ನಿಮ್ಮ ಬುದ್ಧಿ ಮತ್ತು ದೃಷ್ಟಿಗೆ ಚಾಲೆಂಜ್: ಈ ಚಿತ್ರದಲ್ಲಿ ನಿಮಗೆಷ್ಟು ಪ್ರಾಣಿಗಳು ಕಾಣುತ್ತಿವೆ?

Entertainment Featured-Articles News Wonder

ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಚಿತ್ರಗಳು ಇಂದು ನಿನ್ನೆಯದಲ್ಲ. ಇದು ಪ್ರಾಚೀನ ಗ್ರೀಕ್ ಕಾಲದಿಂದಲೂ ಸಹಾ ಅಸ್ತಿತ್ವದಲ್ಲಿವೆ ಎಂದರೆ ಅಚ್ಚರಿ ಉಂಟಾಗಬಹುದು. ಗ್ರೀಕರು ತಮ್ಮ ವಾಸ್ತುಶಿಲ್ಪ ಮತ್ತು ಕಲೆಯಲ್ಲಿ ದೃಷ್ಟಿ ಭ್ರಮೆಗಳನ್ನು ಬಳಸಿದ್ದರು. ಗ್ರೀಕ್ ನಿರ್ಮಾಣಗಳಲ್ಲಿ ಮೇಲ್ಛಾವಣಿಗಳ ಮೇಲೆ ಆರಂಭಿಕ ಹಂತದ ಆಪ್ಟಿಕಲ್ ಇಲ್ಯೂಷನ್ ನ ಅನ್ವಯಿಕೆಗಳನ್ನು ಕಾಣಬಹುದಾಗಿದೆ. ಆ ಸಮಯದಲ್ಲಿ ದೇವಾಲಯಗಳ ಮೇಲಿನ ಛಾವಣಿಗಳನ್ನು ಓರೆಯಾಗಿ ನಿರ್ಮಿಸಲಾಗಿತ್ತು ಆಗ ಜನರು ಅದನ್ನು ನೋಡಿ ವಕ್ರವಾಗಿವೆ ಎಂದುಕೊಳ್ಳುತ್ತಿದ್ದರು.

ದೃಶ್ಯ ಅಥವಾ ದೃಷ್ಟಿ ಭ್ರಮೆಗಳು ನಮ್ಮ ಕಣ್ಣನ್ನು ಮೋಸಗೊಳಿಸುತ್ತವೆ ಮತ್ತು ನಿಮಗೆ ಸುಲಭವಾಗಿ ಕಾಣದ್ದನ್ನು ಸಹಾ ನಿಧಾನವಾಗಿ ನೋಡುವಂತೆ ಮಾಡುವ ಈ ಚಿತ್ರಗಳು ಬುದ್ಧಿಗೆ ಸವಾಲನ್ನು ಒಡ್ಡುತ್ತವೆ. ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳಲ್ಲಿ ಚಿತ್ರಗಳ ಜೋಡಣೆ, ಬಣ್ಣಗಳ ಪರಿಣಾಮ, ಬೆಳಕಿನ ಮೂಲಗಳು ಅಥವಾ ಇತರ ಅಸ್ಥಿರಗಳ ಪ್ರಭಾವಗಳು ಇತ್ಯಾದಿಗಳು ನಮ್ಮ ದೃಷ್ಟಿ ಮತ್ತು ಬುದ್ಧಿಯನ್ನು ತಪ್ಪುದಾರಿಗೆಳೆಯುತ್ತವೆ. ಆಪ್ಟಿಕಲ್ ಇಲ್ಯೂಷನ್ ನ ಚಿತ್ರಗಳು ಬಹು ಬೇಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ.

