ನಾನು ಅಂದು ಆ ವಿಷಯ ಮಾತಾಡಿದ್ದಕ್ಕೆ ನನ್ನನ್ನು ಸಿನಿಮಾದಿಂದ ಬ್ಯಾನ್ ಮಾಡಿದ್ರು:ನಟಿ ಕಂಗನಾ ರಣಾವತ್

Entertainment Featured-Articles News

ಸದಾ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಪ್ರಸ್ತುತ ಎರಡು ವಿಷಯಗಳಿಂದ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.‌ ಒಂದು ನಟಿ ಕಂಗನಾ ರಣಾವತ್ ನಿರೂಪಕಿಯಾಗಿ, ದೊಡ್ಡ ಯಶಸ್ಸನ್ನು ಪಡೆದುಕೊಂಡಿರುವ ಓಟಿಟಿಯಲ್ಲಿ ಪ್ರಸಾರ ಕಾಣುತ್ತಿರುವ ರಿಯಾಲಿಟಿ ಶೋ ಲಾಕ್ ಅಪ್ ನಿಂದಾಗಿ. ಇನ್ನೊಂದು ಕಂಗನಾ ರಣಾವತ್ ಕೆಲವೇ ದಿನಗಳ ಹಿಂದೆಯಷ್ಟೇ ಸಂಸ್ಕೃತ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕು ಎಂದು ನೀಡಿದ ಹೇಳಿಕೆಯಿಂದಾಗಿ. ಹೀಗೆ ಕಂಗನಾ ತಮ್ಮ ಹೇಳಿಕೆಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ.

ಅನೇಕ ಸಂದರ್ಭಗಳಲ್ಲಿ ನಟಿ ಕಂಗನಾ ನೀಡುವ ಹೇಳಿಕೆಗಳು, ಮಾಡುವ ಸೋಶಿಯಲ್ ಮೀಡಿಯಾ ಪೋಸ್ಟ್ ಗಳು ಚರ್ಚೆಗಳನ್ನು ಹುಟ್ಟು ಹಾಕುವುದು ಮಾತ್ರವೇ ಅಲ್ಲದೇ ವಿ ವಾ ದಗಳನ್ನು ಸಹಾ ಹುಟ್ಟು ಹಾಕುತ್ತದೆ. ಕೆಲವೇ ದಿನಗಳ ಹಿಂದೆ ರಾಷ್ಟ್ರ ಭಾಷೆಯ ಬಗ್ಗೆ ಹೇಳಿಕೆ ನೀಡಿ ಸದ್ದು ಮಾಡಿದ ನಟಿ ಇದೀಗ ಒಂದು ಸೂಕ್ಷ್ಮ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದಿದ್ದಾರೆ, ಕಂಗನಾ ಮಾತು ಯಾರು ಯಾರಿಗೆ ಮುಳ್ಳಾಗುವುದೋ ಅದಂತೂ ಕಾಲವೇ ಹೇಳಬೇಕಿದೆ.

ಹೌದು, ನಟಿ ಕಂಗನಾ ರಣಾವತ್ ಈ ಬಾರಿ ಮೀ ಟೂ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ. ಕಂಗನಾ ನಿರೂಪಕಿಯಾಗಿರುವ ಲಾಕ್ ಅಪ್ ಶೋ ನಲ್ಲಿ ಸೈಶಾ ಶಿಂಧೇ ತನ್ನ ಮೇಲಾದ ಲೈಂ ಗಿ ಕ ದೌ ರ್ಜ ನ್ಯದ ಕುರಿತಾಗಿ ಹೇಳಿದ ಸಂದರ್ಭದಲ್ಲಿ ನಟಿ ಕಂಗನಾ ಮೀಟೂ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ. ಚಲನ ಚಿತ್ರೋದ್ಯಮದಲ್ಲಿ ಹಾಗೂ ಫ್ಯಾಷನ್ ಉದ್ಯಮದಲ್ಲಿ ಲೈಂ ಗಿ ಕ ದೌ ರ್ಜ ನ್ಯ ಎನ್ನುವುದು ಸಾಮಾನ್ಯವಾಗಿದೆ. ಹಾಗಿಲ್ಲ ಎಂದು ಎಷ್ಟೇ ಹೇಳಿದರೂ ಅದು ನಡೆಯುತ್ತಿರುವುದೇ ಸತ್ಯ.

ಇಂತಹುವುಗಳಿಂದ ಹಲವು ಅವಕಾಶಗಳು ಸಿಗಬಹುದು ಆದರೆ ಶಾಶ್ವತವಾಗಿ ಮನಸ್ಸಿನಲ್ಲಿ ಅದು ಕಾಡುವುದು ನಗ್ನ ಸತ್ಯ. ಸಿನಿಮಾಗಳಲ್ಲೂ ಕೂಡಾ ಮೀಟೂ ಅಭಿಯಾನ ನಡೆಯಿತು. ಆದರೆ ಅದರಿಂದ ಏನಾಯ್ತು? ಏನೂ ಆಗಲಿಲ್ಲ. ಅಭಿಯಾನ ನಡೆಯುವಾಗ ತಮ್ಮ ಕಹಿ ಅನುಭವಗಳನ್ನೆಲ್ಲಾ‌ ಹೊರ ಹಾಕಿದ ನಟಿಯರು ಈಗ ಎಲ್ಲಿದ್ದಾರೆ. ಎಲ್ಲರೂ ನಾಪತ್ತೆಯಾಗಿದ್ದಾರೆ. ಅವರಿಗೆ ಸಪೋರ್ಟ್ ನೀಡಿದ್ದಕ್ಕೆ ನನ್ನನ್ನು ಚಿತ್ರರಂಗದಿಂದ ಬ್ಯಾನ್ ಮಾಡಿದ್ದರು. ನಾನು ಬೆಂಬಲ ನೀಡಿದ ನಟಿಯರು ಈಗ ಎಲ್ಲೂ ಕಾಣುತ್ತಿಲ್ಲ ಎಂದಿದ್ದಾರೆ ಕಂಗನಾ ರಣಾವತ್.

Leave a Reply

Your email address will not be published.