ನಿಮ್ಮ ದೃಷ್ಟಿ ಚುರುಕಾಗಿದೆಯೇ? ಹಾಗಾದರೆ ಈ ಚಿತ್ರದಲ್ಲಿ ಎಷ್ಟು ನರಿಗಳಿವೆ? ಉತ್ತರ ತಟ್ಟನೆ ಹೇಳಿದ್ರೆ ನೀವು ಜೀನಿಯಸ್

0 12

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಉಂಟು ಮಾಡುವಂತಹ ಚಿತ್ರಗಳು ಬಹಳಷ್ಟು ವೈರಲ್ ಆಗುತ್ತಿವೆ. ಈ ಚಿತ್ರಗಳು ನೆಟ್ಟಿಗರ ಮುಂದೆ ಹೊಸ ಹೊಸ ಸವಾಲುಗಳನ್ನು ಇಡುತ್ತಿವೆ. ಈ ಚಿತ್ರಗಳು ತಮ್ಮಲ್ಲಿ ಅಡಗಿರುವಂತಹ ರಹಸ್ಯಗಳನ್ನು ಪತ್ತೆ ಹಚ್ಚಲು ಸವಾಲನ್ನು ಒಡ್ಡುತ್ತವೆ. ಈ ಫೋಟೋಗಳು ಬುದ್ಧಿಶಕ್ತಿ ನಮ್ಮ ಬುದ್ಧಿಶಕ್ತಿ ಹಾಗೂ ದೃಷ್ಟಿಯ ಚುರುಕುತನವನ್ನು ಕೂಡಾ ಪರೀಕ್ಷಿಸುವಂತೆ ಕಾಣುತ್ತವೆ. ನೋಡಲು ಸಾಮಾನ್ಯ ಚಿತ್ರದ ಹಾಗೆ ಕಂಡರೂ ಅಲ್ಲೊಂದು ಸವಾಲು ಮಾತ್ರ ಇದ್ದೇ ಇರುತ್ತದೆ‌.

ಅನೇಕರು ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳಲ್ಲಿ ಅಡಗಿರುವ ರಹಸ್ಯಗಳನ್ನು ಕಂಡುಹಿಡಿಯಲು ಸಾಕಷ್ಟು ಆಸಕ್ತಿಯನ್ನು ತೋರಿಸುತ್ತಾರೆ. ಮೊದಲು ಅಂದರೆ ಸಾಮಾಜಿಕ ಜಾಲತಾಣಗಳು, ಇಂಟರ್ ನೆಟ್ ಇಲ್ಲದ ದಿನಗಳಲ್ಲಿ ದಿನ ಪತ್ರಿಕೆಗಳ ವಾರದ ವಿಶೇಷಾಂಕಗಳಲ್ಲಿ ಹಾಗೂ ಮ್ಯಾಗಜಿನ್ ಗಳಲ್ಲಿ ಜನರಿಗೆ ಒಗಟುಗಳನ್ನು, ಚಿತ್ರದಲ್ಲಿ ಅಡಗಿರುವ ರಹಸ್ಯ ಕಂಡುಹಿಡಿಯಿರಿ ಎನ್ನುವ ಪ್ರಶ್ನೆಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಸಾಮಾಜಿಕ ಜಾಲತಾಣಗಳ ವ್ಯಾಪ್ತಿ ಹೆಚ್ಚಾಗಿದೆ.

ಈ ಆಧುನಿಕ ಕಾಲದಲ್ಲಿ ಇಂತಹ ಸಾಕಷ್ಟು ಸವಾಲುಗಳು ತಮಗೆ ಅಂತರ್ಜಾಲದಲ್ಲಿ ಕ್ಷಣ ಮಾತ್ರದಲ್ಲೇ ಲಭ್ಯವಾಗುತ್ತವೆ. ಬಿಡುವಿನ ಸಮಯದಲ್ಲಿ ಉತ್ತಮವಾಗಿ ಸಮಯ ಕಳೆಯಲು, ಬುದ್ಧಿಗೆ, ದೃಷ್ಟಿಗೆ ಕೆಲಸ ನೀಡಲು ಈ ಚಿತ್ರಗಳು ಸಹಾಯವಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ಅಂತಹದೇ ಒಂದು ಫೋಟೋ ವೈರಲ್ ಆಗುತ್ತಾ ಹೊಸ ಸವಾಲನ್ನು ನೆಟ್ಟಿಗರ ಮುಂದೆ ಇಟ್ಟಿದೆ.

ವೈರಲ್ ಆಗಿರುವಂತಹ ಈ ಫೋಟೋವನ್ನು ಗಮನಿಸಿ ನೋಡಿದಾಗ, ಪರ್ವತವೊಂದರ ಮುಂದೆ ನಿಂತು ಕೊಂಡಿರುವ ನರಿಯೊಂದು ಆಗಸದ ಕಡೆಗೆ ನೋಡುತ್ತಾ ಊಳಿಡುತ್ತಿರುವುದನ್ನು ನಾವು ನೋಡಬಹುದು. ಈ ಚಿತ್ರದಲ್ಲಿ ಒಂದೇ ನೋಟಕ್ಕೆ ನಮಗೆ ಕಾಣುವುದು ಒಂದು ಒಂದು ನರಿ ಮಾತ್ರ. ಆದರೆ ಇಲ್ಲಿ ಒಂದಲ್ಲ ಇನ್ನೂ ಹೆಚ್ಚು ನರಿಗಳ ಮುಖಗಳಿವೆ. ಹಾಗಾದರೆ ಅವು ಎಲ್ಲಿವೆ? ಎಷ್ಟು ನರಿಗಳಿವೆ?? ಎಂದು ಕಂಡುಹಿಡಿಯುವುದು ಈ ಚಿತ್ರದ ನಮಗೆ ನೀಡಿರುವ ಸವಾಲಾಗಿದೆ

ಈ ಚಿತ್ರವನ್ನು ನೋಡಿದ ಮೇಲೆ ನೆಟ್ಟಿಗರು ಇದರಲ್ಲಿರುವ ಒಟ್ಟು ನರಿಗಳು ಎಷ್ಟು ಹಾಗೂ ಎಲ್ಲಿವೆ? ಎಂದು ಕಂಡು ಹಿಡಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕೆಲವರಿಗೆ ಬಹಳ ಬೇಗ ಉತ್ತರ ಸಿಕ್ಕಿದೆ. ಆದರೆ ಇನ್ನೂ ಕೆಲವರು ಉತ್ತರ ಸಿಗದೆ ಪರದಾಡುತ್ತಾ, ಉತ್ತರ ನೀಡಿರುವ ಫೋಟೋ ಸಹಾಯ ಪಡೆದಿದ್ದಾರೆ. ಒಟ್ಟಾರೆ ನಿಮ್ಮ ದೃಷ್ಟಿಗೆ ಹಾಗೂ ಬುದ್ಧಿಗೆ ಹೊಸದೊಂದು ಸವಾಲನ್ನು ಈ ಚಿತ್ರ ನೀಡುತ್ತಿದ್ದು, ಈ ಚಿತ್ರದಲ್ಲಿ ಎಷ್ಟು ನರಿಗಳಿವೆ ? ಎನ್ನುವುದನ್ನು ಕಂಡುಹಿಡಿಯಲು ಒಮ್ಮೆ ನೀವು ಪ್ರಯತ್ನ ಮಾಡಿ ನೋಡಿ.

Leave A Reply

Your email address will not be published.