ನಾಗಿಣಿ 2: ತ್ರಿಶೂಲ್ ಪಾತ್ರದಿಂದ ಹೊರ‌ ನಡೆದ ನಟ, ಈಗ ಹೊಸ ನಟನ ಎಂಟ್ರಿಯನ್ನು ಪ್ರೇಕ್ಷಕರು ಒಪ್ತಾರಾ?

0 5

ಕನ್ನಡ ಕಿರುತೆರೆಯ ವಿಚಾರ ಬಂದಾಗ ಮೊದಲು ಮನಸ್ಸಿಗೆ ಬರುವುದು ಸೀರಿಯಲ್ ಗಳು. ಹೌದು ಸೀರಿಯಲ್ ಗಳು ಕಿರುತೆರೆಯ ಮನರಂಜನೆಯ ದೊಡ್ಡ ಮೂಲವಾಗಿವೆ. ಇನ್ನು ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಸಾಲಿನಲ್ಲಿ ನಾಗಿಣಿ 2 ಕೂಡಾ ಸೇರಿದ್ದು, ಈ ಧಾರಾವಾಹಿ ಬಹಳಷ್ಟು ಜನ ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಆಗಿದೆ‌.‌ ನಾಗ ಲೋಕದಿಂದ ಸೇ ಡಿ ನ ಜ್ವಾಲೆಯನ್ನು ಹೊತ್ತು ತಂದು, ಆದಿಶೇಷ ಮತ್ತು ನಾಗಮಣಿಗಾಗಿ ನಾಗಿಣಿ ಶಿವಾನಿ ನಡೆಸುತ್ತಿರುವ ಪ್ರಯತ್ನಗಳ ಕಥಾ ಹಂದರ ಜನರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಾ ಬಂದಿದೆ.

ನಾಗಿಣಿ 2 ಸೀರಿಯಲ್ ನಲ್ಲಿ ನಾಗಿಣಿಯಾಗಿ ನಮ್ರತಾ ಗೌಡ ಅವರು ನಟಿಸುತ್ತಿದ್ದಾರೆ. ‌ನಾಗಿಣಿ ಪಾತ್ರದ ಮೂಲಕ ನಟಿಯು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ‌ಇನ್ನು ಇದೇ ಸೀರಿಯಲ್ ನಲ್ಲಿ ನಾಗರಾಜ ಆದಿಶೇಷನ ಪುನರ್ಜನ್ಮದ ಪಾತ್ರದಲ್ಲಿ ನಾಯಕ ತ್ರಿಶೂಲ್ ಆಗಿ ಕಾಣಿಸಿಕೊಂಡಿರುವವರ ನಡ ನಿನಾದ್ ಹರಿತ್ಸ. ನಿನಾದ್ ಅವರು ತ್ರಿಶೂಲ್ ಪಾತ್ರದ ಮೂಲಕ ಕಿರುತೆರೆಯ ಪ್ರೇಕ್ಷಕರ ಅಚ್ಚು ಮೆಚ್ಚಿನ ನಟನಾಗಿದ್ದಾರೆ. ತ್ರಿಶೂಲ್ ಪಾತ್ರದಲ್ಲಿ ಜನರು ಅವರನ್ನು ಬಿಟ್ಟು ಬೇರೆಯವರನ್ನು ಊಹಿಸಿಕೊಳ್ಳಲು ಸಹಾ ಸಾದ್ಯವಿಲ್ಲ ಎನ್ನುವಷ್ಟು ಅವರು ಪಾತ್ರದಲ್ಲಿ ಮಿಂಚಿದ್ದಾರೆ.

ನಾಗಿಣಿ ಶಿವಾನಿ, ಆದಿಶೇಷ ತ್ರಿಶೂಲ್ ಆಗಿ ನಮ್ರತಾ ಗೌಡ ಹಾಗೂ ನಿನಾದ್ ಅವರ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಜೋಡಿಯನ್ನು ತೆರೆಯ ಮೇಲೆ ನೋಡಿ ಆನಂದಿಸುತ್ತಿದ್ದಾರೆ. ಆದರೆ ಈಗ ನಡೆದಿರುವ ಹೊಸ ಬೆಳವಣಿಗೆಯೊಂದರಲ್ಲಿ ಇನ್ಮುಂದೆ ತ್ರಿಶೂಲ್ ಪಾತ್ರದಲ್ಲಿ ನಟ ನಿನಾದ್ ಹರಿತ್ಸ ಅವರು ಇರುವುದಿಲ್ಲ. ಹೌದು ನಾಗಿಣಿಯ ಪ್ರೊಮೊದಲ್ಲಿ ಸಹಾ ನಿನಾದ್ ಅವರ ಜಾಗಕ್ಕೆ ಬೇರೊನ್ಬ ನಟನ ಎಂಟ್ರಿ ಆಗಿರುವುದನ್ನು ತೋರಿಸಲಾಗುತ್ತಿದೆ.

ನಟ ನಿನಾದ್ ಹರಿತ್ಸ ಅವರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ತ್ರಿಶೂಲ್ ಪಾತ್ರದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ನಟ ಇನ್ನೂ ಇದರ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.‌ ಇನ್ನು ತ್ರಿಶೂಲ್ ಪಾತ್ರಕ್ಕೆ ನಟ ದೀಪಕ್ ಮಹಾದೇವ್ ಅವರು ಎಂಟ್ರಿ ನೀಡಿದ್ದಾರೆ. ಈಗಾಗಲೇ ಕಿರುತೆರೆಯ ಸೀರಿಯಲ್ ಗಳ ಮೂಲಕ ಸಾಕಷ್ಟು ಹೆಸರನ್ನು ಪಡೆದಿರುವ ನಟ ದೀಪಕ್ ಮಹಾದೇವ್ ಅವರು ಇನ್ಮುಂದೆ ತ್ರಿಶೂಲ್ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಪ್ರೇಕ್ಷಕರು ಈ ಹೊಸ ಬದಲಾವಣೆಯನ್ನೂ ಹೇಗೆ ಸ್ವೀಕರಿಸಲಿದ್ದಾರೆ ಕಾದು ನೋಡಬೇಕಾಗಿದೆ.

Leave A Reply

Your email address will not be published.