‘ನಾನು ಚಡ್ಡಿ ಧರಿಸಿದ್ದೆ’- ಬೆತ್ತಲೆ ಫೋಟೋ ಶೂಟ್ ಪ್ರಕರಣದಿಂದ ಹೊರ ಬರಲು ರಣ್ವೀರ್ ಸಿಂಗ್ ಹೇಳಿದ್ದು ಕೇಳಿ ಶಾಕ್ ಆದ ಜನ

Entertainment Featured-Articles Movies News

ಬಾಲಿವುಡ್ ನಟ ರಣ್ವೀರ್ ಸಿಂಗ್ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದು ಮಾತ್ರ ತಮ್ಮ ಬೆ ತ್ತ ಲೆ ಫೋಟೋ ಶೂಟ್ ನಿಂದಾಗಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಸಿನಿಮಾ ವಿಚಾರದಲ್ಲಿಯೂ ಇಷ್ಟೊಂದು ಸದ್ದು ಮಾಡದ ನಟ ರಣ್ವೀರ್ ಸಿಂಗ್ ಅವರು ಸುಪ್ರಸಿದ್ಧ ಮ್ಯಾಗಜೀನ್ ಒಂದಕ್ಕೆ ಬೆ ತ್ತ ಲೆ ಫೋಟೋ ಶೂಟ್ ಮಾಡಿಸಿ ಸದ್ದು ಮಾಡಿದರು. ನಟ ರಣ್ವೀರ್ ಸಿಂಗ್ ಅವರ ಬೆ ತ್ತ ಲೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದವು‌. ಸಾಮಾನ್ಯ ಜನರು ನಟನ ಈ ವರ್ತನೆಯನ್ನು ಖಂಡಿಸಿದರು. ಆದರೆ ಕೆಲವು ಸೆಲೆಬ್ರಿಟಿಗಳು ಇದಕ್ಕೆ ಬೆಂಬಲ ನೀಡಿದರು, ನಟ ಮಾಡಿದ ಕೆಲಸಕ್ಕೆ ಮೆಚ್ಚುಗೆ ನೀಡಿದರು, ಇನ್ನೂ ಕೆಲವರು ಅದನ್ನೇ ಅನುಸರಿಸಿ ತಾವೂ ಬೆತ್ತಲೆಯಾಗಿ ಫೋಟೋ ಗಳನ್ನು ಹಂಚಿಕೊಂಡು ಖುಷಿ ಪಟ್ಟರು.

ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಮುಂಬೈನಲ್ಲಿ ಎನ್ ಜಿ ಓ ಒಂದು ನಟನ ವರ್ತನೆಯ ಬಗ್ಗೆ ಅಸಮಾಧಾನಗೊಂಡು ನಟನ ಬೆ ತ್ತ ಲೆ ಫೋಟೋ ಶೂಟ್ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದೆ, ಮಹಿಳೆಯರ ಭಾವನೆಗಳಿಗೆ ಧ ಕ್ಕೆ ತಂದಿದೆ ಎಂದು ಪೋಲಿಸ್ ಠಾಣೆಯಲ್ಲಿ ನಟನ ವಿ ರು ದ್ಧ ದೂರನ್ನು ದಾಖಲು ಮಾಡಿತು. ಹೌದು, ಜುಲೈ 26 ರಂದು ನಟನ ವಿ ರು ದ್ಧ ಚೆಂಬೂರ್ ಪೋಲಿಸ್ ಸ್ಟೇಷನ್ ನಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿತ್ತು. ದೂರು ಸ್ವೀಕಾರ ಮಾಡಿದ ನಂತರ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ವಿಚಾರದಲ್ಲೊಂದು ಹೊಸ ಟ್ವಿಸ್ಟ್ ಹೊರಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆಗಸ್ಟ್ 29 ರಂದು ನಟ ರಣ್ವೀರ್ ಸಿಂಗ್ ತನ್ನ ಹೇಳಿಕೆಯನ್ನು ದಾಖಲಿಸಿದ್ದು, ಇದೀಗ ನಟ ನೀಡಿರುವ ಹೇಳಿಕೆ ವೈರಲ್ ಆಗಿದೆ‌. ನಟ ನೀಡಿದ ಸಮರ್ಥನೆಯನ್ನು ಕೇಳಿ ಅಚ್ಚರಿ ಪಡುವುದು ಒಂದು ಕಡೆಯಾದರೆ ಮತ್ತೊಂದು ಕಡೆ ನಟನನ್ನು ಮತ್ತೆ ಟ್ರೋಲ್ ಮಾಡಲಾಗುತ್ತಿದೆ. ಹಾಗಾದರೆ ನಟ ಬೆ ತ್ತ ಲೆ ಫೋಟೋ ವಿಚಾರವಾಗಿ ಹೇಳಿದ್ದಾದ್ರು ಏನು? ತಿಳಿದುಕೊಳ್ಳೋಣ ಬನ್ನಿ. ನಟ ವೈರಲ್ ಆಗಿರುವಂತಹ ತನ್ನ ಫೋಟೋ ವನ್ನು ಮಾರ್ಫ್ ಮಾಡಲಾಗಿದೆ, ಟ್ಯಾಂಪರ್ ಮಾಡಲಾಗಿದೆ ಅದು ಅಸಲಿ ಫೋಟೋ ಎಲ್ಲ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ತಮ್ಮ ಹೇಳಿಕೆಯಲ್ಲಿ ರಣ್ವೀರ್ ಸಿಂಗ್, ನಾನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ಏಳು ಫೋಟೋಗಳು ಅ ಶ್ಲೀ ಲ ವಲ್ಲ, ನಾನು ಒಳ ಉಡುಪು ಧರಿಸಿದ್ದೆ. ನನ್ನ ಖಾಸಗಿ ಅಂಗಗಳು ಕಾಣುತ್ತಿದೆ ಎಂದು ನನ್ನ ಮೇಲೆ ದೂರು ನೀಡುವವರು ಹೇಳುತ್ತಿರುವ ಫೋಟೋವನ್ನು ಮಾರ್ಫ್ ಮಾಡಲಾಗಿದೆಯೇ ಹೊರತು ಅದು ಫೋಟೋ ಶೂಟ್ ನ ಭಾಗವಾಗಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ನಟ ತಾನು ಸಂಪೂರ್ಣ ಬೆತ್ತಲಾದಂತೆ ತೋರಿಸಲಾದ ಛಾಯಾಚಿತ್ರ ಮಾರ್ಫ್ ಮಾಡಿರುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published.