ನಿಮ್ಮ‌ ಕಣ್ಣು ಹಾಗೂ ಮೆದುಳಿಗೆ ಸವಾಲು: ಈ ಚಿತ್ರದಲ್ಲಿ ಹಾವು ಎಲ್ಲಿದೆ? 95% ಜನ ಫೇಲಾದ ಟಾಸ್ಕ್!!

0 4

ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆ ಎನ್ನುವುದಕ್ಕೆ ಕೊರತೆ ಖಂಡಿತ ಇಲ್ಲ. ಆದ್ದರಿಂದಲೇ ಪ್ರಸ್ತುತ ದಿನಗಳಲ್ಲಿ ಜನರು ತಮಗೆ ಬಿಡುವಿನ ಸಮಯ ಸಿಕ್ಕಾಗ ಕೂಡಲೇ ತಮ್ಮ ಸ್ಮಾರ್ಟ್ ಫೋನ್ ಗಳ ಸಹಾಯದಿಂದ ಸಾಮಾಜಿಕ ಜಾಲತಾಣಗಳ ಒಳಗೆ ಪ್ರವೇಶ ಮಾಡುತ್ತಾರೆ. ಕೆಲವೊಮ್ಮೆ ಗಂಟೆಗಟ್ಟಲೆ ಅವುಗಳಲ್ಲೇ ಕಳೆದು ಹೋಗಿರುತ್ತಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವ ಆ ಮಟ್ಟಕ್ಕೆ ಇದೆ ಎನ್ನುವುದು ಕೂಡಾ ವಾಸ್ತವದ ವಿಷಯವಾಗಿದೆ. ಮನರಂಜನೆ ಬಯಸುವವರಿಗೆ ಬೇಕಾದ‌ ಭರಪೂರ ಸಾಮಗ್ರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇರಳವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಯ ವಿಷಯ ಬಂದಾಗ ಇಲ್ಲಿ ಹೆಚ್ಚು ಜನರನ್ನು ರಂಜಿಸುವುದು ವೈರಲ್ ವಿಡಿಯೋಗಳು, ಸೆಲೆಬ್ರಿಟಿಗಳ ಫೋಟೋಗಳು, ಸಂಚಲನ ಸೃಷ್ಟಿಸುವಂತಹ ಸುದ್ದಿಗಳು ಹಾಗೂ ಕಣ್ಣು ಮತ್ತು ಮೆದುಳಿಗೆ ಸವಾಲನ್ನು ಹಾಕುವ ಫೋಟೋ ಪಜಲ್ ಗಳು. ಈ ಫೋಟೋ ಪಜಲ್ಸ್ ಎನ್ನುವುದು ವರ್ಷಗಳ ಹಿಂದೆ ವೃತ್ತ ಪತ್ರಿಕೆಗಳು ಹಾಗೂ ಮ್ಯಾಗಜಿನ್ ಗಳ ಪ್ರಮುಖ ಆಕರ್ಷಣೆಯಾಗಿತ್ತು. ಈಗ ಅವೇ ಫೋಟೋ ಪಜಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವಿಜೃಂಭಿಸುತ್ತಿವೆ.

