ನಾನು ಆ ಶೋಗೆ ಹೋಗೋದಿಲ್ಲ: ಜನಪ್ರಿಯ ಶೋನಿಂದ ನಟ ಅಕ್ಷಯ್ ಕುಮಾರ್ ಗೆ ನಂಬಿಕೆ ದ್ರೋಹ!

Written by Soma Shekar

Published on:

---Join Our Channel---

ಬಾಲಿವುಡ್ ನಲ್ಲಿ ಹೊಸ ಸಿನಿಮಾಗಳು ತೆರೆಗೆ ಬರಲು ಸಜ್ಜಾದ ಕೂಡಲೇ ಆ ಸಿನಿಮಾಗಳ ಪ್ರಚಾರಕಾರ್ಯ ಗಳು ಕೂಡಾ ಬಹಳ ಅಬ್ಬರದಿಂದ ನಡೆಯುತ್ತದೆ. ಅದರಲ್ಲೂ ವಿಶೇಷವಾಗಿ ಕಿರುತೆರೆಯಲ್ಲಿ ಪ್ರಸಾರವಾಗುವ ಜನಪ್ರಿಯ ಶೋಗಳಿಗೆ ಅತಿಥಿಗಳಾಗಿ ಆಗಮಿಸುವ ಸಿನಿಮಾ ನಟ, ನಟಿಯರು ಹಾಗೂ ಇನ್ನಿತರ ಕಲಾವಿದರು ತಮ್ಮ ಹೊಸ ಸಿನಿಮಾಗಳಿಗೆ ಭರ್ಜರಿ ಪ್ರಚಾರವನ್ನು ನೀಡುತ್ತಾರೆ. ಹೀಗೆ ಸಿನಿಮಾ ಕಲಾವಿದರು ಭಾಗವಹಿಸಲು ಇಷ್ಟ ಪಡುವ ಒಂದು ಪ್ರಮುಖ ಶೋ ಎಂದರೆ ಅದು ಹಾಸ್ಯನಟ ಕಪಿಲ್ ಶರ್ಮ ಅವರ ಕಪಿಲ್ ಶರ್ಮ ಶೋ ಕೂಡ ಆಗಿದೆ.

ಬಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿಯಾಗಿರುವ, ಒಂದಾದ ನಂತರ ಮತ್ತೊಂದು ಹಿಟ್ ಸಿನಿಮಾಗಳನ್ನು ಮಾಡುವ ನಟ ಅಕ್ಷಯ್ ಕುಮಾರ್ ತಮ್ಮ ಹೊಸ ಸಿನಿಮಾಗಳು ಬಂದಾಗಲೆಲ್ಲಾ ಅವುಗಳ ಪ್ರಚಾರದ ಭಾಗವಾಗಿ ದಿ ಕಪಿಲ್ ಶರ್ಮಾ ಶೋ ಗೆ ಅತಿಥಿಯಾಗಿ ಆಗಮಿಸುವುದನ್ನು ಒಂದು ವಾಡಿಕೆಯಂತೆ ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅವರು ಕಪಿಲ್ ಶರ್ಮಾ ಶೋ ಕೆಲಸ ಸಿನಿಮಾದ ಪ್ರಚಾರಕ್ಕಾಗಿ ಹೋಗುವುದಿಲ್ಲ ಎನ್ನುವ ನಿರ್ಧಾರವನ್ನು ಮಾಡಿದ್ದಾರೆ.

ಅಕ್ಷಯ್ ಕುಮಾರ್ ಅವರು ಈ ಹಿಂದೆ ಹಲವು ಬಾರಿ ಕಪಿಲ್ ಶರ್ಮಾ ಶೋ ನಲ್ಲಿ ಬಹಳ ಖುಷಿಯಿಂದ ಪಾಲ್ಗೊಂಡಿದ್ದರು. ಆದರೆ ಈ ಬಾರಿ ತಮ್ಮ ಸಿನಿಮಾ ಪ್ರಮೋಶನ್ ಗೆ ಬರುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದು ಮಾತ್ರವೇ ಅಲ್ಲದೇ ಅಕ್ಷಯ್ ಕುಮಾರ್ ಅವರ ಈ ನಿರ್ಧಾರದ ಹಿಂದಿನ ಕಾರಣವಾದರೂ ಏನು ಎಂದು ತಿಳಿಯುವ ಕುತೂಹಲವನ್ನು ಜನರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲೇ ಇದರ ಕಾರಣವೇನು ಎನ್ನುವುದು ಸುದ್ದಿಯಾಗಿದೆ.

