ನಾಗಾರ್ಜುನ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಅಮಲಾ ಪೌಲ್ ಇಟ್ಟ ಬೇಡಿಕೆಗೆ ಬೆರಗಾದ ಚಿತ್ರ ತಂಡ

Written by Soma Shekar

Published on:

---Join Our Channel---

ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ವಯಸ್ಸು ಏರುತ್ತಿದೆಯಾದರೂ ಅವರ ಮುಖದಲ್ಲಿ ಅದು ಕಾಣುವುದಿಲ್ಲ. ಅರವತ್ತು ದಾಟಿದರೂ ಕೂಡಾ ಇಂದಿನ ಯುವ ಕಲಾವಿದರನ್ನೂ ನಾಚಿಸುವಂತೆ ನಟಿಸುವ ನಟ ಅವರು. ಒಂದಾದ ನಂತರ ಮತ್ತೊಂದು ಎನ್ನುವಂತೆ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಅವರು ತೆಲುಗಿನ ಬಿಗ್ ಬಾಸ್ ಶೋ ನ ನಿರೂಪಕ ಕೂಡಾ ಆಗಿದ್ದಾರೆ. ನಾಗಾರ್ಜುನ ನಾಯಕನಾಗುವ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೂ ಸಹಾ ವಿಶೇಷವಾದ ಪ್ರಾಧಾನ್ಯತೆ ಇರುತ್ತದೆ. ಅಲ್ಲದೇ ನಾಯಕಿ ಆಯ್ಕೆ ಗೂ ಹೆಚ್ಚು ಗಮನ ನೀಡಲಾಗುತ್ತದೆ.

ನಾಗಾರ್ಜುನ ಅವರ ಹೊಸ ಸಿನಿಮಾ ಗೋಸ್ಟ್ ಗೆ ಕಾಜಲ್ ಅಗರ್ವಾಲ್ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ನಟಿ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ನಟಿ ಕಾಜಲ್ ಅಗರ್ವಾಲ್ ಗರ್ಭಿಣಿ ಆಗಿರುವ ಕಾರಣದಿಂದ ಅವರು ಸಿನಿಮಾದಿಂದ ಬ್ರೇಕ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅತ್ತ ಕಾಜಲ್ ಅಗರ್ವಾಲ್ ಸಿನಿಮಾದಿಂದ ಹೊರ ಬಂದ ಹಿನ್ನೆಲೆಯಲ್ಲಿ ಈಗ ಆ ಜಾಗಕ್ಕೆ ಎಂಟ್ರಿ ನೀಡಿದ್ದಾರೆ ಮತ್ತೊಬ್ಬ ಜನಪ್ರಿಯ ನಟಿ ಅಮಲಾ ಪೌಲ್. ಕಾಜಲ್ ಅಗರ್ವಾಲ್ ಹಿಂದಕ್ಕೆ ಸರಿದ ಕಾರಣ ಹೊಸ ನಾಯಕಿ ಸಿನಿಮಾಕ್ಕೆ ಅನಿವಾರ್ಯವಾಗಿತ್ತು.

ಹೊಸ ನಾಯಕಿಗಾಗಿ ಚಿತ್ರ ತಂಡ ಅಮಲಾ ಪೌಲ್ ಅವರಿಗೆ ಆಫರ್ ನೀಡಿದ್ದು, ಅವರು ಸಿನಿಮಾದಲ್ಲಿ ನಟಿಸಲು ದೊಡ್ಡ ಮೊತ್ತದ ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಗೋಸ್ಟ್ ಸಿನಿಮಾದಲ್ಲಿ ಗುಡ್ಡ ಗಾಡು ಪರಿಸರದಲ್ಲಿ ಸನ್ನಿವೇಶವೊಂದರಲ್ಲಿ ಉಳಿದುಕೊಂಡಾಗ, ಅವರ ನಡುವೆ ಮೂಡುವ ಪ್ರೀತಿ , ಕೆಲವು ಹಸಿ ಬಿಸಿ ದೃಶ್ಯಗಳು ಹಾಗೂ ಚುಂಬನ ದೃಶ್ಯಗಳು ಸಹಾ ಇರಲಿದೆ ಎನ್ನಲಾಗಿದ್ದು, ಇಂತಹ ದೃಶ್ಯಗಳಲ್ಲಿ ನಟಿಸಲು ಅಮಲಾ ಪೌಲ್ ಹೆಚ್ಚಿನ ಸಂಭಾವನೆ ಕೇಳಿದ್ದಾರೆನ್ನುವ ಸುದ್ದಿ ಸದ್ದು ಮಾಡಿದೆ.

ಸಿನಿಮಾ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ ಎನ್ನಲಾಗಿದೆ. ನಾಯಕಿ ಬದಲಾದ ಕಾರಣದಿಂದ ಸಿನಿಮಾ ಆರಂಭ ತುಸು ವಿಳಂಬವಾಗಿದ್ದು ನಿಜ. ಇನ್ನು ಅಕ್ಕಿನೇನಿ ನಾಗಾರ್ಜುನ ಅವರು ಬಿಗ್ ಬಾಸ್ ನಲ್ಲೂ ಬ್ಯುಸಿಯಿದ್ದು, ಅದರ ನಡುವೆಯೇ ಈ ಹೊಸ ಸಿನಿಮಾವನ್ನು ಸಹಾ ನಿಭಾಯಿಸುತ್ತಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸುವ ಆಲೋಚನೆಯನ್ನು ಚಿತ್ರ ತಂಡ ಹೊಂದಿದೆ ಎನ್ನಲಾಗಿದೆ.

Leave a Comment