“ನಾನು ಮತ್ತೆ ಲತಾ ಮಂಗೇಶ್ಕರ್ ಆಗಿ ಹುಟ್ಟಲು ಬಯಸಲ್ಲ”: ಗಾನ ಕೋಗಿಲೆ ಅಂದು ನುಡಿದ ವೇದನೆಯ ಮಾತು!!

Entertainment Featured-Articles News
62 Views

ಲತಾ ಮಂಗೇಶ್ಕರ್, ಸಂಗೀತ ಸಾಮ್ರಾಜ್ಯದ ಸ್ವರ ರಾಣಿ ಇಂದು ಕೇವಲ ಸ್ಮರಣೆ ಮಾತ್ರ. ತನ್ನ ಅದ್ಭುತ ಕಂಠದಿಂದ ಅಸಂಖ್ಯಾತ ಗಾಯನ ಪ್ರಿಯರ ಮನಸ್ಸನ್ನು ತಣಿಸಿದ ಮಧುರ ಗಾಯನೀ ಮಣಿ, ತನ್ನ ಮಧುರವಾದ ಧ್ವನಿಯಿಂದಲೇ ಗಂಧರ್ವ ಗಾನವನ್ನು ಸಂಗೀತ ಪ್ರೇಮಿಗಳಿಗೆ ಸಾದರಪಡಿಸಿ ಮತ್ತೊಂದು ಲೋಕದಲ್ಲಿ ತೇಲುವಂತೆ ಮಾಡುತ್ತಿದ್ದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಎನ್ನುವುದು ಅತಿಶಯೋಕ್ತಿ ಖಂಡಿತ ಅಲ್ಲ. ಆದರೆ ಇಂತಹ ದಿಗ್ಗಜ ಗಾಯಕಿಯ ಅಗಲಿಕೆ ಮಾತ್ರ ಸಂಗೀತ ಪ್ರಿಯರ ಪಾಲಿಗೆ ಒಂದು ಕ ಠೋ ರವಾದ ಸತ್ಯ. ಆದರೂ ಆಕೆಯ ಕಂಠ,‌ ಮಾಡಿದ ಗಾಯನಕ್ಕೆ ಸಾವಿಲ್ಲ ಎನ್ನುವುದು ಸಹಾ ವಾಸ್ತವ.

ಭಾರತೀಯ ಸಿನಿ ಸಂಗೀತ ಕ್ಷೇತ್ರದಲ್ಲಿ ಲತಾ ಮಂಗೇಶ್ಕರ್ ಎಂದರೆ ಒಂದು ಅದ್ಭುತ ಸ್ಥಾನ, ಗೌರವ ಇದೆ. ಭಾರತ ರತ್ನ ದಿಂದ ಹಿಡಿದು ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು, ಹೆಸರು, ಹಣ, ಜನಪ್ರಿಯತೆ, ಗೌರವಾದರ ಎಲ್ಲವೂ ದಕ್ಕಿದ್ದ ಅವರ ಜೀವನ ನಿಜಕ್ಕೂ ಒಂದು ದಂತಕಥೆ. ಯಾವ ಲತಾ ಮಂಗೇಶ್ಕರ್ ಅವರನ್ನು ನೋಡಿ ಜನ ಮೆಚ್ಚುತ್ತಿದ್ದರೋ, ಅದೇ ಲತಾ ಮಂಗೇಶ್ಕರ್ ಅವರು ಮರು ಜನ್ಮ ಎನ್ನುವುದು ಇದ್ದರೆ ತಾನು ಲತಾ ಮಂಗೇಶ್ಕರ್ ಆಗಿ ಹುಟ್ಟಲು ಬಯಸುವುದಿಲ್ಲ ಎನ್ನುವ ಮಾತನ್ನು ಹೇಳಿದ್ದರು.

