ನಿನ್ನ ರೇಟ್ ಎಷ್ಟೆಂದ ಆ ನಟನ ಅಭಿಮಾನಿಗೆ ಚಳಿ ಬಿಡಿಸುವಂತೆ ಉತ್ತರ ನೀಡಿದ ಅನಸೂಯ: ದಿಗ್ಭ್ರಮೆಗೊಂಡ ನೆಟ್ಟಿಗರು

Featured-Articles Entertainment Movies News

ನಟ ವಿಜಯ ದೇವರಕೊಂಡ ಮತ್ತು ಟಾಲಿವುಡ್ ನಟಿ ಮತ್ತು ಸ್ಟಾರ್ ನಿರೂಪಕಿ ಅನಸೂಯಾ ನಡುವಿನ ಶೀತಲ ಸಮರ ವರ್ಷಗಳಿಂದ ನಡೆಯುತ್ತಿದೆ. ಆದರೆ ಈ ವಿಷಯ ಈಗ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ನಟ ವಿಜಯ ದೇವರಕೊಂಡ ಅವರ ಅಭಿಮಾನಿಗಳು ಅನಸೂಯ ಅವರ ಬಗ್ಗೆ ಬಹಳ ಕೆಟ್ಟದಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿರುವ ವಿಚಾರ ಈಗ ದೊಡ್ಡ ಚರ್ಚೆಗೆ ಕಾರಣ ಆಗಿದೆ. ಹೌದು, ವರ್ಷಗಳ ಹಿಂದೆ ಅರ್ಜುನ್ ರೆಡ್ಡಿ ಸಿನಿಮಾದ ವೇಳೆ, ಕಾರ್ಯಕ್ರಮವೊಂದರ ವೇದಿಕೆಯಲ್ಲಿ ವಿಜಯ ದೇವರಕೊಂಡ ಮಹಿಳೆಯರ ಬಗ್ಗೆ ಕೆ ಟ್ಟದಾಗಿ ಮಾತನಾಡಿದ್ದಕ್ಕೆ ಅದೇ ಕಾರ್ಯಕ್ರಮದ ನಿರೂಪಕಿಯಾಗಿದ್ದ ಅನಸೂಯ ಆಕ್ಷೇಪಣೆ ಮಾಡಿದ್ದರು.

ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಘಟನೆ ನಟ ವಿಜಯ ದೇವರಕೊಂಡ ಅವರಿಗೆ ಮುಜುಗರ ಉಂಟು ಮಾಡಿತ್ತು. ಇದಾದ ನಂತರ ಅನುಸೂಯ ವಿಜಯ ದೇವರಕೊಂಡ ಇರುವ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಈಗ ವರ್ಷಗಳನಂತರ ಲೈಗರ್ ಸಿನಿಮಾ ಸೋಲನ್ನು ಕಂಡ ಬೆನ್ನಲ್ಲೇ ನಟಿ ಅನುಸೂಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಡಿದ್ದ ಒಂದು ಟ್ವೀಟ್ ಬಹಳ ದೊಡ್ಡ ವಿ ವಾ ದವನ್ನೇ ಹುಟ್ಟು ಹಾಕಿದೆ. ಅನುಸೂಯ, ಕರ್ಮ ಬರುವುದು ತಡವಾಗಬಹುದು ಆದರೆ ಬಂದೇ ಬರುತ್ತದೆ ಎಂದು ಮಾಡಿದ ಟ್ವೀಟ್ ನೋಡಿ ವಿಜಯ ದೇವರಕೊಂಡ ಅವರ ಅಭಿಮಾನಿಗಳು ಅನುಸೂಯಾ ಮೇಲೆ ಕಿಡಿಕಾರುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಗಳಲ್ಲಿ ಅನುಸೂಯ ಬಗ್ಗೆ ವಿಜಯ್ ದೇವರಕೊಂಡ ಅಭಿಮಾನಿಗಳು ಕೆಳಮಟ್ಟದ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಹೀಗೆ ಕಾಮೆಂಟ್ ಮಾಡಿದವರಲ್ಲಿ ಒಬ್ಬನು, ಅನಸೂಯ ಅವರಿಗೆ ತೀರ ಅಸಭ್ಯವಾಗಿ ಕಾಮೆಂಟ್ ಮಾಡಿ, ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು? ಎಂದು ಕೇಳಿದ್ದಾನೆ. ಈ ಕೆಟ್ಟ ಕಾಮೆಂಟ್ ನೋಡಿದ ಅನಸೂಯಾ ಕೂಡಾ ಬಹಳ ತೀಕ್ಷ್ಣವಾಗಿ ಉತ್ತರವನ್ನು ನೀಡಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾ ಆ ವ್ಯಕ್ತಿಗೆ ಪ್ರತಿಕ್ರಿಯೆ ನೀಡಿರುವ ಅನುಸೂಯ, “ನಿಮಗೆ ಅಕ್ಕ-ತಂಗಿ ಇದ್ದರೆ ಅಥವಾ ಮದುವೆಯಾಗಿದ್ದಾರೆ ನಿಮ್ಮ ಪತ್ನಿಯನ್ನು ಅಥವಾ ಅಕ್ಕ ತಂಗಿಯನ್ನು ಅವರು ಒಂದು ದಿನಕ್ಕೆ ಎಷ್ಟು ತೆಗೆದುಕೊಳ್ಳುತ್ತಾರೆ ಕೇಳಿ” ಎಂದು ಉತ್ತರ ನೀಡಿದ್ದಾರೆ.

ಅನಸೂಯಾ ಮಾಡಿದ ಕಾಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗಿದೆ. ಅಸಭ್ಯವಾಗಿ ಕಾಮೆಂಟ್ ಮಾಡಿದ ವ್ಯಕ್ತಿ ತನ್ನ ಕಾಮೆಂಟನ್ನು ಡಿಲೀಟ್ ಮಾಡಿಕೊಂಡಿದ್ದಾನೆ. ಒಟ್ಟಾರೆ ಅನಸೂಯಾ ಮಾಡಿದ ಒಂದು ಟ್ವೀಟ್ ಟ್ವಿಟರ್ ನಲ್ಲಿ ದೊಡ್ಡಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ. ಅನಸೂಯಾ ಪರವಾಗಿ ಮತ್ತು ವಿ ರೋ ಧವಾಗಿ ಕಾಮೆಂಟ್ ಗಳು ಪ್ರವಾಹದ ಹರಿದುಬರುವಂತೆ ಕಾಣುತ್ತಿದೆ. ನಿರೂಪಕಿಯಾಗಿ ಸಾಕಷ್ಟು ಹೆಸರು ಮಾಡಿರುವ ಅನಸೂಯಾ ಚಿತ್ರರಂಗದಲ್ಲಿಯೂ ದೊಡ್ಡ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇವರು ತನ್ನದೇ ಆದಂತಹ ಪ್ರತ್ಯೇಕ ಸ್ಥಾನ ಹಾಗೂ ವರ್ಚಸ್ಸು ಪಡೆದಿರುವ ನಿರೂಪಕಿ ಮತ್ತು ನಟಿಯಾಗಿದ್ದಾರೆ.

Leave a Reply

Your email address will not be published.