ಫೋಟೋ ಪಜಲ್ ಗಳಲ್ಲಿ ನಮ್ಮ ಕಣ್ಣಿಗೆ ತಕ್ಷಣವೇ ಕಾಣದಂತಹ ರಹಸ್ಯಗಳು ಅಡಗಿರುತ್ತದೆ. ಅದನ್ನು ನೋಡುವ ತಾಳ್ಮೆ ನಮಗಿರಬೇಕು, ಕಣ್ಣು ಚುರುಕಾಗಿರಬೇಕು ಮೆದುಳು ಸಹ ಕಣ್ಣಿಗೆ ಸಾಥ್ ನೀಡಬೇಕು. ಆಗ ಆ ಚಿತ್ರದಲ್ಲಿ ಅಡಗಿರುವ ರಹಸ್ಯವಾದರೂ ಏನು ಎನ್ನುವುದನ್ನು ಕೆಲವೇ ಕ್ಷಣಗಳಲ್ಲಿ ಪತ್ತೆ ಹಚ್ಚುವುದು ಸಾಧ್ಯವಾಗುತ್ತದೆ. ಇನ್ನೂ ಕೆಲವೊಮ್ಮೆ ಸಾಮಾನ್ಯದಂತೆ ಕಂಡ ಫೋಟೋದಲ್ಲಿ ಅಡಗಿರುವ ರಹಸ್ಯ ನಮಗೆ ಹುಡುಕುವುದು ಬಹಳ ಕಷ್ಟವಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪಜಲ್ ಗಳು ವೈರಲ್ ಆದ ಕೂಡಲೇ ನೆಟ್ಟಿಗರು ಅದರಲ್ಲಿರುವ ರಹಸ್ಯವನ್ನು ಅಥವಾ ಆ ಫೋಟೋ ತಮ್ಮ‌‌ ಮುಂದೆ‌ ಇಟ್ಟಿರುವಂತಹ ಸವಾಲನ್ನು ಬಿಡಿಸಲು ಸಜ್ಜಾಗಿ ಬಿಡುತ್ತಾರೆ. ತಮ್ಮ ಕಣ್ಣಿಗೆ ಹಾಗೂ ಬುದ್ಧಿಗೆ ಕೆಲಸವನ್ನು ನೀಡಿ , ಫೋಟೋದಲ್ಲಿ ಅಡಗಿರುವ ರಹಸ್ಯಕ್ಕೆ ಅಥವಾ ಫೋಟೋದಲ್ಲಿ ಅಡಗಿರುವ ಪ್ರಶ್ನೆಗೆ ಉತ್ತರವನ್ನು ಕಂಡು ಹಿಡಿಯುವ ಪ್ರಯತ್ನವನ್ನು ಮಾಡುತ್ತಾರೆ. ತಾವೇನೂ ಕಡಿಮೆಯಿಲ್ಲ ಎನ್ನುವಂತೆ ತಮ್ಮನ್ನು ತಾವು ಆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಈಗ ಅಂತಹದೇ ಒಂದು ಫೋಟೋ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಒಂದು ನದಿ ತೀರದ ಫೋಟೋ ಇದಾಗಿದ್ದು, ಫೋಟೋದಲ್ಲಿ ನಮಗೆ ಹರಿಯುತ್ತಿರುವ ನೀರು ಹಾಗೂ ನದಿಯ ದಂಡೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಕಲ್ಲುಗಳು ಕಾಣುತ್ತದೆ. ಆದರೆ ಈ ಚಿತ್ರದಲ್ಲಿ ಒಂದು ಹಾವು ಕೂಡಾ ಅಡಗಿದೆ.‌ ನಾವು ಫೋಟೋ ನೋಡಿದಾಗ ನಮಗೆ ನೀರು ಮತ್ತು ಕಲ್ಲುಗಳು ಮಾತ್ರವೇ ಕಾಣುತ್ತದೆ,‌ ಹಾವು ಎಲ್ಲಿದೆ ಎಂದು ಕಂಡು ಹಿಡಿಯುವುದು ಒಂದು ಸವಾಲಾಗುತ್ತದೆ.

ಈ ಫೋಟೋದಲ್ಲಿ ನೀರು ಹಾಗೂ ಬಂಡೆಗಳ ಆ ತಾಣದಲ್ಲಿ ಹಾವು ಎಲ್ಲಿದೆ ಎನ್ನುವುದನ್ನು ಹುಡುಕುವ ಪ್ರಯತ್ನಕ್ಕೆ ನೆಟ್ಟಿಗರು ಕೈಹಾಕಿದ್ದಾರೆ. ಕೆಲವರು ಹಾವನ್ನು ಹುಡುಕುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಆದರೆ ಅನೇಕರಿಗೆ ಹಾವನ್ನು ಹುಡುಕುವುದು ಸಾಧ್ಯವಾಗಿಲ್ಲ. ಅಲ್ಲದೇ ಅಲ್ಲಿ ಹಾವು ಇದೆಯೋ ಇಲ್ಲವೋ ಎನ್ನುವ ಅನುಮಾನವನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ಆದರೆ ಅಲ್ಲಿ ಖಂಡಿತ ಹಾವು ಇದೆ. ಹಾಗಿದ್ದರೆ ಇನ್ನೇಕೆ ತಡ, ನೀವು ನಿಮ್ಮ ಕಣ್ಣಿಗೆ ಮತ್ತು ಮೆದುಳಿಗೆ ಕೆಲಸವನ್ನು ನೀಡಿ ಈ ಚಿತ್ರದಲ್ಲಿ ಹಾವು ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿ.

Leave A Reply

Your email address will not be published.