ನಾನು ಅವರನ್ನು ಮದುವೇನೇ ಆಗಿಲ್ಲ: ಸುಚೇಂದ್ರ ಪ್ರಸಾದ್ ಬಗ್ಗೆ ನಟಿ ಪವಿತ್ರ ಲೋಕೇಶ್ ಸ್ಪೋಟಕ ಮಾತು

Written by Soma Shekar

Published on:

---Join Our Channel---

ತೆಲುಗು ನಟ ನರೇಶ್ ವಿಚಾರವಾಗಿ ನಟಿ ಪವಿತ್ರಾ ಲೋಕೇಶ್ ಕಳೆದ ಕೆಲವು ದಿನಗಳಿಂದಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ಕುರಿತಾಗಿ ಸುದ್ದಿಯಾದ ಬೆನ್ನಲ್ಲೇ ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಅವರ ಮದುವೆಯ ವಿಚಾರವೂ ಸಹಾ ಮುನ್ನೆಲೆಗೆ ಬಂದಿದೆ. ನಟಿ ಪವಿತ್ರಾ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಅವರಿಗೆ ವಿಚ್ಚೇದನ ನೀಡದೇ ಹೇಗೆ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ವಿಚಾರ ಸಹಾ ಚರ್ಚೆಯನ್ನು ಹುಟ್ಟು ಹಾಕಿದ ಬೆನ್ನಲ್ಲೇ ನಟಿ ಪವಿತ್ರಾ ಲೋಕೇಶ್ ಸ್ಪೋ ಟ‌‌ ಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಮಾದ್ಯಮವೊಂದರ ಜೊತೆ ಮಾತನಾಡಿರುವ ಪವಿತ್ರಾ ಲೋಕೇಶ್ ಅವರು ನಾನು ಸುಚೇಂದ್ರ ಪ್ರಸಾದ್ ಅವರ ಜೊತೆಗೆ 11 ವರ್ಷಗಳ ಕಾಲ ಇದ್ದಿದ್ದೇನೋ ನಿಜ. ಆದರೆ ನಾವಿಬ್ಬರೂ ಮದುವೆ ಆಗಿರಲಿಲ್ಲ ಎಂದಿದ್ದಾರೆ. ನಾವು ಮದುವೆಯಾಗದೇ ಜೊತೆಗಿದ್ದೆವು ಎನ್ನುವುದನ್ನು ನಾನು ಹೇಳೋದಿಕ್ಕಿಂತ ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕಾಗಿದೆ. ನಾವು ಮದುವೆ ಆಗದೇ ಇರುವುದಕ್ಕೆ ಅವರೇ ಕಾರಣ, ಆದರೂ ನಾನು ಅವರನ್ನು ಇಂದಿಗೂ ಗೌರವಿಸುತ್ತೇನೆ. ನಮ್ಮ‌ ಮದುವೆ ವಿಚಾರದಲ್ಲಿ ಇಷ್ಟು ಮಾತ್ರ ಹೇಳಲು ಸಾಧ್ಯ ಎಂದಿದ್ದಾರೆ.

ಈ ಹಿಂದೆ 2007 ರಲ್ಲಿ ಸುಚೇಂದ್ರ ಪ್ರಸಾದ್ ಅವರು ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆ ಎನ್ನುವ ಸುದ್ದಿಗಳಾಗಿತ್ತು. ಈ ಇಬ್ಬರಿಗೂ ಸಹಾ ಇದು ಎರಡನೇ ಮದುವೆಯಾಗಿತ್ತು ಎನ್ನಲಾಗಿದೆ. ಇವರಿಗೆ
ಇಬ್ಬರು ಮಕ್ಕಳು ಸಹಾ ಇದ್ದಾರೆ. ಆದರೆ ನಟಿ ಪವಿತ್ರಾ ಲೋಕೇಶ್ ಅವರು ತಾವು ಮತ್ತು ಸುಚೇಂದ್ರ ಪ್ರಸಾದ್ ಅವರು 2017 ರಿಂದಲೂ ಜೊತೆಯಾಗಿ ವಾಸಿಸುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಪವಿತ್ರಾ ಲೋಕೇಶ್ ಅವರು ತಾನು ಸುಚೇಂದ್ರ ಅವರಿಂದ ಬೇರೆಯಾಗಿ ಬೇರೆ ಫ್ಲ್ಯಾಟ್ ನಲ್ಲಿ ಮಕ್ಕಳೊಂದಿಗೆ ವಾಸವಿದ್ದಾರೆ ಎನ್ನಲಾಗಿದೆ.

ಮದುವೆಯ ಆಗಿಲ್ಲ ಎಂದ ಮೇಲೆ ವಿಚ್ಛೇದನ ಏಕೆ ತೆಗೆದುಕೊಳ್ಳಬೇಕು ಎನ್ನುವ ಮಾತನ್ನು ಅವರು ಹೇಳಿದ್ದು, ಮದುವೆಯ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ಸಹಾ ಹೇಳಿದ್ದಾರೆ. ಇನ್ನು ನರೇಶ್ ಅವರ ಬಗ್ಗೆ ಅವರು ಮಾದ್ಯಮವೊಂದರ ಮುಂದೆ ಮಾತನಾಡುತ್ತಾ ನರೇಶ್ ಅವರು ಒಳ್ಳೆಯವರು ಎನ್ನುವ ಮಾತನ್ನು ಸಹಾ ಪವಿತ್ರಾ ಲೋಕೇಶ್ ಅವರು ಹೇಳಿದ್ದರು. ನರೇಶ್ ಕೂಡಾ ಪವಿತ್ರಾ ಲೋಕೇಶ್ ತನಗೆ ಬೆಸ್ಟ್ ಫ್ರೆಂಡ್ ಇದ್ದಂತೆ ಎನ್ನುವ ಮಾತನ್ನು ಹೇಳಿದ್ದಾರೆ.

Leave a Comment