ಹೌದು, ಇದು ಸುಳ್ಳಲ್ಲ, ಸ್ವತಃ ಲತಾ ಮಂಗೇಶ್ಕರ್ ಅವರೇ ಹೇಳಿದ್ದ ಮಾತುಗಳು. ಲತಾ ದೀದಿ ಅವರು ಮಾದ್ಯಮಗಳಿಂದ ಸದಾ ದೂರ ಉಳಿದೇ ಇದ್ದರು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರು ಮಾದ್ಯಮಗಳಿಗೆ ಸಂದರ್ಶನ ನೀಡಿದ್ದು ಉಂಟು. ಇನ್ನು ವಿ ವಾ ದಗಳಿಂದ ಅವರ ವ್ಯಕ್ತಿತ್ವ ಬಹಳ ದೂರದಲ್ಲಿತ್ತು. ವಿಶೇಷ ಸಂದರ್ಭಗಳಲ್ಲಿ ಮಾತನಾಡುವ ಸಂದರ್ಭ ಎದುರಾದಾಗ ಅವರ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದುಂಟು.

ಹೀಗೆ ಒಮ್ಮೆ ಅವರು ಜಾವೇದ್ ಅಕ್ತರ್ ಅವರ ಜೊತೆಗೆ ನಡೆದ ಸಂದರ್ಶನದ ವೇಳೆ ಮರು ಜನ್ಮದ ಬಗ್ಗೆ ವಿಚಾರವೊಂದು ಬಂದಾಗ, ನೀಡಿದ್ದ ಹೇಳಿಕೆ ಅಚ್ಚರಿಯನ್ನು ಉಂಟು ಮಾಡಿತ್ತು. ಲತಾ ಮಂಗೇಶ್ಕರ್ ಅವರು ನನಗೆ ಮರು ಜನ್ಮ ಎನ್ನುವುದು ಬೇಡ, ಒಂದು ವೇಳೆ ನಾನು ಮತ್ತೆ ಹುಟ್ಟಿದರೆ ಲತಾ ಮಂಗೇಶ್ಕರ್ ಆಗಿ ಹುಟ್ಟುವುದಕ್ಕೆ ಮಾತ್ರ ಇಷ್ಟಪಡುವುದಿಲ್ಲ ಎಂದಿದ್ದರು. ಬದುಕಿದರೆ ಅವರಂತೆ ಬದುಕಬೇಕು ಎಂದು ಕೊಂಡವರಿಗೆ ಅವರ ಈ ಮಾತು ದಿ ಗ್ಭ್ರ ಮೆ ಮೂಡಿಸಿತ್ತು.

ಆಗ ಅಚ್ಚರಿಯಿಂದ ಸಂದರ್ಶಕರು ಏಕೆ ಇಂತಹ ಮಾತು ಹೇಳಿದಿರಿ ಎನ್ನುವ ಕಾರಣವನ್ನು ಕೇಳಿದರು. ಆಗ ಲತಾ ಮಂಗೇಶ್ಕರ್ ಅವರು ಅದಕ್ಕೆ ಉತ್ತರವನ್ನು ನೀಡುತ್ತಾ, ನೋವು ತುಂಬಿದ ಮುಗುಳ್ನಗೆಯಲ್ಲೇ ಅವರು ಏಕೆಂದರೆ ಲತಾ ಮಂಗೇಶ್ಕರ್ ಗೆ ಇರುವ ನೋವು ಏನು ಎನ್ನುವುದು ಆಕೆಗೆ ಮಾತ್ರವೇ ಗೊತ್ತು ಎನ್ನುವ ಮಾತನ್ನು ಹೇಳಿದ್ದರು. ಲತಾ ಅವರ ಈ ಮಾತು ನಿಜಕ್ಕೂ ಅವರ ಜೀವನದಲ್ಲೂ ಸಾಕಷ್ಟು ನೋ ವಿ ದೆ ಎನ್ನುವ ವಿಚಾರವನ್ನು ತಿಳಿಸುವಂತೆ ಇತ್ತು.

Leave a Reply

Your email address will not be published. Required fields are marked *