ನಾನು ಮಾಗಡಿ ರೋಡಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು, ನಾನು ಭಯಸ್ತನಲ್ಲ!!

Written by Soma Shekar

Updated on:

---Join Our Channel---

ಕನ್ನಡ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಪ್ರಮುಖ ಸುದ್ದಿಯಾಗಿದ್ದಾರೆ. ಅವರು ನೀಡುವ ಹೇಳಿಕೆಗಳು ಬಹಳ ದೊಡ್ಡ ಸುದ್ದಿಯಾಗುತ್ತದೆ. ಅಲ್ಲದೇ ಕೆಲವೊಂದು ಸಂದರ್ಭದಲ್ಲಿ ಅವರು ಆಡುವ ಮಾತುಗಳು ಚರ್ಚೆಯನ್ನು ಕೂಡಾ ಹುಟ್ಟು ಹಾಕುತ್ತದೆ. ಕೆಲವೇ ದಿನಗಳ ಹಿಂದೆ ಅವರು ನೀಡಿದ ಹೇಳಿಕೆಯೊಂದು ಯಾವ ಮಟ್ಟಕ್ಕೆ ರಾಜ್ಯವ್ಯಾಪಿಯಾಗಿ ಸಂಚಲನವನ್ನು ಸೃಷ್ಟಿಸಿತ್ತು ಎನ್ನುವುದನ್ನು ಜನ ಮರೆತಿಲ್ಲ. ಈಗ ಹಂಸಲೇಖ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ನಾನು ಭಯಸ್ತ ಅಲ್ಲ ಎಂದು ಹೇಳಿದ್ದಾರೆ.

ಇಂದು ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಎಸ್. ಜಿ. ಸಿದ್ದರಾಮಯ್ಯ ಅವರ ಆತ್ಮಕಥನ ಯರೇಬೇವು ಬಿಡುಗಡೆ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಧೈರ್ಯ ತುಂಬುವುದಕ್ಕಾಗಿಯೇ ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದಿದ್ದಾರೆ. ಇಂತಹ ಸಭೆಯಲ್ಲಿ ನನಗೆ ಧೈರ್ಯ ತುಂಬಿದ ಎಲ್ಲರಿಗೂ ಸಹಾ ಧನ್ಯವಾದಗಳು ಎನ್ನುವ ಕೃತಜ್ಞತೆಯ ಮಾತುಗಳನ್ನು ಅವರು ಆಡಿದ್ದಾರೆ.

ಇದೇ ವೇಳೆ ಹಂಸಲೇಖ ಅವರು ಮಾತನಾಡುತ್ತಾ, ನೀವು ಕಂಡಂತೆ ನಾನೇನು ಭಯಸ್ತಾ ಅಲ್ಲ, ಮಾಗಡಿ ರೋಡ್ನಲ್ಲಿ ದೊಡ್ಡ ದೊಡ್ಡ ಪೋಲಿ ಆಟವನ್ನು ಆಡಿ ಬಂದವನು, ನನ್ನದೊಂದು ದೊಡ್ಡ ಚರಿತ್ರೆಯೇ ಇದೆ. ನಾನು ಯಾರಿಗೂ ಹೆದರುವುದಿಲ್ಲ. ನನಗೆ ಎಪ್ಪತ್ತು, ತಿನ್ನೋದು ಒಂದೊತ್ತು ಎನ್ನುವ ಮಾತನ್ನು ಅವರು ಹೇಳಿದ್ದಾರೆ. ನನಗೆ ಮೊದಲು ಬೆಂಬಲ ನೀಡಿದವರು ನನ್ನ ಗುರುಗಳಾದ ಎಸ್ ಜಿ ಸಿದ್ದರಾಮಯ್ಯನವರು. ನೀನು ಸುಮ್ಮನೇ ಇರು, ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು.

ನಾಡಿನ ಪ್ರಗತಿಪರ ಚಿಂತಕರನ್ನು ಸೇರಿಸಿ ನನಗೆ ಬೆಂಬಲವನ್ನು ನೀಡಿದರು ಎನ್ನುವ ಮಾತನ್ನು ಹೇಳಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹಂಸಲೇಖ ಅವರು ಪೇಜಾವರ ಶ್ರೀಗಳ ಕುರಿತಾಗಿ ಆಡಿದ ಮಾತು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು, ಅದು ಜನರ ಆ ಕ್ರೋ ಶ ಕ್ಕೆ ಕಾರಣವಾಗಿತ್ತು. ಹಂಸಲೇಖ ಅವರ ಹೇಳಿಕೆಗೆ ಪರ-ವಿರೋಧ ಚರ್ಚೆಗಳು ನಡೆದಿತ್ತು. ಹಂಸಲೇಖ ಅವರ ಮೇಲೆ ದೂರುಗಳು ದಾಖಲಾಗಿದ್ದವು, ಅವರು ಕ್ಷಮಾಪಣೆ ಕೇಳಬೇಕು ಎಂಬ ಕೂಗು ಕೇಳಿ ಬಂದಿತ್ತು. ಅಲ್ಲದೇ ಹಂಸಲೇಖ ಅವರು ಸಹ ವಿಡಿಯೋ ಮೂಲಕ ಕ್ಷಮಾಪಣೆಯನ್ನು ಕೇಳಿದ್ದರು.

Leave a Comment