ನಿನ್ನ ಬಾಯಿಗೆ… ತಾಳ್ಮೆ ಕಳೆದಕೊಂಡು ಆಡಬಾರದ ಮಾತಾಡಿ ಸೋನು ಮೇಲೆ ಗುಡುಗಿದ ಗುರೂಜಿ

Written by Soma Shekar

Published on:

---Join Our Channel---

ಅತಿ ಹೆಚ್ಚು ಮಾತನಾಡುವ ವಿಚಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿಯಾಗಿರುವ ಆರ್ಯವರ್ಧನ್ ಗುರೂಜಿ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ಈಗ ಇದೇ ವಿಚಾರವಾಗಿ ಒಂದು ದೊಡ್ಡ ಜಗಳವೇ ನಡೆದಿದೆ. ಸೋನು ಶ್ರೀನಿವಾಸ್ ಗೌಡ ಅವರು ಆಡಿರುವ ಮಾತುಗಳಿಗೆ ತಾಳ್ಮೆಯನ್ನು ಕಳೆದುಕೊಂಡ ಆರ್ಯವರ್ಧನ್ ಗುರೂಜಿ ಅವರು ಸೋನು ಮೇಲೆ ವಾಗ್ದಾಳಿ ಯನ್ನು ನಡೆಸಿದ್ದಾರೆ. ಈ ವೇಳೆ ಸೋನು ಸಹಾ ಗುರೂಜಿ ನೀವು ಇಂತಹ ಮಾತುಗಳನ್ನು ಆಡಬಾರದು ಎಂದು ಬುದ್ಧಿ ಮಾತನ್ನು ಸಹಾ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ಇಬ್ಬರೂ ಹೀಗೆ ಜಗಳವಾಡಿದ್ದೇಕೆ, ಗುರೂಜಿ ಸೋನು ಅವರನ್ನು ಅಂದ ಮಾತಾದರೂ ಏನು? ಎನ್ನುವುದನ್ನು ತಿಳಿಯೋಣ ಬನ್ನಿ.

ಊಟದ ವಿಚಾರಕ್ಕೆ ಆರಂಭವಾದ ಮಾತು ಅನಂತರ ಜಗಳದ ರೂಪವನ್ನೇ ಪಡೆದುಕೊಂಡಿದೆ. ಈ ವೇಳೆ ಆರ್ಯವರ್ಧನ್ ಗುರೂಜಿ ಅವರು ಸೋನುಗೆ ಸುಮ್ಮನಿರುವಂತೆ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಆದರೆ ಸೋನು ಮಾತ್ರ ಅವರ ಮಾತನ್ನು ಕೇಳುವ ಮೂಡ್ ನಲ್ಲಿ ಖಂಡಿತ ಇರಲಿಲ್ಲ. ಮಾತನ್ನು ಮುಂದುವರೆಸಿದ್ದ ಸೋನು, ನೀವು ಸಹಾ ಹೀಗೆ ಮಾತನಾಡುತ್ತೀರಿ ಎಂದು ಗುರೂಜಿಗೆ ಹೇಳಿದ್ದಾರೆ. ಹೀಗೆ ಒಂದೇ ಸಮನೆ ಮಾತನಾಡುತ್ತಿದ್ದ ಸೋನು ಮಾತುಗಳನ್ನು ಕೇಳಿ, ಕೇಳಿ ಗುರೂಜಿಯವರು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಅವರು ಬಹಳ ಸಿಟ್ಟಾಗಿದ್ದಾರೆ. ಈ ವೇಳೆ ಅವರು ಆಡಬಾರದ ಮಾತನ್ನೇ ಆಡಿ ಬಿಟ್ಟಿದ್ದಾರೆ.

ಹೌದು, ಸೋನುವಿನ ನಾನ್ ಸ್ಟಾಪ್ ಮಾತುಗಳಿಂದ ಬೇಸತ್ತ ಗುರೂಜಿಯವರು, ನಿನ್ನ ಬಾಯಿಗೆ ಪೊರಕೆ ಇಡಬೇಕಾ? ಸುಮ್ನಿ ಇರ್ತೀಯಾ ? ಎಂದು ಸೋನು ಮೇಲೆ ಗುಡುಗಿದ್ದಾರೆ. ಗುರೂಜಿ ಮಾತು ಕೇಳಿದ ಸೋನು ನೀವು ಈ ರೀತಿ ಮಾತನಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ. ಒಟ್ಟಾರೆ ಸೋನು ಮನೆಯಲ್ಲಿ ಯಾರ ಮಾತನ್ನು ಕೇಳಲ್ಲ, ಹೆಚ್ಚು ಮಾತನಾಡುತ್ತಾರೆ, ಅವರು ಯಾರನ್ನೂ ಗೌರವಿಸುವುದಿಲ್ಲ ಎಂದು ಮನೆ ಮಂದಿ ಎಲ್ಲಾ ದೂರಿದ್ದಾರೆ. ಇದೇ ವಿಚಾರವಾಗಿ ಕಿಚ್ಚ ಸುದೀಪ್ ಅವರು ಸೋನುಗೆ ಬುದ್ಧಿ ಮಾತು ಹೇಳಿದ್ದಾಗಿದೆ. ಆದರೆ ಸೋನು ವರ್ತನೆಯಲ್ಲಿ ಮಾತ್ರ ಯಾವ ಬದಲಾವಣೆ ಆಗಿಲ್ಲ.

Leave a Comment