ನಿತ್ಯ ಜೀವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಹಣದ ಕೊರೆತೆಯ ಸಮಸ್ಯೆ ಬಾಧಿಸುವುದಿಲ್ಲ

Entertainment Featured-Articles News ಜೋತಿಷ್ಯ

ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಹೊರತಾಗಿ ಅನೇಕರಿಗೆ ತಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಆರ್ಥಿಕ ಭದ್ರತೆಗಳಂತಹ ವಿಷಯಗಳು ಮಾತ್ರ ದೊರೆಯುವುದೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಸಹಾ ಬಹಳಷ್ಟು ಜನರಿಗೆ ಅವರ ಹಣದ ಸಮಸ್ಯೆ ಮಾತ್ರ ದೂರವಾಗದೇ ಅವರನ್ನು ಕಾಡುತ್ತಲೇ ಇರುತ್ತದೆ. ಶ್ರಮವಹಿಸಿ ದುಡಿದು ಹಣವನ್ನು ಗಳಿಸುತ್ತಾರೆ, ಆದರೆ ಅದು ಅವರ ಕೈಯಲ್ಲಿ ಉಳಿಯುವುದಿಲ್ಲ. ಇದರ ಹಿಂದೆ ಅನೇಕ ಕಾರಣಗಳಿರಬಹುದು. ಇಲ್ಲಿ ವಾಸ್ತು ಅಥವಾ ಇನ್ನಾವುದೋ ದೋಷ ಸಹಾ ಇರಬಹುದು. ಆದರೆ ಜನರಿಗೆ ಅದು ಅರ್ಥವಾಗುವುದಿಲ್ಲ.

ಅಂದ ಹಾಗೆ, ಹಣವನ್ನು ಪಡೆಯಲು, ಅದನ್ನು ಉಳಿಸಿಕೊಳ್ಳಲು ಹಾಗೂ ಹಣದ ಸಮಸ್ಯೆಗಳನ್ನು ದೂರ ಮಾಡಲು ಜ್ಯೋತಿಷ್ಯದಲ್ಲಿ ಕೆಲವೊಂದು ಪರಿಹಾರ ಕ್ರಮಗಳನ್ನು ಸೂಚಿಸಲಾಗಿದೆ. ಈ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ಎದುರಾಗಿರುವಂತಹ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಬಹುದು. ಅಲ್ಲದೇ, ನೀವು ನಿಮ್ಮ ಖರ್ಚುಗಳನ್ನು ತೂಗಿಸಿಕೊಂಡು, ಅದರ ಜೊತೆಗೆ ಉಳಿತಾಯವನ್ನು ಮಾಡಬಹುದು. ಹಾಗಾದರೆ ಆ ಕ್ರಮಗಳೇನು ತಿಳಿಯೋಣ ಬನ್ನಿ.

ಶಿವಲಿಂಗಕ್ಕೆ ಜಲಾಭಿಷೇಕ : ಲಯ ಕರ್ತನಾದ ಮಹಾ ಶಿವನನ್ನು ಮೆಚ್ಚಿಸುವುದು ಸುಲಭವಲ್ಲ ಎಂದು ಹೇಳಲಾಗುತ್ತದೆ. ಆದರೆ ಯಾರಾದರೂ ಮಹಾ ಶಿವನನ್ನು ಭಕ್ತಿಯಿಂದ ಮೆಚ್ಚಿಸಿದರೆ ಹಣ ಮತ್ತು ಇತರ ತೊಂದರೆಗಳು ದೂರವಾಗುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ನೀವು ಶಿವನನ್ನು ಮೆಚ್ಚಿಸಿ ಸಂಪತ್ತನ್ನು ಪಡೆಯಲು ಬಯಸಿದರೆ, ಪ್ರತಿದಿನ ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡಿ. ಅಲ್ಲದೇ, ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವ ಪತ್ರೆ ಮತ್ತು ಹಾಲನ್ನು ಸಮರ್ಪಿಸಿ ಶಿವನ ಆರಾಧನೆ ಮಾಡಿ.

ದೇವಸ್ಥಾನದಲ್ಲಿ ದೀಪ : ನೀವು ಸಂಪತ್ತಿನ ದೇವಿಯಾದ ಮಹಾಲಕ್ಷ್ಮಿ ಮತ್ತು ವಿಘ್ನ‌ ನಿವಾರಕನಾದ ಶ್ರೀ ಗಣೇಶನನ್ನು ಅನಂತರವಾದ ಭಕ್ತಿಯಿಂದ ಪೂಜಿಸಿದರೆ, ನಿಮ್ಮನ್ನು ಹಣದ ಸಮಸ್ಯೆ ಬಾಧಿಸುವುದಿಲ್ಲ. ದೇವಿ ಮಹಾಲಕ್ಷ್ಮಿಯನ್ನು ಸಂಪತ್ತಿನ ದೇವತೆಯಾಗಿದ್ದು, ಹಣ ಗಳಿಸಲು ನೀವು ದೇವಿಯ ಮುಂದೆ ದೀಪವನ್ನು ಬೆಳಗಿಸಬಹುದು. ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಪ್ರತಿ ದಿನ ಸಂಜೆ ಲಕ್ಷ್ಮಿ ದೇವಿಯ ಮತ್ತು ಭಗವಾನ್ ಗಣೇಶನ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಗುರುವಾರ ಉಪವಾಸ ಮಾಡಿ : ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನೀವು ಉಪವಾಸವನ್ನು ಸಹಾ ಮಾಡಬಹುದು. ಶಾಸ್ತ್ರಗಳ ಪ್ರಕಾರ, ಗುರುವಾರ ಉಪವಾಸವನ್ನು ಆಚರಿಸುವ ಮೂಲಕ ಲಕ್ಷ್ಮಿ ದೇವಿಯ ಅನುಗ್ರಹವನ್ನು ನೀವು ಪಡೆಯಬಹುದು. ಈ ದಿನವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ ಮತ್ತು ಶ್ರೀ ಮಹಾವಿಷ್ಣುವಿನ ಪೂಜೆಯಿಂದ ನೀವು ಆತನನ್ನು ಮಾತ್ರವಲ್ಲದೇ ಶ್ರೀ ಲಕ್ಷ್ಮಿ ದೇವಿಯನ್ನು ಸಹಾ ಮೆಚ್ಚಿಸಬಹುದಾಗಿದೆ.

ಮನೆ ಶುಚಿಗೊಳಿಸುವಿಕೆ: ಮನೆಯ ಶುಚಿತ್ವದ ಬಗ್ಗೆ ಕಾಳಜಿ ವಹಿಸದಂತಹ ಮನೆಗಳಲ್ಲಿ ಮಾತೆ ಮಹಾ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ ಎಂದು ನಂಬಲಾಗಿದೆ. ಅಂತಹ ಮನೆಗಳ ಸದಸ್ಯರ ಮೇಲೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ನೀವು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸುವುದೇ ಆದಲ್ಲಿ ನಿಮ್ಮ ಮನೆಯ ಶುಚಿತ್ವದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿ ಮತ್ತು ಪ್ರತಿದಿನ ಇದು ನಿಮ್ಮ ಅಭ್ಯಾಸವಾಗಿರಲಿ. ಅಲ್ಲದೇ ಈ ಅಭ್ಯಾಸ ನೀವು ಸದಾ ಆರೋಗ್ಯವಾಗಿರಲು ನೆರವು ನೀಡುತ್ತದೆ.

Leave a Reply

Your email address will not be published.