ಕೆಲವೇ ದಿನಗಳ ಹಿಂದೆ ನಟ ಅಕ್ಷಯ್ ಕುಮಾರ್ ಅವರ ಅತ್ರಂಗಿ ರೇ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ಅಕ್ಷಯ್ ಕುಮಾರ್ ಅವರು ಸಿನಿಮಾ ನಾಯಕಿ ಸಾರಾ ಆಲಿ ಖಾನ್ ಹಾಗೂ ಸಿನಿಮಾ ನಿರ್ದೇಶಕರ ಜೊತೆಗೆ ಕಪಿಲ್ ಶರ್ಮಾ ಶೋ ಗೆ ಆಗಮಿಸಿದ್ದರು. ಆಗ ಶೋ ನ ನಿರೂಪಕ ಕಪಿಲ್ ಶರ್ಮಾ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಅಕ್ಷಯ್ ಕುಮಾರ್ ಅವರು, ಅವರು ಕೇಳಿದರು,‌ ಇವರು ಕೇಳಿದರು ಎಂದು ಪ್ರಶ್ನೆ ಮಾಡುವ ಬದಲಿಗೆ ನೀನೇ ನೇರವಾಗಿ ಕೇಳಬಾರದಾ ಎಂದು ಕಪಿಲ್ ಶರ್ಮಾರನ್ನು ಪ್ರಶ್ನೆ ಮಾಡಿದ್ದಾರೆ.

ಆಗ ಕಪಿಲ್ ಶರ್ಮಾ ಈ ಹಿಂದೆ ಅಕ್ಷಯ್ ಕುಮಾರ್ ಅವರು ಪ್ರಧಾನಿ ಮೋದಿಯವರ ಸಂದರ್ಶನ ಮಾಡಿದ್ದ ಘಟನೆಯನ್ನು ವ್ಯಂಗ್ಯ ಮಾಡುತ್ತಾ, ನೀವು ಒಬ್ಬ ಪ್ರಮುಖ ರಾಜಕಾರಣಿಯನ್ನು ಸಂದರ್ಶನ ಮಾಡುವಾಗ, ನಿಮ್ಮ ಡ್ರೈವರ್ ಮಗ ಕೇಳಿದ ಪ್ರಶ್ನೆ ಎಂದು ಅವರನ್ನು ಪ್ರಶ್ನೆ ಮಾಡಿದ್ದಿರಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆಗ ಅಕ್ಷಯ್ ಕುಮಾರ್ ಕಪಿಲ್ ಗೆ ಧೈರ್ಯ ಇದ್ದರೆ ಆ ರಾಜಕಾರಣಿ ಹೆಸರು ಹೇಳು ಎಂದು ಸವಾಲು ಹಾಕಿದರು. ಆದರೆ ಕಪಿಲ್ ಶರ್ಮಾ ಮೋದಿ ಹೆಸರು ಹೇಳಲಿಲ್ಲ.

ಅಕ್ಷಯ್ ಕುಮಾರ್ ಅವರು ಕಪಿಲ್ ಶರ್ಮಾ ಹಾಸ್ಯವನ್ನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೆ ವಿಷಯ ಇಷ್ಟಕ್ಕೇ ಮುಗಿಯಲಿಲ್ಲ, ಅಕ್ಷಯ್ ಕುಮಾರ್ ಅವರು ಆ ದೃಶ್ಯವನ್ನು ಪ್ರಸಾರ ಮಾಡದಂತೆ ಎಡಿಟಿಂಗ್ ನಲ್ಲಿ ಅದನ್ನು ತೆಗೆದುಹಾಕುವಂತೆ ಹೇಳಿದ್ದರು ಎನ್ನಲಾಗಿದೆ. ಶೋ ಪ್ರಸಾರವಾದಾಗ ಆ ದೃಶ್ಯ ಪ್ರಸಾರವಾಗಿಲ್ಲ. ಆದರೆ ಎಡಿಟಿಂಗ್ ಟೀಂ ನಲ್ಲಿ ಯಾರೋ ಮಾಡಿದ ಕೆಲಸದಿಂದ ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸುದ್ದಿಯಾಗಿ ಹೋಯ್ತು.

ಈ ಘಟನೆಯಿಂದ ನಟ ಅಕ್ಷಯ್ ಕುಮಾರ್ ಅವರು ಬೇಸರ ಪಟ್ಟುಕೊಂಡಿದ್ದಾರೆ. ಇದೇ ಕಾರಣದಿಂದಲೇ ಅಕ್ಷಯ್ ಕುಮಾರ್ ಅವರು ತಮ್ಮ ಹೊಸ ಸಿನಿಮಾ ಬಚ್ಚನ್ ಪಾಂಡೆ ಸಿನಿಮಾದ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋ ಗೆ ಬರುವುದಿಲ್ಲ ಎನ್ನುವ ನಿರ್ಧಾರವೊಂದನ್ನು ಮಾಡಿದ್ದಾರೆ ಎನ್ನಲಾಗಿದೆ. ಕಪಿಲ್ ಶರ್ಮಾ ಅವರ ಶೋ ತಂಡದ ಒಬ್ಬರು ಮಾಡಿದ ನಂಬಿಕೆ ದ್ರೋ ಹದಿಂದ ಅಕ್ಷಯ್ ಕುಮಾರ್ ಅವರು ಬಹಳ ಬೇಸರ ಪಟ್ಟಿದ್ದಾರೆ.

Leave a Comment