ನಾನು ಮಹಿಳೆಯರನ್ನು ಮಂಚಕ್ಕೆ ಕರೀತೀನಿ: ಆಮೇಲೆ ಅವರ ಇಷ್ಟ, ನಾಲಗೆ ಹರಿ ಬಿಟ್ಟ ನಟ

Entertainment Featured-Articles News

ಸೆಲೆಬ್ರಿಟಿಗಳು ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಆಡುವ ಮಾತುಗಳು ಮತ್ತು ನೀಡುವ ಹೇಳೆಕೆಗಳು ವಿ ವಾ ದಗಳನ್ನು ಹುಟ್ಟು ಹಾಕುವುದು ಮಾತ್ರವೇ ಅಲ್ಲದೇ, ಅದು ತೀವ್ರವಾದ ಚ ರ್ಚೆ ಹಾಗೂ ವಿಮರ್ಶೆಗಳಿಗೂ ಸಹಾ ಕಾರಣವಾಗಿ ಬಿಡುತ್ತದೆ. ಮಾತಿನ ಭರದಲ್ಲಿ ನಾಲಗೆ ಮೇಲಿನ ನಿಯಂತ್ರಣ ತಪ್ಪಿ ಸೆಲೆಬ್ರಿಟಿಗಳು ಆಡುವ ಮಾತುಗಳು ಅನಂತರ ಸಾರ್ವಜನಿಕರಿಂದಲೂ ಸಹಾ ಟೀಕೆಗೆ ಗುರಿಯಾಗುವುದು, ಇಷ್ಟೆಲ್ಲಾ ಆದ ನಂತರ ಅವರು ಕ್ಷಮಾಪಣೆ ಕೇಳುವುದು ಅಥವಾ ಮಾದ್ಯಮಗಳು ನಮ್ಮ ಮಾತುಗಳನ್ನು ಬೇರೆ ರೀತಿಯಲ್ಲೇ ತಿರುಚಿವೆ ಎಂದು ಹೇಳಿ ಜಾರಿಕೊಳ್ಳುವುದು ನಡೆಯುತ್ತಲೇ ಇರುತ್ತದೆ.

ಪ್ರಸ್ತುತ ಅಂತದ್ದೇ ಒಂದು ವಿ ವಾ ದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಮಲೆಯಾಳಂ ನಟ. ಲೈಂ ಗಿ ಕ ಸಂಬಂಧದ ವಿಚಾರವಾಗಿ ಮಲೆಯಾಳಂ ನಟನು ಆಡಿರುವ ಮಾತಿಗೆ ಇದೀಗ ವ್ಯಾಪಕವಾಗಿ ಸಿಟ್ಟು, ಅಸಮಾಧಾನಗಳು ವ್ಯಕ್ತವಾಗುತ್ತಿವೆ. ತಮಿಳಿನ ಸಿನಿಮಾಗಳಲ್ಲಿ ಈಗಾಗಲೇ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ಮಲೆಯಾಳಂ ನ ನಟ ವಿನಾಯಕನ್ ಮೀ ಟೂ ಅಭಿಯಾನವು ತನಗೆ ಅರ್ಥವಾಗಿಲ್ಲ ಎಂದು ಹೇಳುತ್ತಲೇ ವೇದಿಕೆಯ ಮೇಲೆ ಮನಸೋ ಇಚ್ಛೆ ನಾಲಗೆಯನ್ನು ಹರಿ ಬಿಟ್ಟಿದ್ದಾರೆ.

ಮಲೆಯಾಳಂ ನಟಿ ನವ್ಯಾ ನಾಯರ್ ಸಿನಿಮಾಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ಒರುತಿ ಸಿನಿಮಾದ ಪ್ರಚಾರದ ವೇಳೆ ಮಾತನಾಡುತ್ತಿದ್ದ ವಿನಾಯಕನ್, ನಾನು ಹತ್ತು ಜನ ಮಹಿಳೆಯರೊಂದಿಗೆ ಲೈಂ ಗಿ ಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುವಿರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಅವರು ಓಕೆ ಅಂದರೆ ಓಕೆ. ಇಲ್ಲವಾದರೆ ನಾನು ಅದನ್ನು ಅಲ್ಲೇ ಬಿಟ್ಟು ಬಿಡುತ್ತೇನೆ. ಆ ವಿಚಾರವಾಗಿ ನಾನು ಅವರಿಗೆ ಬಲವಂತವನ್ನು ಮಾಡುವುದಿಲ್ಲ.

ಮಹಿಳೆಗೆ ಲೈಂ ಗಿ ಕತೆಯ ಬಗ್ಗೆ ಕೇಳುವುದು ಮೀ ಟೂ ಎನ್ನುವುದಾದರೆ , ನಾನು ಅದನ್ನು ಮುಂದುವರೆಸುತ್ತೇನೆ ಎಂದು ಅವರು ನಿರಾತಂಕವಾಗಿ ಹೇಳಿ ಮುಗಿಸಿದ್ದಾರೆ. ವಿನಾಯಕನ್ ಆಡಿದ ಮಾತುಗಳಿಗೆ ಮಲೆಯಾಳಂ ಚಿತ್ರರಂಗದ ಅನೇಕರು ಸಿಟ್ಟನ್ನು ಹೊರಹಾಕಿದ್ದಾರೆ. ಅಲ್ಲದೇ ವಿನಾಯಕನ್ ಈ ರೀತಿ ಮಾತನಾಡುವಾಗ ವೇದಿಕೆಯ ಮೇಲಿದ್ದ ನವ್ಯಾ ನಾಯರ್ ಸುಮ್ಮನೆ ಇದ್ದುದ್ದಕ್ಕೆ ಸಹಾ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಇದಾದ ನಂತರ ನಟಿ ನವ್ಯಾ ಆ ಕ್ಷಣದಲ್ಲಿ ನನಗೆ ಏನೂ ಹೇಳಲಾಗಲಿಲ್ಲ. ಆದರೆ ಅದನ್ನು ನಾನು ಖಂಡಿಸುತ್ತೇನೆ ಎನ್ನುವ ಮಾತು ಹೇಳಿದ್ದಾರೆ.

Leave a Reply

Your email address will not be published.