ನಾನು ತಪ್ಪು ಮಾಡಿಬಿಟ್ಟೆ: ಶಿಲ್ಪಾ ಶೆಟ್ಟಿ ಹೊಸ ಪೋಸ್ಟ್ ನಲ್ಲಿ ಹೇಳಿದ್ರು ತಪ್ಪುಗಳ ವಿಚಾರ

0 0

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅ ರೆ ಸ್ಟ್ ಆಗಿ ಜೈಲಿನಲ್ಲಿ ಇರುವ ವಿಚಾರ ಎಲ್ಲರಿಗೂ ತಿಳಿದಿದೆ. ರಾಜ್ ಕುಂದ್ರಾ ಜಾಮೀನಿನ ಮೇಲೆ ಹೊರಗೆ ಬರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಆದರೆ ಇನ್ನೂ ಅದಕ್ಕೆ ಅವಕಾಶ ಸಿಕ್ಕಿಲ್ಲ. ಇನ್ನೊಂದು ಕಡೆ ನಟಿ ಶಿಲ್ಪಾ ಶೆಟ್ಟಿ ತಮ್ಮ ಪತಿಯನ್ನು ಹೊರಗೆ ತರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಇದೇ ವೇಳೆಯಲ್ಲಿ ಅವರು ಮತ್ತೊಮ್ಮೆ ತಮ್ಮ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಹೌದು ಶಿಲ್ಪಾ ಶೆಟ್ಟಿ ಒಂದು ಬ್ರೇಕ್ ನ ನಂತರ ಮತ್ತೊಮ್ಮೆ ರಿಯಾಲಿಟಿ ಡ್ಯಾನ್ಸ್ ಶೋಗೆ ವಾಪಸಾಗಿದ್ದಾರೆ. ಇವೆಲ್ಲವುಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಪೋಸ್ಟ್ ಒಂದರಲ್ಲಿ ತಾನು ತಪ್ಪು ಮಾಡಿರುವುದಾಗಿ ಬರೆದುಕೊಂಡಿದ್ದಾರೆ. ಅವರ ನಿರ್ಲಿಪ್ತ ಮನಸ್ಸಿನ ಭಾವನೆಯು ವಾಸ್ತವದ ರೂಪವನ್ನು ಪಡೆದುಕೊಂಡಿದೆ.

ಶಿಲ್ಪಾ ಶೆಟ್ಟಿ ಅವರು ಒಂದು ಪುಸ್ತಕದ ಕೆಲವು ಸಾಲುಗಳ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ, ಜೀವನದಲ್ಲಿ ಅಲ್ಲೊಂದು ಇಲ್ಲೊಂದು ತಪ್ಪುಗಳು ಆಗದೇ ಹೋದರೆ ಜೀವನ ಆಸಕ್ತಿಕರವಾಗಿ ಇರುವುದಿಲ್ಲ. ಆದರೆ ತಪ್ಪುಗಳು ಎನ್ನುವುದು ಅಪಾಯಕಾರಿ ಆಗಿರಬಾರದು ಹಾಗೂ ಬೇರೆಯವರಿಗೆ ನೋವನ್ನು ಉಂಟು ಮಾಡುವಂತೆ ಹಾಗಿರಬಾರದು ಎನ್ನುವ ಎಚ್ಚರವನ್ನು ವಹಿಸಬೇಕು. ಒಟ್ಟಾರೆ ತಪ್ಪುಗಳು ಎನ್ನುವುದು ಇರುತ್ತದೆ. ಮರೆಯಲು ಇಷ್ಟಪಡುವ ವಿಷಯಗಳಂತೆ ಅಥವಾ ನಮ್ಮ ಅತ್ಯಂತ ಆಸಕ್ತಿದಾಯಕ, ಸವಾಲಿನ ಮತ್ತು ಉತ್ತೇಜಕ ಅನುಭವಗಳಂತೆ ನಾವು ನಮ್ಮ ತಪ್ಪುಗಳನ್ನು ನೋಡಬಹುದಾಗಿದೆ. ತಪ್ಪುಗಳಿಂದ ಕಲಿತದ್ದನ್ನು ನಾವು ನೋಡಬೇಕು ಎಂದು ಆ ಸಾಲುಗಳಲ್ಲಿ ಬರೆಯಲಾಗಿದೆ.

ನಾನು ತಪ್ಪುಗಳನ್ನು ಮಾಡಲಿದ್ದೇನೆ, ನಾನು ನನ್ನನ್ನು ಕ್ಷಮಿಸುತ್ತೇನೆ ಮತ್ತು ಅದರಿಂದ ಕಲಿಯುತ್ತೇನೆ ಎಂದು ತೀರ್ಮಾನಿಸಿದ್ದೇನೆ. ತಪ್ಪು ಮಾಡಿದೆ ಆದರೆ ಪರವಾಗಿಲ್ಲ ಎಂದು ಬರೆದಿರುವ ಸ್ಟಿಕರ್ ಅನ್ನು ನಟಿ ಶಿಲ್ಪಾ ಶೆಟ್ಟಿ ಸೇರಿಸಿದ್ದಾರೆ. ಶಿಲ್ಪಾ ಯಾವ ತಪ್ಪನ್ನು ಉಲ್ಲೇಖಿಸಿದ್ದಾರೆ ಎನ್ನುವುದರ ಸ್ಪಷ್ಟತೆ ಇಲ್ಲವಾದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಶಿಲ್ಪಾ ಶೆಟ್ಟಿ ಅವರ ಮನಸ್ಥಿತಿಯನ್ನು ಬಲ್ಲವರು ಅವರು ಯಾವ ವಿಚಾರವಾಗಿ ಇಂತಹ ಮಾತುಗಳನ್ನು ಹೇಳಿದ್ದಾರೆ ಎನ್ನುವುದನ್ನು ಊಹಿಸುವುದಕ್ಕೆ ಕಷ್ಟವೇನೂ ಆಗಿಲ್ಲ ಎಂದು ಹೇಳಬಹುದಾಗಿದೆ. ಬಹು ದಿನಗಳ ನಂತರ ಶಿಲ್ಪಾ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಸಕ್ರಿಯವಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

Leave A Reply

Your email address will not be published.