ನಾನು ಮನೆ ಕೆಲಸ ಮಾಡೋಕೆ ಬಂದಿಲ್ಲ: ಜೊತೆಯಲ್ಲಿದ್ದವರೇ ಮೋಸ ಮಾಡಿದ್ರಾ? ಗಳಗಳನೆ ಅತ್ತ ಸೋನು

Entertainment Featured-Articles Movies News

ಕನ್ನಡದ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ನ ಓಟಿಟಿ ಸೀಸನ್ ಈಗಾಗಲೇ ನಾಲ್ಕನೇ ವಾರದ ಕೊನೆಗೆ ಬಂದಿದೆ. ಇನ್ನು ವಾರಾಂತ್ಯದಲ್ಲಿ ಎಲಿಮಿನೇಷನ್ ಎದುರಿಸಿ ಕೆಲವರು ಮನೆಯಿಂದ ಹೊರಗೆ ಬಂದಾಗಿದೆ. ಕಳೆದ ವಾರ ಮನೆಯಿಂದ ಉದಯ ಸೂರ್ಯ ಹೊರ ಬಂದಿದ್ದಾರೆ. ಇನ್ನು ಈ ವಾರದ ಆಟ ಮನೆಯಲ್ಲಿ ಮುಂದುವರೆದಿದೆ. ಬಿಗ್ ಬಾಸ್ ನೀಡಿದ ಟಾಸ್ಕ್ ಗಳನ್ನು ಮಾಡಿದ್ದಾರೆ ಮನೆಯ ಸ್ಪರ್ಧಿಗಳು. ಮನೆಯ ಸದಸ್ಯರ ನಡುವೆ ಮಾತು, ಚರ್ಚೆ, ಮನಸ್ತಾಪಗಳು ಇವೆಲ್ಲವೂ ಸಹಾ ಎಂದಿನಂತೆ ನಡೆದಿದೆ. ಇವೆಲ್ಲವುಗಳ ನಂತರ ಬಹಳ ಮುಖ್ಯವಾದ ವಿಚಾರ ಎನ್ನುವ ಹಾಗೆ ಮನೆಯಲ್ಲಿ ಈ ವಾರದಲ್ಲಿ ಮನೆಯಲ್ಲಿ ಯಾರು ಉತ್ತಮ ಸದಸ್ಯರು ಮತ್ತು ಯಾರು ಕಳಪೆ ಎನ್ನುವುದರ ಆಯ್ಕೆ ಸಹಾ ನಡೆದಾಗಿದೆ.

ಹಾಗಾದರೆ ಈ ವಾರ ಮನೆಯಲ್ಲಿ ಉತ್ತಮ ಯಾರು, ಕಳಪೆ ಯಾರು ಅನ್ನೋದಾದ್ರೆ, ಈ ವಾರದ ಬೆಸ್ಟ್ ಸ್ಪರ್ಧಿಯಾಗಿ ಜಯಶ್ರೀ ಅವರನ್ನು ಆಯ್ಕೆ ಮಾಡಿದ್ದಾರೆ ಮನೆಯ ಸದಸ್ಯರು, ಅದೇ ವೇಳೆ ಸೋನು ಗೌಡ ಅವರನ್ನು ಕಳಪೆ ಎಂದು ಆರಿಸಿದ್ದಾರೆ. ತನ್ನನ್ನು ಕಳಪೆ ಎಂದು ಆರಿಸಿದ ವಿಚಾರವಾಗಿ ಸೋನು ಮನೆಯಲ್ಲಿ ಫುಲ್ ಗರಂ‌ ಆಗಿದ್ದಾರೆ. ಅದು ಮಾತ್ರವೇ ಅಲ್ಲದೇ ಸೋನು ಮನೆಯ ಸದಸ್ಯರು ತನ್ನನ್ನು ಈ ರೀತಿ ಕಳಪೆ ಸ್ಪರ್ಧಿಯಾಗಿ ಆಯ್ಕೆ ಮಾಡಿದ ವಿಚಾರವಾಗಿ ಬಹಳ ಬೇಸರಪಟ್ಟುಕೊಂಡು ಕಣ್ದೀರನ್ನು ಸಹಾ ಹಾಕಿ, ತಮ್ಮ ಕೋಪ, ಅಸಮಾಧಾನವನ್ನು ಹೊರ ಹಾಕಿದ್ದಾರೆ.

ತನ್ನನ್ನು ಮನೆಯ ಸದಸ್ಯರು ಕಳಪೆ ಎಂದು ಆರಿಸಿದ ನಂತರ ಸೋನು ಗೌಡ, ನನ್ನ ಲೈಫ್ ನಲ್ಲಿ ನಾನು ಇವತ್ತು ಬುದ್ಧಿ ಕಲಿತುಕೊಂಡೆ, ನನ್ನ ಜೊತೆಯಲ್ಲಿ ಇದ್ದವರೇ ನನಗೆ ಕಳಪೆ ಅಂತ ಪಟ್ಟ ಕೊಟ್ಟಿದ್ದಾರೆ. ನಾನೇನು ಬಿಗ್ ಬಾಸ್ ಮನೆ ಕೆಲಸ ಮಾಡೋಕೆ ಬಂದಿದ್ದೀನಾ? ನನಗೆ ಬಿಗ್ ಬಾಸ್ ಹೇಳಿದ್ದಾರಾ ಮನೆ ಕೆಲಸ ಮಾಡು ಅಂತ‌. ಇವತ್ತು ನನಗೆ ಯಾರೆಲ್ಲಾ ಓಟು ಮಾಡಿದ್ದಾರೋ ಅವರೆಲ್ಲಾ ಫೇಕ್ ಎಂದು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ ಸೋನು ಗೌಡ. ಒಟ್ಟಾರೆ ಸೋನು ಗೌಡ ಒಂದಲ್ಲಾ ಒಂದು ರೀತಿಯಲ್ಲಿ ಸದಾ ಸುದ್ದಿಯಾಗುತ್ತಲೇ ಇದ್ದಾರೆ ಹಾಗೂ ವಾರಾಂತ್ಯದಲ್ಲಿ ಜನರಿಂದ ಓಟ್ ಗಳನ್ನು ಸಹಾ ಪಡೆಯುತ್ತಿದ್ದಾರೆ.

Leave a Reply

Your email address will not be published.