“ನಿನ್ನ ಬಿಟ್ಟು ಇರೋಕಾಗ್ತಿಲ್ಲ” ಅಣ್ಣ ಚಿರುವನ್ನು ಸ್ಮರಿಸಿ ಭಾವುಕರಾದ ನಟ ಧೃವ ಸರ್ಜಾ

Written by Soma Shekar

Updated on:

---Join Our Channel---

ಸ್ಯಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ನಟ ಧೃವ ಸರ್ಜಾ ಅವರು ತಮ್ಮ ಮಾರ್ಟಿನ್ ಸಿನಿಮಾದಲ್ಲಿ ಸಾಕಷ್ಟು ಬ್ಯುಸಿಯಾಗಿರುವ ವಿಚಾರ ಗೊತ್ತಿರುವುದೇ ಆಗಿದೆ. ಎಷ್ಟೇ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದರೂ ಸಹಾ ಮನಸ್ಸಿನಲ್ಲಿ ಅಣ್ಣನನ್ನು ಕಳೆದುಕೊಂಡ ನೋ ವೊಂ ದು ಅವರಿಂದ ಇನ್ನೂ ದೂರವಾಗಿಲ್ಲ ಅನ್ನೋದು ಕೂಡಾ ನಿಜವಾಗಿದೆ. ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ವರ್ಷಕ್ಕೂ ಹೆಚ್ಚಿನ ಸಮಯ ಕಳೆದು ಹೋದರೂ ಸಹಾ ಇನ್ನೂ ಅವರ ಮನಸ್ಸಿನಿಂದ ಆ ನೋವನನ್ನು ಮರೆಯುವುದು ಸಾಧ್ಯವಾಗಿಲ್ಲ ಎನ್ನುವುದು ಸತ್ಯ‌. ಈ ಸಹೋದರರ ನಡುವಿನ ಆತ್ಮೀಯತೆಯ ಬಂಧ ಹೇಗಿತ್ತು ಎನ್ನುವುದು ಅನೇಕ ಸುದ್ದಿಗಳಾಗಿದ್ದವು, ಆ ಮೂಲಕ ಜನರು ಸಹಾ ಅವರ ನಡುವಿನ ಆತ್ಮೀಯತೆ ಕಂಡು ಅಪಾರವಾದ ಮೆಚ್ಚುಗೆಯನ್ನು ನೀಡಿದ್ದರು.

ಅಣ್ಣನ ಅಗಲಿಕೆಯ ನೋವನ್ನು ಮರೆತು ಸಹಜವಾಗಿರಲು, ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುವ ಧೃವ ಸರ್ಜಾ ಇದ್ದಕ್ಕಿದ್ದಂತೆ ಭಾವುಕರಾಗಿದ್ದಾರೆ. ಅಣ್ಣನನ್ನು ನೆನಪಿಸಿಕೊಂಡು ತಮ್ಮ ಮನಸ್ಸಿನ ಭಾವನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುವ ಪ್ರಯತ್ನ ವನ್ನು ಮಾಡಿದ್ದಾರೆ ಧೃವ ಸರ್ಜಾ ಅವರು. ಅವರು ಈ ಪೋಸ್ಟ್ ನೋಡಿ ಅಭಿಮಾನಿಗಳು ಅವರಿಗೆ ಸಮಾಧಾನ ಹೇಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ದಲ್ಲಿ ಧೃವ ಅವರು ತಾನು ಯಾವ ಮಟ್ಟಕ್ಕೆ ತನ್ನಣ್ಣನನ್ನು‌ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಹೌದು ಧೃವ ಮತ್ತು ಚಿರು ನಡುವೆ ಎಂತಹ ಬಾಂಧವ್ಯ ಇತ್ತು ಎನ್ನುವುದು ಸಹಾ ಅನೇಕರಿಗೆ ಗೊತ್ತಿದೆ. ಅವರು ಈ ಹಿಂದೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಾಗ ಅದನ್ನು ಕೇಳಿದಾಗಲೇ ಅವರ ನಡುವಿನ ಬಾಂಧವ್ಯದ ಅರಿವು ಮೂಡಿತ್ತು.

ಅಭಿಮಾನಿಗಳಂತೂ ಆ ಸಹೋದರರ ಬಾಂಧವ್ಯಕ್ಕೆ ಸರಿ ಸಾಟಿ ಯಾವುದು ಇಲ್ಲ ಎನ್ನುತ್ತಾರೆ. ಧೃವ ಹಾಗೂ ಚಿರು ನಡುವಿನ ಬಾಂಧವ್ಯವನ್ನು ಬಿಂಬಿಸುವ ಅದೆಷ್ಟೋ ಫೋಟೋಗಳು ಹಾಗೂ ವೀಡಿಯೋ ಗಳ ಸಹಾ ವೈರಲ್ ಆಗಿದ್ದವು. ಸ್ನೇಹಿತರಂತೆ ಆತ್ಮೀಯರಾಗಿದ್ದ ಅಣ್ಣ ತಮ್ಮ ಅವರು. ಆದ್ದರಿಂದಲೇ ಅಣ್ಣನ ಅಗಲಿಕೆಯ ವೇದನೆಯು ಧೃವ ಅವರಿಂದ ಅಷ್ಟು ಸುಲಭವಾಗಿ ದೂರವಾಗುವುದಿಲ್ಲ ಎನ್ನಬಹುದು.

https://www.instagram.com/tv/CTuFkQsrMro/?utm_medium=copy_link

ಪ್ರಸ್ತುತ ಧೃವ ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಬಾಲ್ಯದಿಂದ ಹಿಡಿದು ಚಿರು ನಿಧನದವರೆಗೂ ಅಣ್ಣ-ತಮ್ಮ ಜೊತೆಯಾಗಿ ಕಳೆದ ಅನೇಕ ಅವಿಸ್ಮರಣೀಯ ಕ್ಷಣಗಳು ಈ ವಿಡಿಯೋದಲ್ಲಿ ಇದ್ದು, ‘ಮಿಸ್​ ಯೂ ಚಿರು. ನಿನ್ನನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ’ ಎಂದು ಧೃವ ಅವರು ಶೀರ್ಷಿಕೆ ನೀಡಿದ್ದಾರೆ. ಅಭಿಮಾನಿಗಳು ಧೃವ ಅವರಿಗೆ ಕಾಮೆಂಟ್ ಗಳ ಮೂಲಕ ಸಮಾಧಾನ ಹೇಳುತ್ತಿದ್ದಾರೆ.

Leave a Comment