ನಿಮ್ಮ ಬುದ್ಧಿವಂತಿಕೆಗೆ ಸವಾಲ್: ರೇಖೆಗಳ ಹಿಂದೆ ಅಡಗಿರುವ ಕ್ಯೂಟ್ ಪ್ರಾಣಿ ಯಾವುದು?? 10 ಸೆಕೆಂಡ್ ಮಾತ್ರವೇ ಸಮಯ

Written by Soma Shekar

Published on:

---Join Our Channel---

ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟುಮಾಡುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ದೃಷ್ಟಿ ಭ್ರಮೆಯನ್ನುಂಟು ಮಾಡುವಂತಹ ವಿವಿಧ ಪ್ರಕಾರಗಳ ಚಿತ್ರಗಳು ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಲಭ್ಯವಾಗುತ್ತಿದೆ. ಇವು ಮನೋವಿಶ್ಲೇಷಣೆಯಲ್ಲಿ ಕೂಡಾ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ ಎನ್ನಲಾಗಿದ್ದು, ಮನುಷ್ಯನ ದೃಷ್ಟಿ ಹಾಗೂ ಬುದ್ಧಿಮತ್ತೆಯನ್ನು ಪರೀಕ್ಷಿಸಲು ಬಹಳ ಪ್ರಮುಖವಾದ ಸಾಧನಗಳು ಕೂಡಾ ಆಗಿವೆ ಎಂದು ಕೆಲವರು ಹೇಳುತ್ತಾರೆ.

ಅಲ್ಲದೇ ಇಂತಹ ಚಿತ್ರಗಳಲ್ಲಿ ಅಡಗಿರುವ ವಿಷಯವನ್ನು ಕಂಡುಕೊಳ್ಳಲು ನಾವು ನಮ್ಮ ಮೆದುಳಿಗೆ ಕೆಲಸವನ್ನು ನೀಡಬೇಕು. ಚಿತ್ರವನ್ನು ವಿವಿಧ ಕೋನಗಳಿಂದ, ಆಯಾಮಗಳಿಂದ ವಿಶ್ಲೇಷಣೆ ಮಾಡುವ ಪ್ರಯತ್ನವನ್ನು ಮಾಡಬೇಕು.‌ಆದ್ದರಿಂದಲೇ ಇದು ಸಹಜವಾಗಿಯೇ ನಮ್ಮ ಬುದ್ಧಿಶಕ್ತಿಯನ್ನು ಸಾಣೆ ಹಿಡಿಯುತ್ತದೆ. ಆದ್ದರಿಂದಲೇ ದೃಷ್ಟಿ ಭ್ರಮೆಯನ್ನು ಉಂಟುಮಾಡುವಂತಹ ಫೋಟೋಗಳು ಮನರಂಜನೆ ಮಾತ್ರವೇ ಅಲ್ಲದೇ ನಮ್ಮ ಜ್ಞಾನ ಹಾಗೂ ಬುದ್ಧಿ ಶಕ್ತಿಯನ್ನು ಹೆಚ್ಚಿಸಲು ಪರೋಕ್ಷವಾಗಿ ನೆರವನ್ನು ನೀಡುತ್ತದೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಒಂದು ಫೋಟೋ ವೈರಲ್ ಆಗಿದೆ. ರಷ್ಯಾದ ಕಲಾಕಾರ ಇಲ್ಜಾ ಕ್ಲೆಮೆನ್ ಕ್ಲೋವ್ ಅವರ ರಚಿಸಿರುವಂತಹ ವಿಶೇಷ ಚಿತ್ರ ಇದಾಗಿದ್ದು,‌ ಇದರಲ್ಲಿ ರೇಖೆಗಳ ನಡುವೆ ಒಂದು ಮುದ್ದಾದ ಪ್ರಾಣಿ ಅಡಗಿದೆ. ಆ ಪ್ರಾಣಿ ಯಾವುದು ಎನ್ನುವುದನ್ನು ಕಂಡುಹಿಡಿಯ ಬೇಕಾಗಿರುವುದು ನೆಟ್ಟಿಗರ ಮುಂದೆ ಇರುವ ಪ್ರಶ್ನೆಯಾಗಿದೆ‌ ಅಥವಾ ಇದೊಂದು ರೀತಿಯಲ್ಲಿ ಸವಾಲು ಎಂದರೂ ತಪ್ಪಾಗುವುದಿಲ್ಲ. ಜಿಗ್ ಜಾಗ್ ಮಾದರಿಯಲ್ಲಿರುವ ರೇಖೆಗಳ ನಡುವೆ ಯಾವ ಪ್ರಾಣಿ ಅಡಗಿದೆ ಎನ್ನುವುದನ್ನು ಬಹಳ ಸುಲಭವಾಗಿ ಕಂಡುಹಿಡಿಯುವುದು ಸಾಧ್ಯವಿಲ್ಲ.

ಆದರೆ ನಮ್ಮ ಬುದ್ಧಿಗೆ ಹಾಗೂ ದೃಷ್ಟಿಗೆ ಸ್ವಲ್ಪ ಕೆಲಸವನ್ನು ನೀಡಿದರೆ, ಈ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದು ಎನ್ನುವುದನ್ನು ಪತ್ತೆ ಹಚ್ಚುವುದಕ್ಕೆ ಖಂಡಿತ ಕಷ್ಟವಾಗುವುದಿಲ್ಲ. ಆದರೆ ಇಲ್ಲಿ ಒಂದು ಷರತ್ತನ್ನೂ ವಿಧಿಸಲಾಗಿದೆ, ಅದೇನೆಂದರೆ ದೃಷ್ಟಿ ಭ್ರಮೆಯನ್ನುಂಟು ಮಾಡುತ್ತಿರುವ ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಕೇವಲ ಹತ್ತು ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಆ ರೀತಿ ಕಂಡುಹಿಡಿದರೆ ನಿಮ್ಮ ದೃಷ್ಟಿ ಖಂಡಿತವಾಗಿಯೂ ಚುರುಕಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಅಲ್ಲದೇ ನಿಗದಿತ ಸಮಯದಲ್ಲಿ ನೀವು ಉತ್ತರವನ್ನು ಕಂಡುಕೊಂಡರೆ ನಿಮಗೆ ಸರಾಸರಿಗಿಂತ ಹೆಚ್ಚಿನ ಬುದ್ಧಿಮತ್ತೆ ಇದೆ ಎಂದು ನೀವು ಅರ್ಥ ಮಾಡಿಕೊಳ್ಳಬಹುದು. ಒಂದು ವೇಳೆ ನಿಮಗೆ ನಿಮ್ಮ‌ ಪ್ರಯತ್ನಗಳ ನಂತರವೂ, ಈ ಚಿತ್ರದಲ್ಲಿ ಅಡಗಿರುವಂತಹ ಇಲ ಪ್ರಾಣಿಯನ್ನು ಕಂಡುಹಿಡಿಯಲು ಸಾಧ್ಯವಾಗದೇ ಹೋದಲ್ಲಿ ಅದಕ್ಕೆ ಉತ್ತರವನ್ನು ಸಹ ನೀಡಲಾಗಿದೆ. ಉತ್ತರದ ಚಿತ್ರವನ್ನು ನೋಡಿದಾಗ ನೀವು ಕಂಡುಹಿಡಿದ ಪ್ರಾಣಿ ಸರಿಯೋ-ತಪ್ಪೋ ಎಂಬುದು ನಿಮಗೆ ಅರ್ಥವಾಗುತ್ತದೆ.

Leave a Comment