ನಾನು ಆಡಿದರೆ ಜಗವು ಆಡದೇನು? 2 ಲಕ್ಷಕ್ಕೂ ಅಧಿಕ ಜನರ ಮನಗೆದ್ದ ಈ ಶ್ವಾನದ ವೀಡಿಯೋ ವಿಶೇಷತೆ ಏನು??

Entertainment Featured-Articles News

ಸೋಶಿಯಲ್ ಮೀಡಿಯಾ ಪ್ರಪಂಚದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ವೀಡಿಯೋಗಳು ನಿತ್ಯವೂ ಸಹಾ ವೈರಲ್ ಆಗುತ್ತವೆ. ನಿತ್ಯ ಜೀವನದ ಜಂಜಾಟಗಳಲ್ಲಿ ಕಳೆದು, ನಗುವನ್ನು ಮರೆತು ಹೋದವರ ಮೊಗದಲ್ಲಿ ಒಂದು ನಗೆಯನ್ನು ಮೂಡಿಸುವಲ್ಲಿ ಈ ಪ್ರಾಣಿಗಳ ಖುಷಿಯ, ತುಂಟಾಟದ ವೀಡಿಯೋಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಂತಹ ವೀಡಿಯೋಗಳನ್ನು ನೋಡುವ ಕೆಲವು ಕ್ಷಣಗಳಾದರೂ ಅವರು ತಮ್ಮ ಕೆಲಸದ ಒತ್ತಡ, ಇನ್ನಾವುದೇ ಆಲೋಚನೆಯನ್ನು ಮರೆತು ನೆಮ್ಮದಿಯಿಂದ ನಗುವುದಕ್ಕೆ ಈ ವೀಡಿಯೋಗಳು ಒಂದು ಮಾರ್ಗವಾಗಿವೆ‌.

ಮನುಷ್ಯರಿಗೆ ಮತ್ತು ಸಾಕು ಪ್ರಾಣಿಗಳ ನಡುವೆ ಬಹಳ ಹತ್ತಿರದ ಸಾಂಗತ್ಯವಿದೆ. ಅದಕ್ಕೆ ಸಾಕು ಪ್ರಾಣಿಗಳ ತುಂಟಾಟಗಳ ಫನ್ನಿ ವೀಡಿಯೋಗಳು ಬಹಳ ಬೇಗ ಮನಸ್ಸಿಗೆ ಮುದ ವನ್ನು ನೀಡುತ್ತವೆ. ಸಾಕುಪ್ರಾಣಿಗಳ ವಿಷಯಕ್ಕೆ ಬಂದಾಗಲಂತೂ ಅನೇಕರ ಮೊದಲ ಆಯ್ಕೆ ನಾಯಿ. ಏಕೆಂದರೆ ಮುದ್ದುಮುದ್ದಾಗಿ ಇರುವುದರ ಜೊತೆಗೆ ಇದು ತನ್ನ ಮಾಲೀಕನಿಗೆ ನಿಯತ್ತಿನಿಂದ ಇರುತ್ತದೆ ಅಲ್ಲದೇ ಮಾಲೀಕನಿಗಾಗಿ ತನ್ನ ಪ್ರಾಣವನ್ನು ಸಹಾ ನೀಡಲು ಆಲೋಚಿಸುವುದಿಲ್ಲ ಎನ್ನುವುದು ಈಗಾಗಲೇ ಹತ್ತು ಹಲವು ನಿದರ್ಶನಗಳ ಮೂಲಕ ಸಾಬೀತಾಗಿದೆ.

ಇನ್ನು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಶ್ವಾನಕ್ಕೆ ಸಂಬಂಧಿಸಿದಂತೆ ಒಂದು ಹೊಸ ವೀಡಿಯೋ ಸಂಚಲನವನ್ನು ಸೃಷ್ಟಿಸಿ, ಜನರ ಮೆಚ್ಚುಗೆಯನ್ನು ಪಡೆದು, ಜನರಿಂದ ಪ್ರೀತಿಯ ಕಾಮೆಂಟ್ ಗಳನ್ನು ತನ್ನದಾಗಿಸಿಕೊಂಡು ಬಹಳ ವೇಗವಾಗಿ ವೈರಲ್ ಆಗುತ್ತಾ ಸಾಗುತ್ತಿದೆ. ಪುಟ್ಟ ನಾಯಿ ಮರಿಯ ಮುದ್ದಾದ ಆಟವನ್ನು ನೋಡಿ ಜನರು ಖುಷಿ ಗೊಂಡಿದ್ದಾರೆ, ಶ್ವಾನ ಮುಗ್ಧ ಮನಸ್ಸು, ಅದರ ನಿಷ್ಕಪಟ ಚಟುವಟಿಕೆಗಳನ್ನು ನೋಡಿ ಜನರ ಮುಖದಲ್ಲಿ ಸಹಾ ಒಂದು ನಗೆಯ ಅಲೆಯು ಮೂಡಿದೆ.

ಹೌದು, ವೈರಲ್ ಆಗಿರುವ ವೀಡಿಯೋದಲ್ಲಿ ಮುದ್ದಾದ ನಾಯಿಮರಿಯೊಂದು ಬಲೂನ್ ನೊಡನೆ ಆಟವಾಡುತ್ತಿರುವ ದೃಶ್ಯ ಸೆರೆಯಾಗಿದೆ. ಪುಟ್ಟ ಮಕ್ಕಳು ಹೇಗೆ ಬಲೂನ್ ನೋಡಿದಾಗ ಖುಷಿಯಿಂದ ಕುಣಿದಾಡುವರೋ ಹಾಗೆಯೇ ಇಲ್ಲಿ ನಾಯಿ ಮರಿಯು ಕೂಡಾ ಪುಟ್ಟ ಮಕ್ಕಳ ಹಾಗೆ ತಾನೂ ಖುಷಿಯಿಂದ ಬಲೂನಿನ ದಾರವನ್ನು ಬಾಯಲ್ಲಿ ಹಿಡಿದು ಕುಣಿದಿದೆ. ಹಾರಿ ಹೋಗುವ ಬಲೂನ್ ನನ್ನು ಎಳೆದು ತಂದು ಖುಷಿ ಪಟ್ಟಿದೆ. ನಾಯಿ ಮರಿಯ ಈ ಆಟದಲ್ಲಿ ಅದರ ಮುಗ್ಧ ತುಂಟತನ ನಮ್ಮನ್ನು ಸೆಳೆಯುತ್ತದೆ.

ಈ ಫನ್ನಿ ಹಾಗೂ ಮುದ್ದಾದ ವೀಡಿಯೋವನ್ನು ಟ್ವಿಟರ್ ನಲ್ಲಿ @Buitengebieden ಹೆಸರಿನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಕೇವಲ 19 ಸೆಕೆಂಡ್ ನ ಈ ವೀಡಿಯೋವನ್ನು ಈಗಾಗಲೇ ಎರಡು ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಸುಮಾರು 16 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನೆಟ್ಟಿಗರಿಂದ ಮೆಚ್ಚುಗೆಗಳು ಹರಿದು ಬಂದಿವೆ. ವೀಡಿಯೋ ನೋಡಿದ ಅನೇಕ ಮಂದಿ ತಮಗೂ ಸಹಾ ತಮ್ಮ ಬಾಲ್ಯದಲ್ಲಿ ಬಲೂನಿನೊಂದಿಗೆ ಆಡಿದ ದಿನಗಳು ನೆನಪಾದವು ಎಂದು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *