ನಾನು ಯಾರ ಕಣ್ಣಿಗೂ ಕಾಣ್ಸಲ್ಲ, ಕರ್ನಾಟಕ ಬಿಟ್ಟು ಹೋಗ್ತೀನಿ: ನಟಿ ವಿಜಯಲಕ್ಷ್ಮಿ ಹೊಸ ಹೇಳಿಕೆ

Written by Soma Shekar

Published on:

---Join Our Channel---

ನಟಿ ವಿಜಯಲಕ್ಷ್ಮಿ ಅವರು ಹೊಸ ವೀಡಿಯೋ ಒಂದರ ಮೂಲಕ ತಮ್ಮ ಅಭಿಮಾನಿಗಳಿಗೆ ಬಹಳ ಮುಖ್ಯವಾದ ಸಂದೇಶವೊಂದನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿ ಇದ್ದ ವಿಜಯಲಕ್ಷ್ಮಿ ಅವರು ಇದೀಗ ತಾನು ಕರ್ನಾಟಕವನ್ನು ಬಿಟ್ಟು ಹೋಗುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಇನ್ನು ಮುಂದೆ ನಾನು ಯಾರ ಕಣ್ಣಿಗೂ ಸಹಾ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮಾತನ್ನು ಸಹಾ ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.

ವಿಜಯಲಕ್ಷ್ಮಿ ಅವರು ಜನರ ಮುಂದೆ ನನ್ನನ್ನು ಕೆಟ್ಟವಳಂತೆ ಬಿಂಬಿಸುವ ಸಂಚು ನಡೆದಿದೆ. ನನ್ನನ್ನು ವಾಣಿಜ್ಯ ಮಂಡಳಿಗೆ ಕರೆದಿದ್ದು, ಯೋಗೇಶ್ ಅವರ ಅಕೌಂಟ್ ನಲ್ಲಿ ಇರುವ ಹಣವನ್ನು ನನಗೆ ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಸಹಾ ನನಗೆ ಯಾವುದೇ ಹಣವನ್ನು ನೀಡಲಾಗಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ನಿನ್ನೆಯ ದಿನ ಯಾರೋ ಲಯನ್ ಜಯರಾಜ್ ಎನ್ನುವವರು ವೀಡಿಯೋದಲ್ಲಿ ನನ್ನನ್ನು ಬೈಯ್ಯುತ್ತಿದ್ದರು ಎಂದಿದ್ದಾರೆ ವಿಜಯಲಕ್ಷ್ಮಿ.

ಅಲ್ಲದೇ ಇನ್ನೊಂದು ವೀಡಿಯೋದಲ್ಲಿ ಇನ್ನಾರೋ ನನ್ನ ಬಗ್ಗೆ ಅ ಸ ಭ್ಯವಾಗಿ ಮಾತನಾಡುತ್ತಿದ್ದರು ಎಂದು ವಿಜಯಲಕ್ಷ್ಮಿ ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನನ್ನನ್ನು ಕೃತಜ್ಞತೆ ಇಲ್ಲದವಳು ಎನ್ನುವಂತೆ ಬಿಂಬಿಸಲಾಗುತ್ತಿದೆ. ಆಣೆ ಮಾಡಿ ಹೇಳುತ್ತೇನೆ, ಯೋಗೇಶ್ ಖಾತೆಯಿಂದ ನನಗೆ ಯಾವುದೇ ರೀತಿಯ ಹಣವೂ ಸಹಾ ಬಂದಿಲ್ಲ. ಅಲ್ಲದೇ ನಾನು ಅದನ್ನು ತೆಗೆದುಕೊಳ್ಳುವುದೂ ಇಲ್ಲ.

ಯೋಗೇಶ್ ಹಣಕ್ಕಾಗಿಯೇ ನನಗೆ ಕಿರುಕುಳ ನೀಡುತ್ತಿದ್ದಾನೆ ಎನ್ನುವುದು ನಿಮಗೆ ಗೊತ್ತಾಗಿರಬಹುದು, ನನ್ನ ಹೆಸರು ಹೇಳಿ ಜನರಿಂದ ಅವನು ಸಂಗ್ರಹಿಸಿರುವ ಹಣ ನನಗೆ ಬೇಕಾಗಿಲ್ಲ. ನನ್ನ ಖಾತೆಗೆ ಎಷ್ಟೋ ಒಂದಷ್ಟು ಹಣ ಬಂದಿದೆ. ಅದು ನನಗೆ ಸಾಕು, ನನಗೆ ನೆಮ್ಮದಿ ಬೇಕಾಗಿದೆ. ಅಕ್ಕನನ್ನು ಕರೆದುಕೊಂಡು ನಾನು ಎಲ್ಲಾದರೂ ಹೊರಟು ಹೋಗುತ್ತೇನೆ ಎಂದು ಹೇಳಿದ್ದಾರೆ ನಟಿ ವಿಜಯಲಕ್ಷ್ಮಿ ಅವರು. ನಾನು ಏಪ್ರಿಲ್ ನಿಂದ ಕಷ್ಟ ಪಡುತ್ತಿದ್ದು ಬಹಳ ನೋವಾಗಿದೆ.

ಆ ಯೋಗೇಶ್ ಅನ್ನುವವರು ಯಾರೆಂದು ನನಗೆ ಗೊತ್ತಿಲ್ಲ. ವಾಣಿಜ್ಯ ಮಂಡಳಿಯ ಕಡೆಯಿಂದ ಆತನ ವಿಷಯ ಬಂದಿದ್ದು. ಶುಕ್ರವಾರ ನಾನು ವಾಣಿಜ್ಯ ಮಂಡಳಿಗೆ ಹೋದಾಗಲೇ ನನಗೆ ದುಡ್ಡು ಕೊಡಬಹುದಿತ್ತು. ಆದರೆ ಕೊಡಲಿಲ್ಲ, ಯಾಕಿನ್ನು ಕೊಟ್ಟಿಲ್ಲ ತಿಳ್ಕೊಳ್ಳಿ. ಹಣಕ್ಕಾಗಿ ನನಗೆ ಟಾರ್ಚರ್ ಮಾಡ್ತಿದ್ದಾರೆ. ನನಗೆ ಆ ಹಣ ಬೇಡ. ನಾನು ಜನರಿಗೆ ನಿಯತ್ತಾಗಿರ್ತೇನೆ ಎಂದು ವೀಡಿಯೋ ಮಾಡಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ವಿಜಯಲಕ್ಷ್ಮಿ

Leave a Comment