ನಾಗಿಣಿ 2 ನಲ್ಲಿ ಶಾಕಿಂಗ್ ಟ್ವಿಸ್ಟ್: ನಟಿ ನಮ್ರತಾ ಶೇರ್ ಮಾಡಿದ್ರು ವಿಡಿಯೋ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಕುಟುಂಬಗಳ ಕಥೆ, ಪ್ರೇಮಿಗಳ ಕಥೆ, ಇನ್ನೂ ಹಲವು ಸಾಮಾಜಿಕ ವಿಷಯಗಳನ್ನು ಆಧರಿಸಿ ಬಹಳಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿವೆ‌. ಅವೆಲ್ಲವುಗಳ ನಡುವೆಯೇ ಒಂದು ಸೂಪರ್ ನ್ಯಾಚುರಲ್ ಫ್ಯಾಂಟಸಿ ಕಥಾನಕವಾಗಿ ಜನರ ಮುಂದೆ ಬಂದು, ಜನರನ್ನು ಬಹಳಷ್ಟು ರಂಜಿಸುತ್ತಿರುವ ಸೀರಿಯಲ್ ಎಂದರೆ ಅದಿ ನಾಗಿಣಿ 2. ಹೌದು ನಾಗ ಲೋಕದಿಂದ ಸೇ ಡಿ ನ ಜ್ವಾಲೆಯನ್ನು ಹೊತ್ತು ಬಂದ ನಾಗಿಣಿಯು ಭೂಲೋಕದಲ್ಲಿ ಹೇಗೆ ದುಷ್ಟರ ಮಾಯಾ ಜಾಲಗಳನ್ನು ಎದುರಿಸುತ್ತಿದ್ದಾಳೆ ಎನ್ನುವ ಈ ಕಥೆ ಜನ ಮೆಚ್ಚುಗೆ ಪಡೆದಿದೆ.

ನಾಗಿಣಿ 1 ಮುಗಿದಾಗ ಜನರು ನಾಗಿಣಿ ಟು ಬಗ್ಗೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅವರ ನಿರೀಕ್ಷೆಗಳಿಗೆ ತಕ್ಕಂತೆ ಅದ್ಭುತ ವಾದ ಸೆಟ್, ಅತ್ಯದ್ಭುತ ಎನಿಸುವ ಸ್ಪೆಷಲ್ ಎಫೆಕ್ಟ್ಸ್ ಮೂಲಕ ನಾಗಿಣಿ ಸೀರಿಯಲ್ ಬಹಳ ಆಕರ್ಷಕವಾಗಿ ಮೂಡಿ ಬರುತ್ತಿದೆ. ಇದೀಗ ಸೀರಿಯಲ್ ನಲ್ಲಿ ಹೊಸದೊಂದು ದೊಡ್ಡ ಟ್ವಿಸ್ಟ್ ಮೂಡಿ ಬರಲಿದೆ. ಹೌದು ಈ ಬಗ್ಗೆ ವಾಹಿನಿ ಅಥವಾ ಸೀರಿಯಲ್ ಮೇಕರ್ಸ್ ಯಾವ ಅಧಿಕೃತ ಸುದ್ದಿ ನೀಡದೇ ಹೋದರೂ ಸುಳಿವೊಂದು ಸಿಕ್ಕಿದೆ.

ನಾಗಿಣಿ ಟು ಸೀರಿಯಲ್ ನಲ್ಲಿ ನಾಗಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಕಿರುತೆರೆಯ ಜನಪ್ರಿಯ ನಟಿ ನಮ್ರತಾ ಗೌಡ ಅವರು. ಈ ನಟಿಯು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಆಗಾಗ ತಮ್ಮ ಅಂದವಾದ ಫೋಟೋಗಳನ್ನು ಹಾಗೂ ವೀಡಿಯೋಗಳ ನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ. ಅವರ ಹಿಂಬಾಲಕರ ಸಂಖ್ಯೆ ಕೂಡಾ ದೊಡ್ಡ ಪ್ರಮಾಣದಲ್ಲೇ ಇದೆ ಎಂದು ಹೇಳಬಹುದು.

