ನಿಮ್ಮ ಕಣ್ಣಿಗೆ ಪರೀಕ್ಷೆ: ಈ ಫೋಟೋದಲ್ಲಿ ಅಡಗಿರುವ ಸಂಖ್ಯೆ ಹೇಳಬಲ್ಲಿರಾ? 99% ಜನ ಇದ್ರಲ್ಲಿ ಫೇಲ್!!

Entertainment Featured-Articles News

ನೀವು ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆ ಬಗ್ಗೆ ಕೇಳಿರಬಹುದು. ಇವುಗಳ ಇತಿಹಾಸ ತುಂಬಾ ಹಳೆಯದು, ಈ ದೃಷ್ಟಿ ಭ್ರಮೆ ಯಲ್ಲಿ ನಮ್ಮ ಕಣ್ಣಿಗೆ ಕಾಣುವುದು ಒಂದು ಆದರೆ ವಾಸ್ತವವಾಗಿ ಅಲ್ಲಿ ಇರುವುದು ಮತ್ತೊಂದು. ಆದ್ರೆ ಈ ಆಪ್ಟಿಕಲ್ ಇಲ್ಯೂಷನ್ ನಮ್ಮ ಕಣ್ಣು ಎಷ್ಟು ಚುರುಕಾಗಿದೆ, ಮೆದುಳು ಎಷ್ಟು ವೇಗವಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಪರೀಕ್ಷೆ ಮಾಡುವುದು ಸಹಾ ಸಹಜ. ಆಫ್ಟಿಕಲ್ ಇಲ್ಯೂಷನ್ ನಲ್ಲಿ ಅಡಗಿರುವ ರಹಸ್ಯವನ್ನು ಬೇಧಿಸುವುದು ಅಷ್ಟು ಸುಲಭವಾದ ಕಾರ್ಯ ಖಂಡಿತ ಎಲ್ಲ ಅನ್ನುವುದು ಸಹಾ ನಿಜ. ಇದಕ್ಕೆ ತಾಳ್ಮೆ ಅತ್ಯಗತ್ಯ.

ಆಪ್ಟಿಕಲ್ ಇಲ್ಯೂಷನ್ ಬೇಧಿಸಲು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ ಹಾಗೂ ಕೆಲವು ಆಲೋಚನೆಗಳನ್ನು ಮಾಡಲಾಗುತ್ತದೆ. ಆಪ್ಟಿಕಲ್ ಇಲ್ಯೂಷನ್ ನಲ್ಲಿ ಸಂಖ್ಯೆಗಳು ಗುರುತಿಸುವ ಫೋಟೋಗಳು ಕೂಡಾ ಇರುತ್ತವೆ. ಆ ಫೋಟೋಗಳಲ್ಲಿ ಅಡಗಿರುವ ಸಂಖ್ಯೆಯನ್ನು ಕಂಡು ಹಿಡಿಯಬೇಕಾದರೆ ಆ ಚಿತ್ರವನ್ನು ಒಂದೇ ಸಮನೆ ದೀರ್ಘವಾಗಿ ನೋಡಬೇಕಾಗುತ್ತದೆ. ಪ್ರಸ್ತುತ ಇಂತಹ ಒಂದು ಸಂಖ್ಯೆ ಗುರುತಿಸುವ ಆಪ್ಟಿಕಲ್ ಇಲ್ಯೂಷನ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗುತ್ತಿದೆ.

ಈ ವೈರಲ್ ಫೋಟೋ ಮೂಲಕ ನೀವು ನಿಮ್ಮ ಕಣ್ಣಿನ ಪರೀಕ್ಷೆಯನ್ನು ಮಾಡಬಹುದು. ವಾಸ್ತವವಾಗಿ ಈ ಫೋಟೋದಲ್ಲಿ ಕೆಲವು ಸಂಖ್ಯೆಗಳು ಅಡಗಿವೆ. ಆ ಸಂಖ್ಯೆಗಳು ಯಾವುವು? ಎನ್ನುವುದನ್ನು ಗುರುತಿಸುವುದು ಸ್ವಲ್ಪ ಕಷ್ಟವಾದ ಕೆಲಸವೇ ಆಗಿದೆ. ಈ ಫೋಟೋದಲ್ಲಿ ಸಂಖ್ಯೆಗಳನ್ನು ಒಂದು ಸರ್ಕಲ್ ರೀತಿಯಲ್ಲಿ ಬರೆಯಲಾಗಿದೆ. ವಿಶೇಷ ಎಂದರೆ ಅದರಲ್ಲಿ ಇರುವ ಸಂಖ್ಯೆಗಳನ್ನು ಕೆಲವರು ಮಾತ್ರ ಸರಿಯಾಗಿ ಗುರುತಿಸುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ.

ಇನ್ನು ಕಣ್ಣಿಗೆ ಪರೀಕ್ಷೆ ಒಡ್ಡುವ ಈ ಫೋಟೋವನ್ನು @benonwon ಎನ್ನುವ ಹೆಸರಿನ ಟ್ವಿಟರ್ ಖಾತೆದಾರರು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಶೀರ್ಷಿಕೆಯಲ್ಲಿ ಅವರು ಪ್ರಶ್ನೆ ಮಾಡುತ್ತಾ, ನಿಮಗೆ ಇದರಲ್ಲಿ ಯಾವುದಾದರೂ ಸಂಖ್ಯೆ ಕಾಣುತ್ತಿದೆಯಾ? ಹಾಗಾದರೆ ಆ ಸಂಖ್ಯೆ ಯಾವುದು ಹೇಳಿ ಎಂದಿದ್ದಾರೆ. ಫೋಟೋಗೆ ಸಾವಿರಾರು ಲೈಕ್ ಗಳು ಹರಿದು ಬಂದಿದ್ದರೆ, ಇನ್ನೊಂದು ಕಡೆ ಸುಮಾರು 250 ಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡುವ ಮೂಲಕ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ನೆಟ್ಟಿಗರು ಫೋಟೋ ನೋಡಿದ ಮೇಲೆ ಸರ್ಕಲ್ ನಲ್ಲಿ ಇರುವ ಸಂಖ್ಯೆ ಯಾವುದು ಎಂದು ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಒಬ್ಬ ಟ್ವಿಟರ್ ಬಳಕೆದಾರರು ಇಲ್ಲಿರುವ ಸಂಖ್ಯೆ 3452839 ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು 45283 ಎಂದೂ, ಕೆಲವರು 528 ಎಂದು ಹೀಗೆ ವಿವಿಧ ನಂಬರ್ ಗಳನ್ನು ಕಾಮೆಂಟ್ ಮಾಡಿದ್ದಾರೆ. ಕೆಲವರು ನಮಗೆ ಕೇವಲ 45283 ಮಾತ್ರ ಕಾಣುತ್ತಿದೆ ಎಂದಿದ್ದಾರೆ. ಆದರೆ ಈ ಸರ್ಕಲ್ ನಲ್ಲಿ ಇರುವ ಸಂಖ್ಯೆ ಮಾತ್ರ 3452839 ಆಗಿದೆ. ಆದರೆ ಕೆಲವರು ಮಾತ್ರವೇ ಅದನ್ನು ಗುರುತಿಸಿದ್ದಾರೆ.‌

Leave a Reply

Your email address will not be published. Required fields are marked *