ಈಗ ಅಂತಹುದೇ ಒಂದು ಹೊಸ ದೃಷ್ಟಿ ಭ್ರಮೆಯ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ‌. ಈ ಚಿತ್ರವು ಮತ್ತೊಮ್ಮೆ ನೆಟ್ಟಿಗರ ಮುಂದೆ ಹೊಸ ಸವಾಲೊಂದನ್ನಿ ಹಾಕಿದೆ. ವೈರಲ್ ಆಗಿರುವ ಫೋಟೋದಲ್ಲಿ ವಿವಿಧ ಪ್ರಾಣಿಗಳು ಒಂದು ಕಡೆ ಇವೆ. ಆದರೆ ಒಂದೇ ಚಿತ್ರದಲ್ಲಿ ಅಡಗಿರುವ ವನ್ಯ ಜೀವಿಗಳು ಯಾವುದು ಎಂದು ಕಂಡುಹಿಡಿಯುವಾಗ ಅದು ನಿಮಗೆ ಗೊಂದಲವನ್ನು ಉಂಟು ಮಾಡುತ್ತದೆ. ಆದರೆ ಇದು ಬಹಳ ಆಸಕ್ತಿದಾಯಕವಾಗಿರುತ್ತದೆ.

ಒಂದು ಚಿತ್ರದಲ್ಲಿ ಇಷ್ಟೊಂದು ಪ್ರಾಣಿಗಳು ಹೇಗೆ ಅಡಗಿರುತ್ತವೆ ಎಂದು ಚಿತ್ರವು ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಆದರೆ ಅದೇ ವೇಳೆ ಈ ಚಿತ್ರ ನಿಮ್ಮ ಬುದ್ಧಿ ಮತ್ತು ದೃಷ್ಟಿ ಎರಡಕ್ಕೂ ಸಹಾ ಕೆಲಸವನ್ನು ನೀಡುತ್ತಿದೆ. ಹಾಗಾದರೆ ಒಮ್ಮೆ ನೀವು ಪ್ರಯತ್ನಿಸಿ ಮತ್ತು ಪ್ರಾಣಿಗಳನ್ನು ಕಂಡುಹಿಡಿಯಿರಿ! ಉತ್ತರ ಬಹಳ ಬೇಗ ಸಿಕ್ಕರೆ ನೀವು ಖಂಡಿತ ಜೀನಿಯಸ್ ಎನ್ನುವುದರಲ್ಲಿ ಎರಡು ಮಾತಿಲ್ಲ ಹಾಗೂ ನಿಮ್ಮ ದೃಷ್ಟಿ ಕೂಡಾ ಬಹಳ ಚುರುಕಾಗಿದೆ ಎನ್ನಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ಫೋಟೋ ನೋಡಿದ ಜನರು ಪ್ರಾಣಿಗಳು ಎಷ್ಟಿವೆ ಎನ್ನುವ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಉತ್ತರವನ್ನು ನೀಡಿದ್ದಾರೆ. ಚಿತ್ರವನ್ನು ಹತ್ತಿರದಿಂದ ಗಮನ ಇಟ್ಟು ನೋಡಿದ ಮೇಲೆ ಚಿತ್ರದಲ್ಲಿ ಆನೆ, ಕತ್ತೆ, ನಾಯಿ, ಬೆಕ್ಕು, ಇಲಿ, ಹಾವು ಮತ್ತು ಮೀನು ಇದೆ ಎಂದು ಕಾಣುತ್ತದೆ. ಆದರೆ ವಾಸ್ತವದಲ್ಲಿ ಈ ಚಿತ್ರವು ಹತ್ತಕ್ಕೂ ಹೆಚ್ಚು ಪ್ರಾಣಿಗಳನ್ನು ಹೊಂದಿದೆ ಎಂದು ಬಳಕೆದಾರರು ಹೇಳುತ್ತಿದ್ದು ಇಲ್ಲಿ ಒಟ್ಟು ಹದಿನಾರು ಪ್ರಾಣಿಗಳಿವೆ ನಿಮಗೆ ಅಚ್ಚರಿಯಾಗಬಹುದು.

Leave a Reply

Your email address will not be published.