ನಮ್ರತಾ ಅವರು ಇತ್ತೀಚಿಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಸಣ್ಣ ವೀಡಿಯೋ ತುಣಕನ್ನು ಶೇರ್ ಮಾಡಿಕೊಂಡಿದ್ದು ಅದರಲ್ಲಿ ನಾಗಿಣಿ ಸೀರಿಯಲ್ ನ ಶೂಟಿಂಗ್ ವೇಳೆ ಒಂದು ಪ್ರಮುಖ ದೃಶ್ಯದ ಚಿತ್ರೀಕರಣವನ್ನು ಮಾಡುತ್ತಿರುವ ಸಂದರ್ಭದ್ದಾಗಿದ್ದು, ಈ ವೀಡಿಯೋ ನೋಡಿದಾಗ ಸೀರಿಯಲ್ ನಲ್ಲಿ ಮುಂದೆ ಬರಲಿರುವ ಬಿಗ್ ಟ್ವಿಸ್ಟ್ ಗೆ ಇದು ಸುಳಿವು ನೀಡುತ್ತಿದೆ ಎನಿಸುತ್ತದೆ. ವೀಡಿಯೋ ದಲ್ಲಿನ ದೃಶ್ಯ ಗಮನಿಸಿದಾಗ ಒಂದು ಊಹೆ ಖಂಡಿತ ನಮಗೆ ಮೂಡುತ್ತದೆ.

ದೃಶ್ಯದಲ್ಲಿ ಗಮನಿಸಿದಾಗ ಸೀರಿಯಲ್ ನಲ್ಲಿ ನಾಗಿಣಿಯ ಇಬ್ಬರು ಪರಮ ಶ ತೃ ಗಳಾಗಿರುವ ಮಾಯಾಂಗನೇ ಮತ್ತು ತ್ರಯಂಬಕನನ್ನು ಎದುರಿಸುವ, ಅವರಿಂದ ನಾಗಿಣಿಯ ಮೇಲೆ ನಡೆಯುವಂತಹ ಭೀಕರ ಶಕ್ತಿ ಪ್ರಯೋಗದ ಸನ್ನಿವೇಶ ಅದು ಎಂದು ಸೀರಿಯಲ್ ನೋಡುವ ಎಲ್ಲರಿಗೂ ತಕ್ಷಣ ಹೊಳೆಯುವ ಜೊತೆಗೆ ಕೆಲವು ಪ್ರಶ್ನೆಗಳು ಹಾಗೂ ಅನುಮಾನ ಗಳು ಸಹಾ ಮೂಡ ಬಹುದು.

https://www.instagram.com/reel/CTjHD5WH7vf/?utm_medium=copy_link

ಒಟ್ಟಾರೆ ನಮ್ರತಾ ಅವರು ಶೇರ್ ಮಾಡಿರುವ ವೀಡಿಯೋ ನಾಗಿಣಿ ಸೀರಿಯಲ್ ನಲ್ಲಿ ಮುಂಬರಲಿರುವ ಒಂದು ರೋಚಕ ಸನ್ನಿವೇಶದ ಒಂದು ಸಣ್ಣ ಝಲಕ್ ಅನ್ನು ನಮ್ಮ ಮುಂದೆ ಇರಿಸಿದೆ.. ನಾಗಿಣಿ ಟು ಇಷ್ಟ ಪಡುವ ಕಿರುತೆರೆಯ ಪ್ರೇಕ್ಷಕರಿಗೆ ಖಂಡಿತು ಈ ಟ್ವಿಸ್ಟ್ ಇಷ್ಟವಾಗಬಹುದು. ಮುಂದೆ ನಾಗಿಣಿ ಟು ನಲ್ಲಿ ಏನೆಲ್ಲಾ ಆಗಲಿದೆ ಎನ್ನುವ ನಿರೀಕ್ಷೆ ಕೂಡಾ ಹುಟ್ಟು ಹಾಕಬಹುದು.

Leave a Comment