ನಾಳೆ ಮತ್ತೆ ಸೂರ್ಯ ಹುಟ್ಟಿ ಬರುತ್ತಾನೆ, ಜೀವನ ಇನ್ನೂ ಮುಗಿದಿಲ್ಲ: ಜಸ್ಪ್ರೀತ್ ಬೂಮ್ರಾ!!

Entertainment Featured-Articles News Sports

ಐಪಿಎಲ್ 2022 ತನ್ನ ಹದಿನೈದನೇ ಆವೃತ್ತಿಯಲ್ಲಿ ಭರ್ಜರಿ ಪಂದ್ಯಗಳ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಸ್ಸಿಗೆ ಖುಷಿಯನ್ನು ನೀಡಿದೆ. ವಿವಿಧ ತಂಡಗಳನ್ನು ಅಭಿಮಾನಿಸುವ ಅಭಿಮಾನಿಗಳು ಪಂದ್ಯಗಳನ್ನು ನೋಡಿ, ತಮ್ಮ ಅಭಿಮಾನ ಆಟಗಾರರ ಕೌಶಲ್ಯಕ್ಕೆ ಮೆಚ್ಚುಗೆ ನೀಡುತ್ತಿದ್ದಾರೆ. ಇನ್ನು ಆಟದಲ್ಲಿ ಸೋಲು ಗೆಲುವು ಸಾಮಾನ್ಯ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಈ ಬಾರಿ ಐಪಿಎಲ್ ನಲ್ಲಿ ಇನ್ನೂ ಕೂಡಾ ಗೆಲುವಿನ ಖಾತೆಯನ್ನೇ ತೆರೆದಿಲ್ಲ ಮುಂಬೈ ಇಂಡಿಯನ್ಸ್ ತಂಡ. ಸತತವಾಗಿ ಆರು ಸೋಲುಗಳನ್ನು ಎದುರಿಸಿ ಅಂಕಪಟ್ಟಿಯಲ್ಲಿ ಕಡೆಯ ಸ್ಥಾನಕ್ಕೆ ತಲುಪಿದೆ ಮುಂಬೈ ಇಂಡಿಯನ್ಸ್ ತಂಡ.

ಸತತ ಸೋಲುಗಳ ನಡುವೆಯೇ ತಂಡದ ವೇಗಿ ಎನಿಸಿಕೊಂಡಿರುವ ಜಸ್ ಪ್ರಿತ್ ಬೂಮ್ರಾ ಆತ್ಮ ವಿಶ್ವಾಸದ ಮಾತುಗಳನ್ನು ಆಡುವ ಮೂಲಕ ಗಮನ ಸೆಳೆದಿದ್ದಾರೆ. ಜಸ್ ಪ್ರೀತ್ ಬೂಮ್ರಾ ತಮ್ಮ ತಂಡದ ಸೋಲುಗಳ ಬಗ್ಗೆ ಪ್ರತಿಕ್ರಿಯೆಯನ್ನು ನೀಡುತ್ತಾ, ಜೀವನ ಇನ್ನೂ ಮುಗಿದಿಲ್ಲ. ನಾಳೆ ಮತ್ತೆ ಸೂರ್ಯ ಹುಟ್ಟುತ್ತಾನೆ. ಇದು ಕ್ರಿಕೆಟ್, ಒಬ್ಬರು ಗೆಲ್ಲಬೇಕು, ಮತ್ತೊಬ್ಬರು ಸೋಲಬೇಕು ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಗೆಲುವು ಎನ್ನುವುದು ನಮ್ಮ ತಂಡದ ಕೈಯಲ್ಲಿದೆ. ನಾವು ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ತಂಡವು ಮತ್ತೆ ಗೆಲುವಿನ ಹಾದಿಗೆ ಮರಳಲಿದೆ ಎನ್ನುವ ಆತ್ಮ ವಿಶ್ವಾಸದ ಮಾತುಗಳನ್ನು ಅವರು ಆಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಸತತ ಸೋಲುಗಳು ಸಹಜವಾಗಿಯೇ ಆ ತಂಡದ ಅಭಿಮಾನಿಗಳಿಗೆ ನಿರಾಸೆಯನ್ನು ಮೂಡಿಸಿದೆ. ಅಲ್ಲದೇ ಅಭಿಮಾನಿಗಳು ಕೂಡಾ ತಂಡದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವುದು ಸಹಾ ವಾಸ್ತವವಾಗಿದೆ.

Leave a Reply

Your email address will not be published.