ನಾನೇ ಜಯಲಲಿತಾ ಮಗಳೆಂದು ಸಾಬೀತು ಮಾಡುವೆ: ಮೈಸೂರಿನ ಮಹಿಳೆಯ ಸಂಚಲನ ಹೇಳಿಕೆ

0 5

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ದೊಡ್ಡ‌ ಹೆಸರು. ಜಯಲಲಿತಾ ಅವರು ನಿಧನ ಹೊಂದಿ ಐದು ವರ್ಷಗಳಾಗಿದೆ. ಜಯಲಲಿತಾ ನಿಧನ ಹೊಂದಿದ ಎರಡು ವರ್ಷಗಳ ಬಳಿಕ ಬೆಂಗಳೂರಿನ ಅಮೃತ ಎನ್ನುವವರು ತಾನು ಜಯಲಲಿತಾ ಮಗಳು ಎಂದು ಹೇಳಿ ಭಾರೀ ಸಂಚಲನವನ್ನು ಹುಟ್ಟು ಹಾಕಿದ್ದರು. ಆಗ ಅಮೃತಾ ನನ್ನ ತಾಯಿ ಜಯಲಲಿತಾ, ಆಕೆಗೆ ಸಾರ್ವಜನಿಕವಾಗಿ ನನ್ನನ್ನು ಮಗಳು ಎಂದು ಹೇಳುವುದಕ್ಕೆ ಭಯವಿತ್ತು. ನನ್ನನ್ನು ಮಗಳೆಂದು ಹೇಳಿದರೆ ನನಗೆ ತೊಂದರೆಯಾಗುತ್ತದೆ ಎನ್ನುವ ಭಯವಿತ್ತು ಎನ್ನುವ ಕಾರಣಕ್ಕೆ ಅವರು ಅದನ್ನು ಬಹಿರಂಗ ಪಡಿಸಲಿಲ್ಲ ಎಂದಿದ್ದರು.

ಇದಾದ ನಂತರ ಅಮೃತಾ ಹೈಕೋರ್ಟ್ ನಿಂದ ಸುಪ್ರೀಂ ಕೋರ್ಟ್ ವರೆಗೆ ಹೋಗಿದ್ದರು. ಆದರೆ ಸೋಲನ್ನು ಅನುಭವಿಸಬೇಕಾಯಿತು. ಆ ಮೂಲಕ ಅಮೃತ ಅವರ ವಿಷಯ ಕೂಡಾ ನಿಧಾನವಾಗಿ ತೆರೆ ಮರೆಗೆ ಸರಿಯಿತು. ಆದರೆ ಇದೀಗ ಮತ್ತೊಬ್ಬರು ತಾನೇ ಜಯಲಲಿತಾ ಮಗಳು ಎಂದು ಹೇಳುವ ಮೂಲಕ ಈ ವಿಷಯ ಮತ್ತೊಮ್ಮೆ ಸದ್ದು ಮಾಡಿದೆ. ಮೈಸೂರಿನ ಮಹಿಳೆ ಪ್ರೇಮಾ ಎನ್ನುವವರು ಈಗ ತಾನು ಜಯಲಲಿತಾ ಮಗಳು ಎನ್ನುವ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಮೈಸೂರಿನಲ್ಲಿ ಹುಟ್ಟಿ, ಬೆಳೆದು ಇದೀಗ ಚೆನ್ನೈನ ಪಲ್ಲವರಂ ನಲ್ಲಿ ವಾಸಿಸುತ್ತಿರುವ ಪ್ರೇಮಾ ಅವರು ಚೆನ್ನೈನ ಮೆರಿನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದು, ಅನಂತರ ಮಾದ್ಯಮಗಳ ಮುಂದೆ ಮಾತನಾಡುತ್ತಾ ತಾನು ದಿವಂಗತ ಜಯಲಲಿತಾ ಅವರ ಮಗಳು ಎಂದು ಹೇಳುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಈ ವೇಳೆ ಅವರು ಕೆಲವು ಆಸಕ್ತಿಕರ ವಿಚಾರಗಳನ್ನು ಸಹಾ ಹಂಚಿಕೊಂಡಿದ್ದಾರೆ.

ಪ್ರೇಮಾ ಅವರು ತಾನು ಕಳೆದ 30 ವರ್ಷಗಳಿಂದ ಚೆನ್ನೈ ನಲ್ಲಿ ವಾಸ ಮಾಡುತ್ತಿರುವುದಾಗಿ, ಸಮಯ ಬಂದಾಗ ಸೂಕ್ತ ದಾಖಲೆಗಳೊಂದಿಗೆ ತಾನು ಜಯಲಲಿತಾ ಮಗಳು ಎನ್ನುವುದನ್ನು ಸಾಬೀತು ಮಾಡುವುದಾಗಿ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ಅವರನ್ನು ಭೇಟಿಯಾಗಲಿದ್ದೇನೆ. ನನ್ನನ್ನು ಬೆಳೆಸಿದವರು ಬೇರೆಯವರು, ಅವರು ಈಗ ಮೃ ತಪಟ್ಟಿದ್ದಾರೆ. ಜಯಲಲಿತಾ ಅವರು ನನ್ನನ್ನು ಪ್ರೀತಿಯಿಂದ ಬೇಬಿ ಎಂದು ಕರೆಯುತ್ತಿದ್ದರು.

ಜಯಲಲಿತಾ ಅವರು ಅಪೋಲೋ ಆಸ್ಪತ್ರೆಗೆ ದಾಖಲಾಗಿ, ಅವರ ಚಿಕಿತ್ಸೆ ನಡೆಯುವ ಸಂದರ್ಭದಲ್ಲಿಯೂ ನಾನು ಹಿಂದಿನ ಬಾಗಿಲಿನಿಂದ ಹೋಗಿ ಅವರನ್ನು ಭೇಟಿಯಾಗಿದ್ದೆ. ಆಗಲೂ ಅವರು ನನಗೆ ಮುತ್ತು ನೀಡಿದ್ದರು. ನಾನು ಅವರ ಮಗಳೇ ಎನ್ನುವುದನ್ನು ನಾನು ಸಾಬೀತು ಮಾಡುತ್ತೇನೆ ಎಂದು ಪ್ರೇಮಾ ಹೇಳಿದ್ದು, ಮುಂದಿನ ದಿನಗಳಲ್ಲಿ ಅವರು ಹೇಗೆ ಸಾಬೀತು ಮಾಡುವರು ಎನ್ನುವುದರ ಕಡೆಗೆ ಎಲ್ಲರ ಗಮನ ಹರಿದಿದೆ.

Leave A Reply

Your email address will not be published.