ನಾಗಿಣಿ 2 ಅಭಿಮಾನಿಗಳಿಗೆ ಶಾಕ್: ಶೀಘ್ರದಲ್ಲೇ ಮುಗಿಯಲಿದೆ ನಾಗಿಣಿ 2 ಸೀರಿಯಲ್ ??

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ಸಾಂಸಾರಿಕ ಧಾರಾವಾಹಿಗಳ ಅಬ್ಬರ ಒಂದು ಕಡೆಯಾದರೆ ಮತ್ತೊಂದು ಕಡೆ ಫ್ಯಾಂಟಸಿ ಕಥಾನಕವನ್ನು ಒಳಗೊಂಡ ನಾಗಿಣಿ 2 ಧಾರಾವಾಹಿ ತನ್ನದೇ ಆದ ವೇಗದಲ್ಲಿ ಮುನ್ನುಗ್ಗುತ್ತಿದ್ದು ಕಿರುತೆರೆಯ ಪ್ರೇಕ್ಷಕರ ಅಪಾರವಾದ ಪ್ರೀತಿಯನ್ನು ಗಳಿಸಿದೆ‌. ಈ ಹಿಂದೆ ನಟಿ ದೀಪಿಕಾ ದಾಸ್ ಅವರು ನಾಗಿಣಿ ಯಾಗಿ ಕಾಣಿಸಿಕೊಂಡಿದ್ದ ನಾಗಿಣಿ 1 ಸೀರಿಯಲ್ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ನಾಗಿಣಿ ಪಾತ್ರಕ್ಕೆ ಜನರ ವಿಶೇಷ ಮನ್ನಣೆ ದೊರೆತಿತ್ತು. ದೀಪಿಕಾ ದಾಸ್ ಅವರು ನಾಗಿಣಿ ಪಾತ್ರದ ಮೂಲಕ ಮನೆ ಮನೆ ಮಾತಾದರು. ನಾಗಿಣಿ ಒಂದು ಪಡೆದ ಯಶಸ್ಸಿನ ನಂತರ ನಾಗಿಣಿ 2 ಆರಂಭವಾಯಿತು.

ನಾಗಿಣಿ 2 ಆರಂಭದಲ್ಲಿ ವೀಕ್ಷಕರಿಗೆ ನಟ‌ ಕಾರ್ತಿಕ್ ಜಯರಾಂ ಅವರು ಆದಿಶೇಷ ನ ಪಾತ್ರದಲ್ಲಿ ಕಾಣಿಸಿಕೊಂಡು ಖುಷಿ ನೀಡಿದ್ದರು. ಇನ್ನು ನಾಗಿಣಿಯಾಗಿ ನಮ್ರತಾ ಗೌಡ ಮಿಂಚುತ್ತಿದ್ದಾರೆ. ಆದಿಶೇಷನ ಪುನರ್ಜನ್ಮವಾಗಿ ನಟ ನಿನಾದ್ ಅವರು ಕಾಣಿಸಿಕೊಂಡಿದ್ದಾರೆ. ನಿನಾದ್ ಹಾಗೂ ನಮ್ರತಾ ಜೋಡಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದಿದೆ. ಹೀಗೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ನಾಗಿಣಿ 2 ಇನ್ನು ಕೆಲವೇ ತಿಂಗಳುಗಳಲ್ಲಿ ಮುಗಿಯಲಿದೆ ಎನ್ನುವ ಸುದ್ದಿಯೊಂದು ಈಗ ಹರಿದಾಡಿದೆ.

ಹೌದು, ನಾಗಿಣಿ ಸೀರಿಯಲ್ ನಲ್ಲಿ ಇತ್ತೀಚಿಗೆ ಹೊಸ ಹೊಸ ತಿರುವುಗಳು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ನಾಗಿಣಿಯ ನ್ನು ಕೊಂದ ನಂತರ ಶೈಲು ಶಿವಾನಿಯಾಗಿ ಆಗಮಿಸಿದ್ದಾಳೆ. ಅವಳ ಕೊರಳಿನಲ್ಲಿ ಇರುವ ದಿವ್ಯವಾದ ಶಕ್ತಿಯೊಂದು ಅವಳ ರಕ್ಷಣೆ ಮಾಡುತ್ತಿದೆ. ಅಲ್ಲದೇ ಆಗಾಗ ಶೈಲು ತನಗೆ ಅರಿವಿಲ್ಲದ ಹಾಗೆ ನಾಗಿಣಿ ಶಿವಾನಿಯಾಗಿ ಬದಲಾಗುತ್ತಿದ್ದಾಳೆ. ಇನ್ನೊಂದು ಕಡೆ ಸಾಧು ಆದಿಶೇಷನಿಗೆ ಅವನ ನೆನಪುಗಳನ್ನು ಮರಳಿ ತರಿಸಲು ಪ್ರಯತ್ನ ಮಾಡಿದ್ದಾನೆ.

ಮಾಯಾಂಗನೆ ಮತ್ತೆ ಬಂದಿದ್ದಾಳೆ. ದಿಗ್ವಿಜಯ ಹೊಸ ರೂಪದಲ್ಲಿ ತನ್ನ ಕುತಂತ್ರದ ಆಟ ಆಡುತ್ತಿದ್ದಾನೆ. ಈಗ ಇವೆಲ್ಲವುಗಳ ನಡುವೆಯೇ ಧಾರಾವಾಹಿ ಶೀಘ್ರದಲ್ಲೇ ಅಂತಿಮ ಹಂತವನ್ನು ತಲುಪಲಿದೆ ಎನ್ನಲಾಗಿದೆ. ‌ಅದೂ ಅಲ್ಲದೇ ಧಾರಾವಾಹಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಇನ್ನೂ ಪ್ರಸಾರ ಕಾಣುತ್ತಿದೆ ಎನ್ನಲಾಗಿದ್ದು, ಈಗಾಗಲೇ ಇದನ್ನು ಮುಗಿಸುವ ಆಲೋಚನೆ ಇತ್ತು ಎನ್ನಲಾಗಿದೆ‌. ಒಟ್ಟಾರೆ ಜನರಿಗೆ ಮನರಂಜನೆ ವಿಚಾರದಲ್ಲಿ ಬಹಳಷ್ಟು ಖುಷಿಯನ್ನು ನೀಡುತ್ತಿದ್ದ ನಾಗಿಣಿ ೨ ಶೀಘ್ರದಲ್ಲೇ ಮುಗಿಯಲಿದೆ ಎನ್ನುವುದು ಅಭಿಮಾನಿಗಳಿಗೆ ಖಂಡಿತ ಬೇಸರವನ್ನುಂಟು ಮಾಡುತ್ತದೆ.

Leave a Reply

Your email address will not be published.