ನಿಜವಾದ ಹಿಂದೂಗಳಿಗೆ ಇದು ಗೊತ್ತೆಂದು, ಹಿಂದುತ್ವ, ಹಿಂದೂಯಿಸಂ ಒಂದೇ ಅಲ್ಲ ಎಂದು ವ್ಯತ್ಯಾಸ ತಿಳಿಸಿದ ನಟಿ ರಮ್ಯ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನಟಿ ರಮ್ಯಾ ಪ್ರಸ್ತುತ ಸಿನಿಮಾಗಳಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇನ್ನೊಂದು ಕಡೆ ರಾಜಕೀಯದಿಂದಲೂ ಕೂಡಾ ದೂರವುಳಿದಿರುವ ನಟಿ ಸಿನಿಮಾ ಹಾಗೂ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ. ಅದು ಮಾತ್ರವೇ ಅಲ್ಲದೆ ರಮ್ಯಾ ಅವರು ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡು ಕೆಲವೊಂದು ವಿಷಯಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಳ್ಳುತ್ತಾರೆ.

ಸಿನಿಮಾ ಹಾಗೂ ರಾಜಕೀಯದಿಂದ ದೂರ ಉಳಿದಿದ್ದರೂ ಸೋಶಿಯಲ್ ಮೀಡಿಯಾ ಗಳಲ್ಲಿ ಮಾತ್ರ ಬಹಳಷ್ಟು ಆ್ಯಕ್ಟೀವ್ ಆಗಿದ್ದಾರೆ ರಮ್ಯಾ. ಇನ್ನು ಈಗ ರಮ್ಯಾ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಿಂದುತ್ವ ಹಾಗೂ ಹಿಂದೂಯಿಸಂ ಇವುಗಳ ನಡುವಿನ ವ್ಯತ್ಯಾಸ ಏನು? ಎನ್ನುವ ವಿಷಯದ ಕುರಿತಾಗಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ರಮ್ಯಾ ಅವರು ಹಂಚಿಕೊಂಡ ಈ ಪೋಸ್ಟ್ ಗೆ ಬಹಳಷ್ಟು ಜನ ಉತ್ತರವನ್ನು ನೀಡಿದ್ದಾರೆ. ಕೆಲವರು ಅವರ ಆಲೋಚನೆ ಹಾಗೂ ಅಭಿಪ್ರಾಯಗಳಿಗೆ ಬೆಂಬಲ ನೀಡಿದ್ದಾರೆ.

ಕೆಲವರು ನಿಮ್ಮಿಂದ ಪಾಠ ಕಲಿಯುವ ಅಗತ್ಯ ಇಲ್ಲ ಎಂದು ಟೀಕೆಗಳನ್ನು ಸಹಾ ಮಾಡಿದ್ದಾರೆ. ಹಾಗಾದರೆ ನಟಿ ರಮ್ಯಾ ಹಿಂದುತ್ವ ಹಾಗೂ ಹಿಂದೂಯಿಸಂ ಕುರಿತಾಗಿ ಹೇಳಿದ ವಿಚಾರವಾದರೂ ಏನು ಎನ್ನುವುದನ್ನು ತಿಳಿಯೋಣ ಬನ್ನಿ. ರಮ್ಯಾ ಅವರು ತಮ್ಮ ಪೋಸ್ಟ್ ನಲ್ಲಿ “ಹಿಂದುತ್ವ ಮತ್ತು ಹಿಂದುತ್ವ ಒಂದೇ ಅಲ್ಲ. ಹಿಂದೂ ಧರ್ಮ ರಾಜಕೀಯವಲ್ಲ. ಹಿಂದೂಯಿಸಂ ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಪ್ರೀತಿಯನ್ನು ಹೊಂದಿದೆ. ಹಿಂದುತ್ವ ಇದಕ್ಕೆ ವಿರುದ್ಧವಾಗಿದೆ. ನಿಜವಾದ ಹಿಂದೂಗಳಿಗೆ ಇದರ ವ್ಯತ್ಯಾಸ ತಿಳಿಯುತ್ತದೆ” ಎಂದು ಬರೆದುಕೊಂಡಿದ್ದಾರೆ.

ರಮ್ಯಾ ಅವರ ಈ ಪೋಸ್ಟ್ ನೋಡಿದ ಒಂದಷ್ಟು ಜನರು ನೀವು ಹೇಳಿದ ಮಾತು ಅಕ್ಷರಶಃ ಸತ್ಯವಾಗಿದೆ. ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇನ್ನು ಕೆಲವರು ಒಬ್ಬ ನಟಿಯಾಗಿ ನಿಮ್ಮ ಮೇಲೆ ನಮಗೆ ಅಪಾರವಾದ ಗೌರವ ಮತ್ತು ಪ್ರೀತಿ ಇದೆ. ದಯವಿಟ್ಟು ಇಂತಹ ರಾಜಕೀಯದ ಮಾತುಗಳನ್ನು ನಿಲ್ಲಿಸಿ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ರಮ್ಯ ಅವರ ಪೋಸ್ಟ್ ಗೆ ನೂರಾರು ಜನರು ಕಾಮೆಂಟ್ ಮಾಡಿದ್ದಾರೆ.

Leave a Comment