ನಿಮ್ಮ ಭಾವ ರಾತ್ರಿ ಮಾಡೋ ಯೋಗ ಪೋಸ್ ಕಲಿಸುತ್ತಾರೆ: ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲಾದ ಶಮಿತಾ ಶೆಟ್ಟಿ
ರಾಜ್ ಕುಂದ್ರಾ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಈಗಾಗಲೇ ಅ ಶ್ಲೀ ಲ ಸಿನಿಮಾಗಳ ತಯಾರಿಕೆ ಹಾಗೂ ಅವುಗಳ ಅಪ್ಲೋಡ್ ವಿಚಾರದ ಆ ರೋ ಪದಲ್ಲಿ ವಿಚಾರಣೆಯನ್ನು ಎದುರಿಸುತ್ತಾ, ಪೋ ಲಿ ಸರ ಬಂಧನದಲ್ಲಿದ್ದಾರೆ. ಅವರು ಮಾಡಿರುವ ಕೆಲಸದಿಂದಾಗಿ ಶಿಲ್ಪಾ ಶೆಟ್ಟಿ ಅವರ ಇಡೀ ಕುಟುಂಬ ಮುಜುಗರಕ್ಕೆ ಈಡಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ರಾಜ್ ಕುಂದ್ರಾ ಪತ್ನಿ ನಟಿ ಶಿಲ್ಪಾ ಶೆಟ್ಟಿ ಹಾಗೂ ನಾದಿನಿಯಾದ ಶಮಿತಾ ಶೆಟ್ಟಿ ಇಬ್ಬರೂ ಸಹಾ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾರೆ. ಇವರು ಸೋಶಿಯಕ್ ಮೀಡಿಯಾಗಳಲ್ಲಿ ಮಾಡುವ ಪೋಸ್ಟ್ ಗಳಿಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಗಳು ಹರಿದು ಬರುತ್ತಿವೆ.
ಇದೇ ಜುಲೈ 23 ರಂದು ಬಹಳ ದಿನಗಳ ನಂತರ ನಟಿ ಶಿಲ್ಪಾ ಶೆಟ್ಟಿ ಅಭಿನಯದ ಸಿನಿಮಾ ಹಂಗಾಮಾ 2 ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಬಿಡುಗಡೆ ಆಗಿದೆ. ಶಿಲ್ಪಾ ಶೆಟ್ಟಿ ಹಲವು ವರ್ಷಗಳ ನಂತರ ತೆರೆಯ ಮೇಲೆ ಕಾಣುತ್ತಿದ್ದು, ಈ ವಿಶೇಷ ಸಂದರ್ಭದ ಹಿನ್ನೆಲೆಯಲ್ಲಿ ಅವರ ಸಹೋದರಿ ಅಕ್ಕನ ಸಿನಿಮಾ ಕುರಿತಾಗಿ, ಅಕ್ಕನ ಕುರಿತಾಗಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಶಮಿತಾ 14 ವರ್ಷಗಳ ನಂತರ ಸಿನಿಮಾ ಮಾಡುತ್ತಿರುವ ತಮ್ಮ ಅಕ್ಕ ನಿಗೆ ಶುಭ ಕೋರುತ್ತಾ, “ನೀನು ಸಾಕಷ್ಟು ಶ್ರಮ ಪಟ್ಟಿದ್ದೀಯಾ, ನಾನು ನಿನ್ನ ಜೊತೆಗಿದ್ದೇನೆ, ನಿನ್ನ ಜೀವನ ದಲ್ಲಿ ಅನೇಕ ಏರಿಳಿತಗಳನ್ನು ಕಂಡಿರುವೆ, ಪ್ರತಿ ಬಾರಿ ನೀನು ಇನ್ನಷ್ಟು ಸ್ಟ್ರಾಂಗ್ ಆಗುವೆ. ಈ ಕಷ್ಟವೂ ಕಳೆಯುತ್ತದೆ ಎಂದು ಹೇಳಿದ್ದಾರೆ.”
ಶಮಿತಾ ಪೋಸ್ಟ್ ಮಾಡಿದ ನಂತರ ಕಾಮೆಂಟ್ ಗಳಲ್ಲಿ ಅನೇಕರು ರಾಜ್ ಕುಂದ್ರಾ ವಿಚಾರವನ್ನು ಇಲ್ಲಿ ತಂದಿದ್ದಾರೆ. ಅನೇಕರು ನೆಗೆಟಿವ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು, ನಿಮ್ಮ ಅಕ್ಕ ಬೆಳಿಗ್ಗೆ ಮಾಡುವ ಯೋಗಾಸನಗಳನ್ನು ಹೇಳಿ ಕೊಡುತ್ತಾರೆ, ನಿಮ್ಮ ಭಾವ ರಾತ್ರಿ ಮಾಡುವ ಯೋಗ ಪೋಸ್ ಗಳನ್ನು ಕಲಿಸುತ್ತಾರೆ” ಎಂದು ಕಾಮೆಂಟ್ ಮಾಡಿದ್ದಾರೆ. ರಾಜ್ ಕುಂದ್ರಾ ಜೈಲಿಗೆ ಹೋಗಿದ್ದು ಏಕೆ?? ಅವರು ಹೇಗಿದ್ದಾರೆ? ಈಗ ಶಿಲ್ಪಾ ಗಿಂತ ಅವರಿಗೆ ಹೆಚ್ಚು ಶುಭ ಹಾರೈಕೆಯ ಅಗತ್ಯ ಇದೆ ಎಂದು ಕೆಲವರು ಕಾಮೆಂಟ್ ಗಳನ್ನು ಮಾಡಿದ್ದು, ಈ ಕಾಮೆಂಟ್ ಗಳು ವೈರಲ್ ಆಗಿವೆ.