ಆಂಧ್ರ ರಾಜಕೀಯದಲ್ಲಿ ನಡೆಯುವ ದೊಡ್ಡ ದೊಡ್ಡ ಪ್ರಸಂಗಗಳು ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯೇನಿಲ್ಲ ಎನಿಸುತ್ತದೆ. ಆಂಧ್ರ ರಾಜಕೀಯ ಇತಿಹಾಸವೇ ಒಂದು ರೋಚಕ ಕಥಾನಕ ಎನ್ನಬಹುದು. ಪ್ರಸ್ತುತ ಅಂತುಹುದೇ ಒಂದು ಬೆಳವಣಿಗೆಯಲ್ಲಿ ಮಾದ್ಯಮಗಳ ಮುಂದೆ ಮಾಜಿ ಮುಖ್ಯಮಂತ್ರಿ, ಚಂದ್ರ ಬಾಬು ನಾಯ್ಡು ಹಾಕಿರುವ ಕಣ್ಣೀರು. ತನ್ನ ಪತ್ನಿಯ ಬಗ್ಗೆ ಆಡಳಿತ ಪಕ್ಷದವರು ಕೆಟ್ಟದಾಗಿ ಮಾತ ಮಾಡಿದ್ದಾರೆಂದು ಚಂದ್ರ ಬಾಬು ನಾಯ್ಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆದರೆ ಆಡಳಿತ ಪಕ್ಷದವರು ಇದು ಮೊಸಳೆ ಕಣ್ಣೀರೆಂದು ವ್ಯಂಗ್ಯ ಮಾಡಿದ್ದಾರೆ.
ಚಂದ್ರ ಬಾಬು ನಾಯ್ಡು ಮಾಜಿ ಆಪ್ತೆ ಹಾಗೂ ಬಹುಭಾಷಾ ನಟಿ ರೋಜಾ ಚಂದ್ರ ಬಾಬು ನಾಯ್ಡು ಕಣ್ಣೀರು ಹಾಕಿರುವುದನ್ನು ನೋಡಿ ಬಹಳ ಖುಷಿ ಪಟ್ಟಂತೆ ಕಾಣುತ್ತಿದ್ದು, ರೋಜಾ ಚಂದ್ರ ಬಾಬು ನಾಯ್ಡು ಮೇಲೆ ತೀವ್ರವಾದ ವಾ ಗ್ದಾಳಿಯನ್ನು ನಡೆಸಿದ್ದಾರೆ. ರೋಜಾ ಚಂದ್ರ ಬಾಬು ನಾಯ್ಡುಗೆ, “ಇದು ನಿನ್ನೆದೇ ಪಾಪದ ಫಲ, ಆ ದೇವರು ನೀಡಿದ ಶಿಕ್ಷೆಯನ್ನು ಅನುಭವಿಸು” ಎನ್ನುವ ಮಾತನ್ನು ಹೇಳಿದ್ದಾರೆ. ಅಲ್ಲದೇ ಹಳೆಯ ವಿಚಾರಗಳನ್ನು ಮತ್ತೊಮ್ಮೆ ಸ್ಮರಿಸಿದ್ದಾರೆ.
ವೀಡಿಯೋ ಪ್ರಕಟಣೆ ನೀಡಿರುವ ರೋಜಾ, ಕಾಲ ಎಂಬುದು ಎಲ್ಲರಿಗೂ ಪಾಠ ಕಲಿಸುತ್ತದೆ. ಅಂದು 72 ವರ್ಷದ ಎನ್ ಟಿ ಆರ್ ಅವರ ಕಣ್ಣಲ್ಲಿ ನೀರು ಹಾಕಿಸಿದ್ದೆ, ಈಗ ನಿನಗೆ 71 ವರ್ಷ ಕಾಲ ನಿನಗೆ ಕಣ್ಣೀರು ಹಾಕಿಸಿದೆ. ಇದೇ ವಿಧಿ, ನೀನು ಏನು ಮಾಡುತ್ತಿಯೋ, ಅದೇ ನಿನಗೂ ಆಗುತ್ತದೆಂದು ಏಕವಚನದಲ್ಲೇ ರೋಜಾ ಚಂದ್ರಬಾಬು ನಾಯ್ಡು ಬಗ್ಗೆ ವಾಗ್ದಾಳಿಯನ್ನು ನಡೆಸಿದ್ದಾರೆ. ಇಂದು ನಿನ್ನ ಹೆಂಡತಿಯನ್ನು ಯಾರೋ ಏನೋ ಎಂದರೆಂದು ಕಣ್ಣೀರು ಹಾಕುತ್ತಿರುವೆ.
ಅಂದು ಅಸೆಂಬ್ಲಿಯಲ್ಲಿ ರೋಜಾ ನೀಲಿ ಸಿನಿಮಾಗಳಲ್ಲಿ ನಟಿಸುತ್ತಾಳೆಂದು ಹೇಳಿದ್ದು, ಪೀತಲ ಸುಜಾತ ಜೊತೆ ಸೇರಿ ಸಿಡಿ ಬಿಡುಗಡೆ ಮಾಡಿದ್ದು ಮರೆತು ಬಿಟ್ಟೆಯಾ?? ಆಗ ನನಗೂ ಕುಟುಂಬ, ಮಕ್ಕಳು ಇದೆ ಎನ್ನುವುದು ಗೊತ್ತಿರಲಿಲ್ವಾ?? ಅಧಿಕಾರದಲ್ಲಿ ಇರುವಾಗ ಎಲ್ಲರನ್ನೂ ಬಾಯಿಗೆ ಬೈಯ್ಯುತ್ತಿದ್ದುದ್ದು ಮರೆತು ಹೋದೆಯಾ? ಎಂದೆಲ್ಲಾ ರೋಜಾ ಪ್ರಶ್ನೆಗಳನ್ನು ಮಾಡಿದ್ದಾರೆ. ಅಲ್ಲದೇ ನಿನ್ನ ಮೊಸಳೆ ಕಣ್ಣೀರನ್ನು ಯಾರೂ ನಂಬುವುದಿಲ್ಲ ಎಂದಿದ್ದಾರೆ ರೋಜಾ.
ಒಬ್ಬ ಮಹಿಳೆಯಾಗಿ ನನಗೆ ಇಂದು ಬಹಳ ಸಂತೋಷವಾಗಿದೆ. ನಿನಗಾಗಿ ಹತ್ತು ವರ್ಷ ಕೆಲಸ ಮಾಡಿದ್ದನ್ನು ನೋಡದೇ ನನ್ನ ಬಗ್ಗೆ ಕೆಟ್ಟ ಸುದ್ದಿ ಹಬ್ಬಿಸಿ, ನಿಯಮ ಬಾಹಿರವಾಗಿ ಒಂದು ವರ್ಷ ಅಮಾನತ್ತು ಮಾಡಿ, ಪಾರ್ಲಿಮೆಂಟ್ ಗೆ ಕರೆಸಿ 24 ಗಂಟೆಗಳ ಕಾಲ ವಶಕ್ಕೆ ಪಡೆದು ಮಾನಸಿಕ ಹಿಂಸೆ ನೀಡಿದೆ. ಇವೆಲ್ಲಾ ನಾನು ಮರೆತಿಲ್ಲ ಎಂದಿರುವ ರೋಜಾ ನೀನು ಕಣ್ಣೀರು ಹಾಕಿಸಿದವರ ಶಾಪವೇ ಇಂದು ನೀನು ಕಣ್ಣೀರು ಹಾಕುವಂತೆ ಮಾಡಿದೆ ಎಂದಿದ್ದಾರೆ ರೋಜಾ.