ನಿದ್ದೆ ಮಾಡಿ ಚಾಂಪಿಯನ್ ಶಿಪ್ ಜೊತೆ ಈಕೆ ಗೆದ್ದಿದ್ದು ಎಷ್ಟು ಲಕ್ಷ ಗೊತ್ತಾ? ನಿದ್ದೆ ಮಾಡಿದ್ರೆ ಇಷ್ಟೊಂದು ಹಣಾನಾ? ಶಾಕಿಂಗ್ !!

Entertainment Featured-Articles News Wonder

ನಿದ್ರೆ ಮಾಡುವುದಕ್ಕೂ ಸಂಬಳ ಕೊಟ್ಟರೆ ಹೇಗಿರುತ್ತದೆ? ಬಹುಶಃ ಇಂತಹುದೊಂದು ಆಲೋಚನೆ ಯಾವುದೋ ಒಂದು ಸಂದರ್ಭದಲ್ಲಿ ನಮ್ಮ ಆಲೋಚನೆಯಲ್ಲಿ ಸಹಾ ಸುಳಿದಿರುತ್ತದೆ. ನಿಜಕ್ಕೂ ನಿದ್ರೆ ಮಾಡುವುದಕ್ಕೂ ಸಂಬಳ ಸಿಗುವಂತಿದ್ದರೆ ಈ ಕೆಲಸಕ್ಕೂ ಸಹಾ ಸ್ಪರ್ಧೆ, ಪೈಪೋಟಿ ಗಳು ಏರ್ಪಡುತ್ತಿತ್ತೋ ಏನೋ ಬಲ್ಲವರು ಯಾರು? ಆದರೆ ಇಂತಹ ಉದ್ಯೋಗಗಳು ಜಗತ್ತಿನಲ್ಲಿ ಬಹಳ ಕಡಿಮೆ ಎಂದು ಹೇಳಬಹುದು. ಇಲ್ಲಿ ಬಹಳ ಕಡಿಮೆ ಎಂದಿದ್ದು ಏಕೆ ಎನ್ನುವುದಾದರೆ ಕೆಲವೊಬ್ಬರು ನಿದ್ರೆ ಮಾಡಿ ಸಹಾ ಹಣವನ್ನು ಗಳಿಸಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಅಚ್ಚರಿ ಎನಿಸಿದರೂ ಸಹಾ ಇದು ವಾಸ್ತವದ ವಿಷಯ ಎಂದರೆ ನೀವು ನಂಬಲೇಬೇಕಾಗಿದೆ.

ಹೌದು, ನಿದ್ರೆ ಮಾಡಿ ಲಕ್ಷ ಲಕ್ಷ ಹಣ ಗೆಲ್ಲಬಹುದು ಎಂದರೆ ಇದೇನಿದು? ಇಂತದ್ದೆಲ್ಲಾ ಉಂಟೇನು? ಎಂದು ನೀವು ಪ್ರಶ್ನೆ ಮಾಡಬಹುದು. ಆದರೆ ಅಂತಹುದೇ ಒಂದು ಘಟನೆಯ ಕುರಿತಾಗಿ, ನಿದ್ರೆ ಮಾಡಿ ಲಕ್ಷಗಳನ್ನು ಗಳಿಸಿದ ಒಬ್ಬ ಮಹಿಳೆಯ ಕುರಿತಾಗಿ ನಾವೀಗ ನಿಮಗೆ ಹೇಳುವುದಕ್ಕೆ ಹೊರಟಿದ್ದೇವೆ. ತ್ರಿಪರ್ಣ ಚಕ್ರವರ್ತಿ ಎಂಬ ಹೆಸರಿನ 26 ವರ್ಷ ವಯಸ್ಸಿನ ಯುವತಿಯು, ವೇಕ್ ಫಿಟ್ ನ ಸ್ಲೀಪ್ ಚಾಂಪಿಯನ್ ಶಿಪ್ ಗೆ ಸ್ಪರ್ಧೆಗೆ ನೋಂದಣಿಯನ್ನು ಮಾಡಿಕೊಂಡಿದ್ದರು. ದೇಶದಾದ್ಯಂತ ಒಟ್ಟು 5.5 ಲಕ್ಷ ಜನರು ಈ ಸ್ಪರ್ಧೆಗೆ ನೋಂದಣಿ ಯನ್ನು ಮಾಡಿಸಿಕೊಂಡಿದ್ದರು.

ಆದರೆ ಕಂಪನಿ ಆಯ್ಕೆ ಮಾಡಿದ್ದು ಹದಿನೈದು ಜನರನ್ನು ಮಾತ್ರ. ಆಯ್ಕೆಯಾದ ಹದಿನೈದು ಮಂದಿಯಲ್ಲಿ ನಾಲ್ವರು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಇವರಲ್ಲಿ ನೂರು ದಿನಗಳ ಕಾಲ ಪ್ರತಿ ದಿನ 9 ಗಂಟೆಗಳ ಕಾಲ ಯಾರು ಯಾವುದೇ ಅಡೆ ತಡೆ ಇಲ್ಲದೇ ನಿದ್ರೆ ಮಾಡುತ್ತಾರೆ ಎನ್ನುವುದನ್ನು ಪರೀಕ್ಷೆ ಮಾಡಲಾಗಿತ್ತು ಎನ್ನಲಾಗಿದೆ. ಹೀಗೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ನಾಲ್ವರಲ್ಲಿ ತ್ರಿಪರ್ಣ ಅವರು 95% ದಕ್ಷತೆಯನ್ನು ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿದೆ. ಈ ಆಧಾರದ ಮೇಲೆ ವೇಕ್ ಫಿಟ್ ಸಂಸ್ಥೆ ತ್ರಿಪರ್ಣ ಅವರನ್ನು ಭಾರತದ ಸ್ಲೀಪಿಂಗ್ ಚಾಂಪಿಯನ್ ಎಂದು ಘೋಷಣೆ ಮಾಡಿ, 5 ಲಕ್ಷ ರೂ ಬಹುಮಾನ ನೀಡಿದೆ.

ತ್ರಿಪರ್ಣಾ ಅವರು ಅಮೆರಿಕಾ ಮೂಲದ ಕಂಪನಿಯೊಂದಕ್ಕೆ ಕೆಲಸವನ್ನು ಮಾಡುತ್ತಿದ್ದು, ಅವರು ರಾತ್ರಿ ವೇಳೆ ಕೆಲಸ ಮಾಡಿ ಹಗಲಿನಲ್ಲಿ ನಿದ್ರೆ ಮಾಡುತ್ತಿದ್ದರು. ರಾತ್ರಿ ವೇಳೆ ಮಾಡುತ್ತಿದ್ದ ಕೆಲಸಕ್ಕೆ ವೇತನ ಸಿಕ್ಕಿದೆ, ಆದರೆ ಅದರ ಜೊತೆಗೆ ಅವರು ಹಗಲಿನಲ್ಲಿ ಮಾಡಿದ ಆರಾಮದಾಯಕ ನಿದ್ರೆಗೆ ಸಹಾ ಲಕ್ಷಗಳ ಹಣವನ್ನು ಬಹುಮಾನವಾಗಿ ಪಡೆಸಿದ್ದು, ಸ್ಲೀಪ್ ಚಾಂಪಿಯನ್ ಎನ್ನುವ ಹೆಗ್ಗಳಿಕೆಗೂ ಸಹಾ ಪಾತ್ರವಾಗಿದ್ದಾರೆ. ತ್ರಿಪರ್ಣ ಅವರ ಈ ಸಾಧನೆಗೆ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.