“ನಾನು ಮುಸ್ಲಿಂ ಆದ್ರೆ ಮುಸ್ಲಿಂ ಯುವಕನನ್ನು ಮಾತ್ರ ಮದ್ವೆ ಆಗಲ್ಲ” ನಟಿ ಉರ್ಫಿ ಜಾವೇದ್ ವಿ ವಾ ದಾತ್ಮಕ ಹೇಳಿಕೆ

0 5

ಬಿಗ್ ಬಾಸ್ ಓಟಿಟಿ ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಂಡ ನಟಿ ಉರ್ಫಿ ಜಾವೇದ್ ಬಿಗ್ ಬಾಸ್ ನಂತರ ಟ್ರೋಲ್ ಗಳಿಂದಾಗಿಯೇ ಸಖತ್ ಸದ್ದು ಮಾಡಿದ್ದು ವಾಸ್ತವ. ಅದರಲ್ಲೂ ಉರ್ಫಿ ಧರಿಸುವ ಡ್ರೆಸ್ ಗಳನ್ನು ನೋಡಿದ ಜನರು, ಅಯ್ಯೋ ದೇವ್ರೇ ಇದೆಂತ ಕಾಲ ಬಂತಪ್ಪಾ ಅಂದ್ರೆ, ಇನ್ನೂ ಕೆಲವರು ಮೇಡಂ ನೀವು ಬಟ್ಟೆ ಹಾಕೋದೇ ಬೇಡ ಹಾಗೆ ಇದ್ದು ಬಿಡಿ ಎಂದು ಕೂಡಾ ಕಾಮೆಂಟ್ ಗಳನ್ನು ಮಾಡ್ತಾರೆ. ಕೆಲವೇ ದಿನಗಳ ಹಿಂದೆ ಉರ್ಫಿ ತೊಟ್ಟ ಒಂದು ವಿಚಿತ್ರ ವಿನ್ಯಾಸದ ಡ್ರೆಸ್ ಸಿಕ್ಕಾಪಟ್ಟೆ ವೈರಲ್ ಮತ್ತು ಟ್ರೋಲ್ ಆಗಿತ್ತು. ಈಗ ಉರ್ಫಿ ಬೇರೊಂದು ವಿಷಯಕ್ಕೆ ಸುದ್ದಿ ಆಗಿದ್ದಾರೆ.

ಉರ್ಫಿ ಹೇಳಿಕೆಯೊಂದನ್ನು ನೀಡಿ ತಾನೇ ವಿ ವಾ ದ ವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮದುವೆ ವಿಚಾರದಲ್ಲಿ ಉರ್ಫಿ ಹೇಳಿರುವ ಮಾತುಗಳು ಒಂದು ವರ್ಗದ ಜನರನ್ನು ಕೆರಳಿಸಿದೆ. ಹೌದು, ಉರ್ಫಿ ಜಾವೇದ್ ತಾನು ಎಂದಿಗೂ ಮುಸ್ಲಿಂ ಯುವಕನನ್ನು ಮಾತ್ರ ಮದುವೆ ಆಗೋದಿಲ್ಲ ಎಂದು ಹೇಳಿದ್ದು ಅದಕ್ಕೆ ಕಾರಣವನ್ನು ಸಹಾ ವಿವರಿಸಿದ್ದಾರೆ. ಮುಸ್ಲಿಂ ಪುರುಷರು ಮಹಿಳೆಯರು ಇದೇ ರೀತಿ ಇರಬೇಕು ಅಂತ ಬಯಸ್ತಾರೆ, ಆದರೆ ನನಗೆ ಅದು ಖಂಡಿತ ಸಾಧ್ಯವಿಲ್ಲ. ಈಗಲೇ ನಾನು ಟ್ರೋಲ್ ಆಗಿ ಅವರ ಧರ್ಮ ಹಾಳು ಮಾಡಿದ್ದೀನಿ ಅಂತಿದ್ದಾರೆ.

ನಾನೊಬ್ಬ ಮುಸ್ಲಿಂ ಹುಡುಗಿ, ಆದರೆ ನನಗೆ ಮುಸ್ಲಿಂರಿಂದಲೇ ಬಹುತೇಕ ನೆಗೆಟಿವ್ ಕಾಮೆಂಟ್ ಗಳು ಬರುತ್ತವೆ. ನಾನು ಇಸ್ಲಾಂ ಹೆಸರನ್ನು ಹಾಳು ಮಾಡಿದ್ದೇನೆ ಅಂತಿದ್ದಾರೆ. ಅಲ್ಲದೇ ಅವರು ಮಹಿಳೆಯರು ಹೀಗೇ ಇರಬೇಕು ಅಂತಾರೆ, ತಮ್ಮ ಸಮುದಾಯದಲ್ಲಿನ ಮಹಿಳೆಯರನ್ನು ನಿಯಂತ್ರಿಸುತ್ತಾರೆ. ಇದೇ ಕಾರಣಕ್ಕೆ ನನಗೆ ಇಸ್ಲಾಂ ನಲ್ಲಿ ನಂಬಿಕೆ ಇಲ್ಲ. ಅದಕ್ಕೆ ನನ್ನನ್ನು ಟ್ರೋಲ್ ಮಾಡ್ತಾರೆ, ಅವರು ಬಯಸಿದ ರೀತಿ ನಾನು ಇರೋದಿಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ ಉರ್ಫಿ.

ಇನ್ನು ಬಟ್ಟೆಯ ವಿಚಾರದಲ್ಲಿ ಆಕೆ ನಾನು ಯಾವ ಬಟ್ಡೆ ಹಾಕಿದ್ರು ಜನ ಮಾತಾಡ್ತಾರೆ, ಅದಕ್ಕೆ ನಾನು ಅದರ ಬಗ್ಗೆ ಆಲೋಚನೆ ಮಾಡೋದಿಲ್ಲ. ನನ್ನಲ್ಲಿ ಬಟ್ಟೆ ಗಿಂತ ಹೆಚ್ಚಿನ ವಿಷಯ ಇದೆ, ಆದರೆ ಅದನ್ನು ಯಾರೂ ಗಮನಿಸೋದಿಲ್ಲ. ನನಗೆ ಯಾವ ಬಟ್ಟೆ ಇಷ್ಟಾನೋ ಅದನ್ನೇ ನಾನು ಹಾಕ್ತೀನಿ. ಅದೇ ನನಗೆ ಖುಷಿ ನೀಡುತ್ತೆ ಎಂದು ಉರ್ಫಿ ಹೇಳಿದ್ದಾರೆ. ಅಲ್ಲದೇ ಪಬ್ಲಿಸಿಟಿಗಾಗಿ ನಾನು ಮಾಡೋಲ್ಲ, ಇದು ನನ್ನ ಖುಷಿಗೆ ಎಂದು ಹೇಳಿದ್ದಾರೆ.

Leave A Reply

Your email address will not be published.