“ನಾಯಿ, ಬೆಕ್ಕುಗಳ ಜೊತೆಗೆ ಒಂಟಿಯಾಗಿ ಸಾಯಿ” ಎಂದ ನೆಟ್ಟಿಗನಿಗೆ ಸಮಂತಾ ಕೊಟ್ರು ತಲೆ ತಿರುಗೋ ಉತ್ತರ!!

Entertainment Featured-Articles Movies News

ತೆಲುಗು ಸಿನಿ ರಂಗ ಮಾತ್ರವೇ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯ ಬ್ಯೂಟಿ ಎನಿಸಿರುವ ನಟಿ ಸಮಂತಾ, ಸಖತ್ ಸದ್ದು, ಸುದ್ದಿಯಲ್ಲಿರುವ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿನಿಮಾ, ಜಾಹೀರಾತು ವಿಚಾರಗಳಲ್ಲಿ ಮಾತ್ರವೇ ಅಲ್ಲದೇ ಸಮಂತಾ ತಮ್ಮ ವೈಯಕ್ತಿಕ ವಿಚಾರಗಳಿಂದ ಸಹಾ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿರುವ ಸಮಂತಾ ಅಲ್ಲಿ ತಮ್ಮ ಫೋಟೋಗಳು ಹಾಗೂ ವೀಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗ ಸಖತ್ ಖುಷಿಯನ್ನು ನೀಡುತ್ತಾರೆ.

ಕಳೆದ ವರ್ಷ ನಟಿ ಸಮಂತಾ ವಿಚ್ಚೇದನದ ಮೂಲಕ ನಾಗಚೈತನ್ಯ ಅವರಿಂದ ಬೇರ್ಪಟ್ಟಿದ್ದಾರೆ. ಈ ಜೋಡಿಯ ವಿಚ್ಚೇದನ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ, ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ನಟಿಯನ್ನು ಟ್ರೋಲ್ ಮಾಡಿದ್ದು ಉಂಟು. ವಿಚಾರ ಕೋರ್ಟ್ ಮೆಟ್ಟಿಲನ್ನು ಸಹಾ ಏರಿತ್ತು. ಆದರೆ ಅದಾದ ನಂತರ ನಟಿ ಸಮಂತಾ ಮಾತ್ರ ಹಿಂದೆಂದಿಗಿಂತಲೂ ಹೆಚ್ಚು ತಮ್ಮ ವೃತ್ತಿಯಲ್ಲಿ ಬ್ಯುಸಿಯಾಗಿ ಹೋಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ, ಬಹು ಬೇಡಿಕೆಯ ನಟಿಯಾಗಿದ್ದಾರೆ.

ಬಿಡುವಿನ ಸಮಯವನ್ನು ನಟಿ ತಮ್ಮ ಸ್ನೇಹಿತರು ಹಾಗೂ ಮುದ್ದಿನ ಶ್ವಾನ ದೊಂದಿಗೆ ಕಳೆಯುತ್ತಿದ್ದಾರೆ. ಆ ಫೋಟೋಗಳನ್ನು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಅವರು ಹಂಚಿಕೊಳ್ಳುತ್ತಾರೆ. ಈಗ ಸಮಂತಾ ಅವರು ಆಗಾಗ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುವ ಶ್ವಾನದ ಜೊತೆಗಿನ ಫೋಟೋದ ಕುರಿತಾಗಿ ನೆಟ್ಟಿಗನೊಬ್ಬನು ವ್ಯಂಗ್ಯ ಮಾಡಿದ್ದು, ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ನಟಿ ಸಮಂತಾ ಕೂಡಾ ವ್ಯಂಗ್ಯ ಮಾಡಿದವನಿಗೆ ಉತ್ತರವನ್ನು ನೀಡಿದ್ದಾರೆ.

ಹೌದು, ನಟಿ ಸಮಂತಾ ಬಗ್ಗೆ ವ್ಯಂಗ್ಯ ಮಾಡಿದ ವ್ಯಕ್ತಿಯೊಬ್ಬನು ಟ್ವಿಟರ್ ನಲ್ಲಿ, “ಸಮಂತಾ ನಾಯಿ ಬೆಕ್ಕುಗಳ ಜೊತೆ ಒಂಟಿಯಾಗಿ ಸಾಯುವರು” ಎಂದು ಟ್ವೀಟ್ ಮಾಡಿದ್ದಾನೆ. ಈ ಟ್ವೀಟ್ ನೋಡಿದ ನಟಿ ಆತನಿಗೆ ಪ್ರತಿಕ್ರಿಯೆಯನ್ನು ನೀಡಿದ್ದು, ಇದಕ್ಕೆ ಉತ್ತರ ನೀಡಿದ ಸಮಂತಾ, “ನನ್ನನ್ನು ನಾನು ಅದೃಷ್ಟವಂತಳು ಎಂದು ಕೊಳ್ಳುತ್ತೇನೆ.” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ಕೊಟ್ಟ ಕೂಲ್ ಉತ್ತರ ಕಂಡು ನೆಟ್ಟಿಗರು ಸಹಾ ಸಮಂತಾ ನಡೆಯನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published.