಗೆ ಕುತೂಹಲ ಇದೆ, ಇದೇ ವೇಳೆ ಕೆಲವರು ಅಸಮಾಧಾನವನ್ನು ಸಹಾ ಹೊರ ಹಾಕುತ್ತಿದ್ದಾರೆ. ಕೆಲವರು ರಾಜಾ ರಾಣಿ ಶೋ ಯಶಸ್ಸು ಪಡೆದಿದ್ದಕ್ಕೆ ಅಂತದ್ದೇ ಇನ್ನೊಂದು ಶೋ ಬಂದಿದೆ ಎಂದು ಹೇಳಿದ್ದಾರೆ. ಮತ್ತೆ ಒಂದಷ್ಟು ಜನರು ಎಲ್ಲಾ ಶೋ ಗಳು ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ, ಸಾಮಾನ್ಯ ಜನರಿಗೆ ಏಕೆ ಅವಕಾಶ ಇಲ್ಲ ಎಂದು ಪ್ರಶ್ನೆ ಮಾಡಿದರೆ, ಕೆಲವರು ಸಾಮಾನ್ಯ ಜನರು ನೋಡೋಕೆ ಅಷ್ಟೇ. ಟಿ ಆರ್ ಪಿ ಬೇಕೆಂದ್ರೆ ಸೆಲೆಬ್ರಿಟಿಗಳೇ ತಾನೇ ಬೇಕಾಗಿರೋದು ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ರಿಯಾಲಿಟಿ ಶೋ ಗಳನ್ನು ಇಷ್ಟ ಪಡುವ ಮಂದಿ ಹೊಸ ಶೋ ಹಾಗೂ ಅದರ ಜಡ್ಜ್ ಗಳು ಮತ್ತು ಸ್ಪರ್ಧಿಗಳಾಗಿ ಬಂದಿರುವ ಸೆಲೆಬ್ರಿಟಿ ಜೋಡಿಗಳನ್ನು ನೋಡಿ ಬಹಳ ಖುಷಿ ಪಡುತ್ತಿದ್ದಾರೆ. ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಮೆಚ್ಚುಗೆಗಳನ್ನು ನೀಡುವ ಮೂಲಕ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ನೆಟ್ಟಿಗರ ಅಭಿಪ್ರಾಯಗಳ ನಡುವೆಯೇ ಇದೀಗ ಜೋಡಿ ನಂಬರ್ ಒನ್ ಶೋ ಭರ್ಜರಿ ಆರಂಭವನ್ನು ಮಾಡಿ ಜರ್ನಿ ಆರಂಭಿಸಿದೆ.