ನಿಮ್ಮ ದೃಷ್ಟಿಗೆ ಇದೋ ಸವಾಲು: ಕಾಡೆಮ್ಮೆಗಳ ನಡುವೆ ಅಡಗಿರುವ ಕರಡಿಯನ್ನು ಪತ್ತೆ ಹಚ್ಚಿ ನೋಡೋಣ..

Entertainment Featured-Articles News

ಸಾಮಾಜಿಕ ಜಾಲತಾಣಗಳು ಎಂದರೆ ಅದು ಮನರಂಜನೆಯ ಮಹಾ ತಾಣ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಮನರಂಜನೆಗೆ ಸಾಕಷ್ಟು ಮೂಲಗಳಿವೆ. ಇತ್ತೀಚಿನ ದಿನಗಳಲ್ಲಿ ಮನರಂಜನೆಯ ವಿಷಯ ಬಂದಾಗ ಸೋಶಿಯಲ್ ಮೀಡಿಯಾಗಳಲ್ಲಿ ನಮ್ಮ ಬುದ್ಧಿಗೆ ಮತ್ತು ದೃಷ್ಟಿಗೆ ಸವಾಲನ್ನು ಹಾಕುವಂತಹ ಫೋಟೋಗಳು ಹೆಚ್ಚು ಗಮನ ಸೆಳೆದಿವೆ‌. ನಮ್ಮ ದೃಷ್ಟಿಯನ್ನು ಏಮಾರಿಸುವ ಚಿತ್ರಗಳು ಹಾಗೂ ಅವುಗಳಲ್ಲಿ ಅಡಗಿರುವ ರಹಸ್ಯವು ಏನೆಂದು ಕಂಡು ಹಿಡಿಯುವುದು ಹೊಸ ಟ್ರೆಂಡ್ ಆಗಿದೆ. ಆದ್ದರಿಂದಲೇ ಅಂತಹ ಚಿತ್ರಗಳು ಬಹು ಬೇಗ ವೈರಲ್ ಆಗುತ್ತಿವೆ.

ಹೀಗೆ ನಮ್ಮ ಕಣ್ಣು ಮತ್ತು ಬುದ್ಧಿಗೆ ಸವಾಲನ್ನು ಹಾಕುವ ಈ ಫೋಟೋಗಳನ್ನು ಆಫ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯ ಚಿತ್ರಗಳೆಂದು ಕರೆಯಲಾಗುತ್ತದೆ. ಈ ಚಿತ್ರಗಳು ನೋಡಲು ಸಾಮಾನ್ಯ ಎಂದು ಕಂಡು ಬಂದರೂ ಸಹಾ, ಅಲ್ಲಿ ಅಸಾಮಾನ್ಯವಾದ ವಿಷಯವೊಂದು ಖಂಡಿತ ಅಡಗಿರುತ್ತದೆ. ಬುದ್ಧಿ ಮತ್ತು ದೃಷ್ಟಿ ಚುರುಕಾಗಿರುವವರು ಇಂತಹ ಚಿತ್ರಗಳಲ್ಲಿ ಅಡಗಿರುವ ರಹಸ್ಯವನ್ನು ಬಹು ಬೇಗ ಕಂಡು ಹಿಡಿದರೆ, ಇನ್ನೂ ಅನೇಕರು ಅದನ್ನು ಕಂಡು ಹಿಡಿಯಲು ಹರ ಸಾಹಸ ಪಡುತ್ತಾರೆ.

ಈಗ ಇದೇ ಸಾಲಿನಲ್ಲಿ ಹೊಸದೊಂದು ಪೋಟೋ ಅಂತರ್ಜಾಲದಲ್ಲಿ ನೆಟ್ಟಿವರ ಗಮನವನ್ನು ಸೆಳೆದಿದೆ. ಈಗ ನೆಟ್ಟಿಗರ ಮುಂದೆ ಬಂದಿರುವ ಈ ಹೊಸ ಫೋಟೋದಲ್ಲಿ ನಾವು ಕಾಡೆಮ್ಮೆಗಳ ಗುಂಪೊಂದು ಹುಲ್ಲು ಗಾವಲಿನಲ್ಲಿ ಹುಲ್ಲು ಮೇಯುತ್ತಿರುವುದನ್ನು ನಾವು ನೋಡಬಹುದು. ಹಾಗಾದರೆ ಇದರಲ್ಲಿ ಏನು ಅಡಗಿದೆ ರಹಸ್ಯ ಎಂದರೆ ಖಂಡಿತ ಇಲ್ಲೊಂದು ಸವಾಲು ನಿಮಗಾಗಿ ಕಾದಿದೆ. ಈ ಚಿತ್ರದಲ್ಲಿ ಕೇವಲ ಕಾಡೆಮ್ಮೆಗಳು ಮಾತ್ರ ಇಲ್ಲ, ಅವುಗಳ ನಡುವೆ ಒಂದು ಕರಡಿ ಕೂಡಾ ಇದೆ.

ಹೌದು, ಈ ಚಿತ್ರದಲ್ಲಿ ಕಾಡೆಮ್ಮೆಗಳ ದಂಡಿನಲ್ಲೇ ಒಂದು ಕರಡಿ ಕೂಡಾ ಇದ್ದು, ಅದು ನಮ್ಮ ಕಣ್ಣಿಗೆ ಸುಲಭವಾಗಿ ಕಾಣುತ್ತಿಲ್ಲ. ಕರಡಿಯ ಮೈ ಬಣ್ಣ ಕಾಡೆಮ್ಮೆಗಳ ಬಣ್ಣದ ಜೊತೆಗೆ ಬೆರೆತು ಹೋಗಿದ್ದು, ಕರಡಿಯನ್ನು ಸುಲಭವಾಗಿ ಗುರುತಿಸುವುದು ಸಾಧ್ಯವಾಗುತ್ತಿಲ್ಲ. ಆದರೆ ನಿಧಾನವಾಗಿ ತಾಳ್ಮೆಯಿಂದ ನೋಡುತ್ತಾ, ನಾವು ಚಿತ್ರದ ಕಡೆಗೆ ಸ್ವಲ್ಪ ಗಮನವನ್ನು ನೀಡಿದರೆ ನಮ್ಮ ಕಣ್ಣಿಗೆ ಈ ಚಿತ್ರದಲ್ಲಿ ಅಡಗಿರುವ ಕರಡಿಯು ಕಾಣುತ್ತದೆ.

ಹಾಗಾದರೆ ಇನ್ನೇಕೆ ತಡ? ನೀವು ಸಹಾ ನಿಮ್ಮ ಕಣ್ಣು ಮತ್ತು ಬುದ್ಧಿಗೆ ಕೆಲಸವನ್ನು ನೀಡಿ, ಕಾಡೆಮ್ಮೆಗಳ ನಡುವೆ ಅಡಗಿರುವ ಕರಡಿಯನ್ನು ಪತ್ತೆ ಮಾಡಿ. ಒಂದು ವೇಳೆ ನಿಮಗೆ ಎಷ್ಟೇ ಪ್ರಯತ್ನ ಮಾಡಿದರೂ ಸಹಾ ಕರಡಿ ಕಾಣಲಿಲ್ಲ ಎಂದರೆ ಮಾತ್ರ ಉತ್ತರದ ಚಿತ್ರವನ್ನು ನೋಡಿ. ಕೆಲವರು ನೆಟ್ಟಿಗರು ಈ ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಗುರುತಿಸುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದರೆ, ಇನ್ನೂ ಕೆಲವರು ಅದನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ.

Leave a Reply

Your email address will not be published.