ಮನೆಯ ಊಟಕ್ಕೆ ಒಂದು ವಿರಾಮ ನೀಡಿ, ಫಾರ್ ಎ ಚೇಂಜ್ ಎಂದು ರೆಸ್ಟೋರೆಂಟ್ ಗೆ ಊಟಕ್ಕೆ ಹೋಗುವುದು ಕೆಲವರ ಹವ್ಯಾಸ, ಅಲ್ಲದೇ ಸ್ನೇಹಿತರಿಗೆ ಅಥವಾ ಬಂಧು ವರ್ಗದವರಿಗೆ ವಿಶೇಷ ದಿನಗಳಂದು ವಿಶೇಷ ಪಾರ್ಟಿ ನಡೆಸಲೆಂದು ರೆಸ್ಟೋರೆಂಟ್ ಗೆ ಹೋಗುವುದು ಸಾಮಾನ್ಯ. ಈ ರೀತಿ ರೆಸ್ಟೋರೆಂಟ್ ಗಳಿಗೆ ಹೋದಂತಹ ಸಂದರ್ಭದಲ್ಲಿ ಹೆಚ್ಚೆಂದರೆ ಸಾವಿರ ಗಳಲ್ಲಿ ಬಿಲ್ ಬರಬಹುದು. ಆದರೆ ಕೆಲವೊಮ್ಮೆ ಅದನ್ನೇ ಬಿಲ್ ಹೆಚ್ಚಾಯ್ತು ಎಂದು ಅಂದುಕೊಳ್ಳೋದು ಉಂಟು. ಆದರೆ ಸಾವಿರ ಸಾವಿರ ಅಲ್ಲ ಬದಲಾಗಿ ಲಕ್ಷ ಲಕ್ಷ ಬಿಲ್ ಬಂದರೆ ಹೇಗಿರುತ್ತೆ??
ಈ ವಿಷಯ ಕೇಳಿಯೇ ಆಶ್ಚರ್ಯ ಆಗಿರಬಹುದು ಅಲ್ಲವೇ?? ಆದರೆ ಈ ಆಶ್ಚರ್ಯದ ಘಟನೆ ನಿಜ ಎಂದರೆ ನಂಬಲೇಬೇಕು. ಇದೀಗ ಈ ಸುದ್ದಿ ವೈರಲ್ ಆಗಿದ್ದು, ಸುದ್ದಿ ತಿಳಿದ ಜನರು ಅಚ್ಚರಿ ಪಟ್ಟಿದ್ದಾರೆ. ಹಾಗಾದರೆ ಬಂದ ಬಿಲ್ ಎಷ್ಟು? ಏನೀ ಕಥೆ ಎನ್ನುವ ಕುತೂಹಲ ನಿಮಗೆ ಮೂಡಿದ್ದರೆ ಬನ್ನಿ ತಿಳಿಯೋಣ. ಈ ಘಟನೆ ನಡೆದಿರುವುದು ಲಂಡನ್ ನಗರದಲ್ಲಿ. ಇಲ್ಲಿನ ಸುಪ್ರಸಿದ್ಧ ರೆಸ್ಟೋರೆಂಟ್ ಗೆ ನಾಲ್ಕು ಜನ ಸ್ನೇಹಿತರು ಭೇಟಿ ನೀಡಿದ್ದಾರೆ. ನಾಲ್ವರು ಸೇರಿ 22 ವಿವಿಧ ರೀತಿಯ ತಿನಿಸುಗಳ ಆರ್ಡರ್ ಮಾಡಿರುವ ಬಿಲ್ ಸಹಾ ವೈರಲ್ ಆಗಿದೆ.
ವೈರಲ್ ಆದ ಬಿಲ್ ನಲ್ಲಿ ಅವರು ಆರ್ಡರ್ ಮಾಡಿದ ತಿನಿಸುಗಳು ಹಾಗೂ ಅವುಗಳ ಬೆಲೆಯನ್ನು ನೋಡಿ ನೆಟ್ಟಿಗರು ಶಾ ಕ್ ಆಗಿದ್ದಾರೆ. ಇನ್ನೂ ಕೆಲವರು ಅಯ್ಯೋ ಲಂಡನ್ ನಂತಹ ನಗರದಲ್ಲಿ ಇದೆಲ್ಲಾ ಸಾಮಾನ್ಯ ಬಿಡಿ ಎಂದು ಕೂಡಾ ಹೇಳಿದ್ದಾರೆ. ಇನ್ನು ಬಿಲ್ ಎಷ್ಟಾಗಿತ್ತು ಎನ್ನುವುದಾದರೆ ಅದು ಬರೋಬ್ಬರಿ 38 ಲಕ್ಷ ರೂಪಾಯಿಗಳಾಗಿವೆ. ಇನ್ನು ಈ ರೆಸ್ಟೋರೆಂಟ್ ನುಸ್ರೆಟ್ ಗೋಕೀ ಎನ್ನುವ ವಿಶ್ವಪ್ರಸಿದ್ಧ ಶೆಫ್ ಅವರ ರೆಸ್ಟೋರೆಂಟ್ ಆಗಿದೆ. ಅಲ್ಲದೇ ಬಿಲ್ ನಲ್ಲಿ ವೈರೆಟಿ ಫುಡ್ ಐಟಂ ಗಳನ ಹೆಸರುಗಳು ಇವೆ.
ನುಸ್ರೆಟ್ ಗೋಕಿ ಅವರು ರೆಸ್ಟೋರೆಂಟ್ ನಲ್ಲಿ ಸಿದ್ಧಪಡಿಸುವ ವಿಶೇಷ ತಿನಿಸುಗಳು ಇಂಟರ್ನೆಟ್ ನಲ್ಲಿ ಸಹಾ ಸದ್ದು ಮಾಡಿದೆ. ಆದರೆ ಈಗ ಅವರ ರೆಸ್ಟೋರೆಂಟ್ ನ ಬಿಲ್ ನಿಂದಾಗಿ ಅವರ ರೆಸ್ಟೋರೆಂಟ್ ಮತ್ತೊಮ್ಮೆ ಸದ್ದು ಮಾಡಿದೆ. ಇನ್ನು ನುಸ್ರೆಟ್ ಗೋಕಿ ಅವರ ರೆಸ್ಟೋರೆಂಟ್ ನಲ್ಲಿ ನಾಲ್ವರ ಊಟಕ್ಕೆ 38 ಲಕ್ಷ ಬಿಲ್ ಬಂದಿರುವುದನ್ನು ನೋಡಿ ಕೆಲವರು ಸಿಟ್ಟನ್ನು ಹೊರಹಾಕಿದರೆ, ಇನ್ನೂ ಕೆಲವರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.