“ನಿಮ್ಮಿಂದ ಸ್ವಲ್ಪ ದೂರ ಹೋಗ್ತಿದ್ದೇನೆ”- ಗೆಳೆಯನ ಭೇಟಿಗಾಗಿ ವಿದೇಶಕ್ಕೆ ಹಾರಿದ್ರಾ ರಶ್ಮಿಕಾ

Written by Soma Shekar

Updated on:

---Join Our Channel---

ಸದ್ಯಕ್ಕಂತೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಿಂದ ಹಿಡಿದು ದಕ್ಷಿಣದ ಸಿನಿಮಾಗಳಲ್ಲಿ ಒಂದರ ನಂತರ ಮತ್ತೊಂದು ಎನ್ನುವ ಹಾಗೆ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಬಾಲಿವುಡ್ ನ ಜನಪ್ರಿಯ ನಿರ್ದೇಶಕರ ಜೊತೆಗೆ ಹೊಸ ಸಿನಿಮಾ ಕುರಿತಾಗಿಯೂ ರಶ್ಮಿಕಾ ಮಾತುಕತೆ ನಡೆಸಿ ಬಂದಿದ್ದಾರೆ ಎನ್ನುವ ವಿಷಯವೊಂದು ಭರ್ಜರಿ ಸುದ್ದಿಯಾಗಿತ್ತು. ಈಗ ಈ ಎಲ್ಲಾ ಬ್ಯುಸಿ ಶೆಡ್ಯೂಲ್ ನ ನಡುವೆಯೇ ರಶ್ಮಿಕಾ ವಿದೇಶಕ್ಕೆ ಹಾರಿರುವ ವಿಷಯವೂ ಎಲ್ಲೆಡೆ ಸುದ್ದಿಯಾಗಿದೆ.

ನಟಿ ರಶ್ಮಿಕಾ ತಾನು ವಿದೇಶಕ್ಕೆ ಹೋಗುತ್ತಿರುವ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೈಯಲ್ಲಿ ಪಾಸ್‌ಪೋರ್ಟ್ ಹಿಡಿದಿರುವ ಫೋಟೋ ವನ್ನು ಶೇರ್ ಮಾಡಿಕೊಂಡಿರುವ ರಶ್ಮಿಕಾ ನೆಟ್ಟಿಗರು ಹಾಗೂ ಅಭಿಮಾನಿಗಳನ್ನು, “ನಾನು ಎಲ್ಲಿಗೆ ಹೋಗುತ್ತಿದ್ದೇನೆ ಊಹಿಸಿ” ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಲ್ಲಿ ರಶ್ಮಿಕಾ ಕುತೂಹಲವನ್ನು ಮೂಡಿಸಿದ್ದಾರೆ.

ರಶ್ಮಿಕಾ ಇದೇ ವೇಳೆ, “ಈ ಬಾರಿ ನಿಮ್ಮಿಂದ ದೂರ ಹೋಗುತ್ತಿದ್ದೇನೆ, ಆದರೆ ಬೇಗ ವಾಪಸ್ಸು ಬರುತ್ತೇನೆ” ಎಂದು ಕೂಡಾ ಬರೆದುಕೊಂಡಿದ್ದಾರೆ. ಇನ್ನು ವರದಿಗಳ ಪ್ರಕಾರ ರಶ್ಮಿಕಾ ಅಮೆರಿಕಾಕ್ಕೆ ಹೊರಟಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಅವರ ಆತ್ಮೀಯ ಹಾಗೂ ಸಹ ನಟ ವಿಜಯ್ ದೇವರಕೊಂಡ ಅಮೆರಿಕಾದಲ್ಲಿ ಲೈಗರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ರಶ್ಮಿಕಾ ವಿಜಯ್ ರನ್ನು ಭೇಟಿಯಾಗಲು ಹೊರಟಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಗೀತ ಗೋವಿಂದಂ ಸಿನಿಮಾ ದಲ್ಲಿ ಜೊತೆಯಾಗಿ ನಟಿಸಿದ ನಂತರ ಅವರು ಬಹಳ ಆತ್ಮೀಯರಾಗಿದ್ದಾರೆ. ಅವರ ಕುರಿತಾಗಿ ಆಗಾಗ ಸಾಕಷ್ಟು ಗಾಸಿಪ್ ಗಳು ಸಹಾ ಹರಿದಾಡುತ್ತಲೇ ಇರುತ್ತದೆ. ಆದರೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಾತ್ರ ನಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳಿ ಸ್ಪಷ್ಟನೆಯನ್ನು ಸಹಾ ನೀಡಿದ್ದಾರೆ.

Leave a Comment