ಮನೇಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ: ಶೋ ನಲ್ಲಿ ಸೈಫ್ ಅಲಿ ಖಾನ್ ಹೊರ ಹಾಕಿದರು ತನ್ನ ಭಯ

Entertainment Featured-Articles News

ಸ್ಟಾಂಡಪ್ ಕಮಿಡಿಯನ್ ಹಾಗೂ ನಟ ಕೂಡಾ ಆಗಿರುವ ಕಪಿಲ್ ಶರ್ಮಾ ನಡೆಸಿಕೊಡುವ ದಿ ಕಪಿಲ್ ಶರ್ಮಾ ಕಾಮೆಡಿ ಶೋ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದೆ.‌ ಕೆಲವೇ ತಿಂಗಳುಗಳ ಹಿಂದೆಯಷ್ಟೇ ಕಪಿಲ್ ಶರ್ಮಾ ಶೋ ತನ್ನ ಹೊಸ ಸೀಸನ್ ಆರಂಭಿಸಿದೆ. ಕಪಿಲ್ ಶರ್ಮಾ ಶೋ ನ ಜನಪ್ರಿಯತೆ ಕಾರಣದಿಂದಾಗಿಯೇ ಬಾಲಿವುಡ್ ಮಂದಿ ತಮ್ಮ ಹೊಸ ಸಿನಿಮಾಗಳು ಬಂದ ಕೂಡಲೇ ಅವುಗಳ ಪ್ರಮೋಷನ್ ಗಾಗಿ ಕಪಿಲ್ ಶರ್ಮಾ ಶೋ ಗೆ‌ ಬರುತ್ತಾರೆ. ಇತ್ತೀಚಿಗೆ ಈ ಶೋ ಗೆ ನಟ ಸೈಫ್ ಅಲಿ ಖಾನ್, ರಾಣಿ ಮುಖರ್ಜಿ, ಸಿದ್ಧಾರ್ಥ್ ಚತುರ್ವೇದಿ ಹಾಗೂ ಶಾರ್ವರಿ ವಾಘ್ ಅತಿಥಿಗಳಾಗಿ ಆಗಮಿಸಿದ್ದರು.

ಕಪಿಲ್ ಶರ್ಮಾ ಈ ವೇಳೆ ಸೈಫ್ ಹಾಗೂ ಅವರ ಸಿನಿಮಾ ತಂಡದ ಜೊತೆಗೆ ಭರ್ಜರಿ ಕಾಮಿಡಿ ಮಾಡಿದ್ದಾರೆ. ಕಪಿಲ್ ಸೈಫ್ ಅವರ ವೈಯಕ್ತಿಕ ಹಾಗೂ ಸಿನಿಮಾ ವಿಷಯಗಳ ಕುರಿತಾಗಿ ಮಾತನಾಡುತ್ತಾ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ಕಪಿಲ್ ಈ ವೇಳೆ 2021 ರಲ್ಲೇ ನೀವು ಮೂರು ಸಿನಿಮಾ‌ ಪೂರ್ತಿ ಮಾಡಿರುವಿರಿ, ನಿಮಗೆ ಹೆಚ್ಚು ಕೆಲಸ ಮಾಡಲು ಇಷ್ಟವೇ?? ಅಥವಾ ಮಕ್ಕಳ ಸಂಖ್ಯೆ ಜಾಸ್ತಿ ಮಾಡುವ ಒತ್ತಡ ಏನಾದರೂ ಇದೆಯಾ?? ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ. ಕಪಿಲ್ ಕೇಳಿದ ಪ್ರಶ್ನೆಗೆ ಸೈಫ್ ಕೂಡಾ ಹಾಸ್ಯದ ಧಾಟಿಯಲ್ಲೇ ಉತ್ತರ ನೀಡಿದ್ದಾರೆ.

ಸೈಫ್ ತನ್ನ ಉತ್ತರ ನೀಡುತ್ತಾ “ಮನೆಯಲ್ಲಿ ಇದ್ದರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವ ಭಯವಿದೆ” ಎಂದು ಹೇಳಿದ್ದಾರೆ. ಆದ್ದರಿಂದಲೇ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದು ಸೈಫ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನಟ ಸೈಫ್ ಅವರಿಗೆ ತಮ್ಮ ಮೊದಲ ಪತ್ನಿ ಅಮೃತಾ ಅವರಿಂದ ಇಬ್ರಾಹಿಂ ಅಲಿ ಖಾನ್ ಮತ್ತು ಸಾರಾ ಆಲಿ ಖಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಎರಡನೇ ಪತ್ನಿ ಕರೀನಾ ಕಪೂರ್ ರಿಂದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. 2021 ರಲ್ಲೇ ಸೈಫ್ ಭೂತ್ ಪೋಲಿಸ್, ಬಂಟಿ ಔರ್ ಬಬ್ಬಿ 2 ಹಾಗೂ ತಾಂಡವ್ ಸಿನಿಮಾ ಮುಗಿಸಿದ್ದಾರೆ.

Leave a Reply

Your email address will not be published. Required fields are marked *