ನಾಗಿಣಿ 2 ಯಿಂದ ತ್ರಿಶೂಲ್ ಎಕ್ಸಿಟ್ ಹಿಂದಿನ ಅಸಲಿ ಕಥೆ ಬಿಚ್ಚಿಟ್ಟ ತ್ರಿಶೂಲ್ ಪಾತ್ರಧಾರಿ ನಟ ನಿನಾದ್ ಹರಿತ್ಸಾ!!

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಎಲ್ಲಾ ಸಾಂಸಾರಿಕ, ಪ್ರೇಮ ಕಥೆಗಳ ಧಾರಾವಾಹಿಗಳ ನಡುವೆ ಮಂತ್ರ, ತಂತ್ರ, ಮಾಯಾ ಜಾಲಗಳ ಕಥೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಾ, ಸಾಕಷ್ಟು ಹೆಸರನ್ನು ಪಡೆದಿದೆ ನಾಗಿಣಿ 2 ಧಾರಾವಾಹಿ. ನಾಗಿಣಿ 2 ರ ಮೂಲಕ ಕಿರುತೆರೆಯ ನಟಿ ನಮ್ರತಾ ಗೌಡ ಅವರು ನಾಗಿಣಿ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಸೀರಿಯಲ್ ನಲ್ಲಿ ನಾಯಕ ತ್ರಿಶೂಲ್ ಅಂದರೆ ಆದಿ ಶೇಷನ ಪುನರ್ಜನ್ಮದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಯುವ ನಟ ನಿನಾದ್ ಹರಿತ್ಸ ಅವರು.

ನಾಗಿಣಿ ಸೀರಿಯಲ್ ನ ತ್ರಿಶೂಲ್ ಪಾತ್ರಧಾರಿಯಾಗಿ ನಿನಾದ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರ ಅಭಿನಯ ಜನರಿಗೆ ಎಷ್ಟು ಇಷ್ಟವಾಗಿದೆ ಎಂದರೆ ತ್ರಿಶೂಲ್ ಪಾತ್ರದಲ್ಲಿ ಬೇರೆ ಯಾರನ್ನೂ ಸಹಾ ಕಿರುತೆರೆಯ ಪ್ರೇಕ್ಷಕರು ನೋಡಲು ಸಿದ್ಧರಿಲ್ಲ ಎನ್ನುವ ಮಟ್ಟಕ್ಕೆ ನಿನಾದ್ ಪ್ರೇಕ್ಷಕರ ಮೇಲೆ‌ ಮೋಡಿಯನ್ನು ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂದರೆ ತಮ್ಮ ಖಾಸಗಿ ಜೀವನದಲ್ಲಿ ನಿನಾದ್ ಅವರು ತಮ್ಮ ವಿವಾಹದ ನಂತರ ಸೀರಿಯಲ್ ನ ತಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಹೌದು, ನಿನಾದ್ ಅವರ ತ್ರಿಶೂಲ್ ಪಾತ್ರದ ಬದಲಿಗೆ ಪೋಲಿಸ್ ಅಧಿಕಾರಿ ಅಭಯ್ ಪಾತ್ರವು ಎಂಟ್ರಿ ನೀಡಿದ್ದು, ರೂಪ ಬದಲಾದ ತ್ರಿಶೂಲ್ ಹೊಸ ರೂಪ, ಹೊಸ ಹೆಸರಿನೊಂದಿಗೆ ಎಂಟ್ರಿ ನೀಡಿದ್ದು, ನಿನಾದ್ ಅವರ ಪಾತ್ರ ಇದ್ದಕ್ಕಿದ್ದ ಹಾಗೆ ಮಾಯ ಆಗಿದ್ದನ್ನು ನೋಡಿ ನಟ ನಿನಾದ್ ಅವರು ಸೀರಿಯಲ್ ಬಿಟ್ಟು ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿಗಳು ಸಹಾ ಆಗಿತ್ತು. ಇದೇ ವಿಚಾರವಾಗಿ ನಟ ನಿನಾದ್ ಅವರು ಮಾದ್ಯಮವೊಂದರ ಮುಂದೆ ಅಸಲಿ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಿನಾದ್ ಅವರು, ನಾನು ನಾಗಿಣಿ ಧಾರಾವಾಹಿಯನ್ನು ಬಿಟ್ಟಿಲ್ಲ. ಮದುವೆಯ ನಂತರ ವೈಯಕ್ತಿಕ ಜೀವನಕ್ಕೆ ಸ್ವಲ್ಪ ಸಮಯ ನೀಡಬೇಕು,‌ ಹೆಂಡತಿಯ ಜೊತೆಗೆ ಸ್ವಲ್ಪ ಸಮಯವನ್ನು ಕಳೆಯಬೇಕು ಎಂದು ಬ್ರೇಕ್ ಪಡೆದಿರುವುದಾಗಿ ಹೇಳಿದ್ದಾರೆ. ಜೋಡಿ ನಂ 1 ಶೋ ನಲ್ಲಿ ರಮ್ಯಾ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿರುವುದು ಖುಷಿಯನ್ನು ನೀಡಿದೆ ಎಂದು ಅವರು ಹೇಳಿದ್ದಾರೆ. ಇದೇ ಕಾರಣದಿಂದಲೇ ಸೀರಿಯಲ್ ತಂಡವು ಸ್ವಲ್ಪ ಬದಲಾವಣೆ ಮಾಡಿಕೊಂಡು ತ್ರಿಶೂಲ್ ಜಾಗಕ್ಕೆ ಅಭಯ್ ಎನ್ನುವ ಹೊಸ ಪಾತ್ರವನ್ನು ಪರಿಚಯಿಸಿದೆ ಎನ್ನಲಾಗಿದೆ.

Leave a Comment