“ನಿಮ್ಮ ಅಹಂ(Ego) ಮನೆಯಲ್ಲೇ ಇಟ್ಟು ಬನ್ನಿ”-ನಟಿ ಸಮಂತಾ ಹೀಗೆ ಹೇಳಿದ್ದಾದ್ರು ಯಾರಿಗೆ? ಏಕೆ?

Entertainment Featured-Articles News Viral Video

ದಕ್ಷಿಣ ಸಿನಿರಂಗದಲ್ಲಿ ಸದ್ಯಕ್ಕೆ ಹಾಟ್ ಟಾಪಿಕ್ ಎಂದರೆ ಅದು ನಟಿ ಸಮಂತಾ ಎನ್ನುವುದರಲ್ಲಿ ಎರಡು ಮಾತಿಲ್ಲ.‌ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ತಮ್ಮ ವೃತ್ತಿಯ ಕಡೆಗೆ ಗಮನವನ್ನು ನೀಡಿದ್ದಾರೆ. ತನ್ನನ್ನು ಅರಸಿ ಬರುತ್ತಿರುವ ಹೊಸ ಹೊಸ ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಸಮಂತಾ ಬ್ಯುಸಿ ಶೆಡ್ಯೂಲ್ ಗಳಲ್ಲಿ ತನ್ನನ್ನು ತಾನು ಸಿಕ್ಕಾಪಟ್ಟೆ ಬ್ಯುಸಿ ಮಾಡಿಕೊಂಡಿದ್ದಾರೆ. ಅದರ ಭಾಗವೇ ಎನ್ನುವಂತೆ ಇತ್ತೀಚಿಗೆ ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ಅಭಿನಯದ ಸಿನಿಮಾದಲ್ಲಿ ಮೊದಲ ಬಾರಿಗೆ ಸಮಂತಾ ಐಟಂ ಸಾಂಗ್ ಮಾಡಿದ್ದಾರೆ.

ಇನ್ನು ಸಮಂತಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ತೆರೆಗೆ ಬರಬೇಕಿದೆ. ಪ್ರಸ್ತುತ ಯಶೋದ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಇದಲ್ಲದೇ ಮುಂದಿನ ದಿನಗಳಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಸಹಾ ಸಮಂತಾ ನಟಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈಗ ಇವೆಲ್ಲವುಗಳ ನಡುವೆ ಸಮಂತಾ ಸ್ವಿಟ್ಜರ್ಲೆಂಡ್‌‌ ನ ಸೌಂದರ್ಯವನ್ನು ಸವಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹೌದು ಸಮಂತಾ ಸ್ವಿಟ್ಜರ್ಲೆಂಡ್‌‌ ನ‌ ಪ್ರವಾಸಕ್ಕೆ ತೆರಳಿದ್ದಾರೆ.‌

ಸಮಂತಾ ಪ್ರವಾಸಕ್ಕೆ ಹೋಗಿದ್ದಾರೆಯೋ ಅಥವಾ ಬೇರೆ ಕೆಲಸದ ಮೇಲೆ ಹೋಗಿದ್ದಾರೆಯೋ ಅಧಿಕೃತ ಮಾಹಿತಿ ಹೊರ ಬಂದಿಲ್ಲವಾದರೂ ಸಹಾ ಸಮಂತಾ ಸ್ವಿಟ್ಜರ್ಲೆಂಡ್‌‌ ನಲ್ಲಿ ಮಾಡುತ್ತಿರುವ ಫೋಟೋ ಶೂಟ್ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಗೆ ಇದು ಖುಷಿಯನ್ನು ನೀಡಿದೆ. ಸ್ವಿಟ್ಜರ್ಲೆಂಡ್‌‌ ನ ರಮಣೀಯ ಮಂಜು ಪರ್ವತಗಳಲ್ಲಿ ಸ್ವಿಂಗ್ ಆಟ ಆಡುತ್ತಾ‌ ಸಮಂತಾ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಮಂಜಿನ ದಾರಿಗಳಲ್ಲಿ ಸ್ಕೇಟಿಂಗ್ ಮಾಡುತ್ತಾ‌ ಸಾಗುತ್ತಿರುವಂತಹ ವೀಡಿಯೋ ಶೇರ್ ಮಾಡಿಕೊಂಡಿರುವ ನಟಿ ಸಮಂತಾ, “ನಿಮ್ಮ ಅಹಂ ಅನ್ನು ಮನೆಯಲ್ಲೇ ಬಿಟ್ಟು ಬನ್ನಿ ಎಂದು ಅವರು ಹೇಳಿದ್ದರು. ಇಷ್ಟು ಸತ್ಯವಾದ ಮಾತು ಹಿಂದೆಂದೂ ಕೇಳಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ. ಸಮಂತಾ ಶೇರ್ ಮಾಡಿಕೊಂಡ ವೀಡಿಯೋ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ನೀಡುತ್ತಾ, ಕಾಮೆಂಟ್ ಗಳನ್ನು ಮಾಡುತ್ತಾ ನಟಿಗೆ ಪ್ರವಾಸ ಎಂಜಾಯ್ ಮಾಡುವಂತೆ ಹೇಳಿದ್ದಾರೆ.

Leave a Reply

Your email address will not be published. Required fields are marked *