ಪ್ರೇಮಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟಿ, ಕೇರಳ ಕುಟ್ಟಿ ಅನುಪಮಾ ಪರಮೇಶ್ವರನ್, ಅದಾದ ನಂತರ ಟಾಲಿವುಡ್ ನಟ ನಿತಿನ್ ಅವರ ನಾಯಕತ್ವದ ತ್ರಿವಿಕ್ರಮ್ ಅವರ ನಿರ್ದೇಶನದ ಅಆ ಸಿನಿಮಾದ ಮೂಲಕ ತೆಲುಗು ಪ್ರೇಕ್ಷಕರ ಮನಸ್ಸನ್ನು ಗೆದ್ದ ಈ ನಟಿ, ಕನ್ನಡದಲ್ಲೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಟಸಾರ್ವಭೌಮ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು, ಕನ್ನಡ ಜನರ ಮನಸ್ಸನ್ನು ಗೆಲ್ಲುವಲ್ಲಿ ಸಹಾ ಯಶಸ್ಸನ್ನು ಪಡೆದುಕೊಂಡಿದ್ದು, ದಕ್ಷಿಣದ ಜನಪ್ರಿಯ ನಟಿಯರಲ್ಲಿ ಒಬ್ಬರೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಪ್ರಸ್ತುತ ತೆಲುಗಿನಲ್ಲಿ ಒಂದರ ನಂತರ ಮತ್ತೊಂದು ಸಿನಿಮಾಗಳಲ್ಲಿ ಆಫರ್ ಗಳನ್ನು ಪಡೆಯುತ್ತಾ ಸಾಗಿರುವ ನಟಿ ಅನುಪಮಾ ಅವರು ತಮ್ಮ ಅಂದ ಹಾಗೂ ಅಭಿನಯದಿಂದಾಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇನ್ನು ಈಗ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಅನುಪಮಾ ತಾನು ಪ್ರೇಮದಲ್ಲಿ ಇರುವುದಾಗಿ ಹೇಳಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಇತ್ತೀಚಿಗೆ ಒಂದು ಯೂಟ್ಯೂಬ್ ಚಾನೆಲ್ ನಲ್ಲಿನ ಸಂದರ್ಶನದಲ್ಲಿ ಮಾತನಾಡುತ್ತಾ ರಿಲೇಶನ್ ಶಿಪ್ ಬಗ್ಗೆ ಆಸಕ್ತಿಕರ ವಿಚಾರಗಳನ್ನು ಅನುಪಮಾ ಹಂಚಿಕೊಂಡಿದ್ದಾರೆ.
ತಾನು ಮದುವೆ ಆಗುವುದೇ ಆದರೆ ಅದು ಪ್ರೇಮ ವಿವಾಹವೇ ಆಗಿರುತ್ತದೆ ಎಂದು ಬಹಳ ನೇರವಾಗಿ ಉತ್ತರವನ್ನು ನೀಡಿದ್ದಾರೆ ಅನುಪಮಾ. ಅವರು ಮಾತನಾಡುತ್ತಾ ನನಗೆ ಪ್ರೇಮ ವಿವಾಹಗಳ ಮೇಲೆ ಒಳ್ಳೆಯ ಅಭಿಪ್ರಾಯವಿದೆ. ಪ್ರೇಮಿಸಿ ವಿವಾಹವಾದ ಜೋಡಿಗಳನ್ನು ನೋಡಿದಾಗ ಮನಸ್ಸಿಗೆ ಒಂದು ಖುಷಿ ಎನಿಸುತ್ತದೆ. ನನಗೂ ಪ್ರೇಮ ವಿವಾಹ ಆಗಬೇಕೆಂದು ಆಸೆ ಇದೆ ಮತ್ತು ಈ ವಿಷಯ ನಮ್ಮ ಮನೆಯವರಿಗೆ ಸಹಾ ತಿಳಿದಿದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ.
ನಾನು ಮದುವೆಯಾದರೆ ಅದು ಖಚಿತವಾಗಿ ಪ್ರೇಮ ವಿವಾಹವೇ ಎಂದ ನಟಿಯನ್ನು ನೀವು ಯಾರನ್ನಾದರೂ ಪ್ರೇಮಿಸುತ್ತಿರುವಿರಾ? ಎಂದು ಕೇಳಿದ ಪ್ರಶ್ನೆಗೆ ನಟಿ ಉತ್ತರ ನೀಡುತ್ತಾ, ನಾನು ಸಿಂಗಲ್ ಅಲ್ಲ ಮಿಂಗಲ್. ಏನು ಹೇಳಬೇಕೋ ನನಗೆ ಅರ್ಥ ಆಗ್ತಿಲ್ಲ ಎನ್ನುವ ಮಾತನ್ನು ಅನುಪಮ ಅವರು ಹೇಳಿದ್ದಾರೆ. ನನ್ನ ರಿಲೇಶನ್ ಸ್ಟೇಟಸ್ ಏನು ಎನ್ನುವುದು ಈಗ ಸದ್ಯಕ್ಕೆ ನನಗೂ ತಿಳಿದಿಲ್ಲ. ನಾನೇನೋ ಪ್ರೇಮದಲ್ಲಿ ಇದ್ದೇನೆ, ಆದರೆ ಇನ್ನೊಂದು ಕಡೆಯವರು ಏನೆಂದುಕೊಂಡಿದ್ದಾರೋ ಗೊತ್ತಿಲ್ಲ.
ಸದ್ಯಕ್ಕೆ ಇದು ಒನ್ ಸೈಡ್ ಲವ್ ಎಂದು ಕೊಳ್ಳಿ ಎಂದಿರುವ ನಟಿ ಅನುಪಮಾ ಪರಮೇಶ್ವರನ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಬಗ್ಗೆ ಆಗಾಗ ಹರಿದಾಡುವ ಮೀಮ್ಸ್ ಗಳನ್ನು ನೋಡಿ ನಗುತ್ತೇನೆ ಅಷ್ಟೇ, ಅದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ತನ್ನ ಬಗ್ಗೆ ಇಷ್ಟೊಂದು ಪ್ರೀತಿ ತೋರಿಸುವ ಅಭಿಮಾನಿಗಳಿಗೆ ಧನ್ಯವಾದಗಳು ಎನ್ನುವ ಮಾತನ್ನು ಸಹಾ ಅವರು ಹೇಳಿದ್ದಾರೆ.