ನಾಗಾರ್ಜುನ ಜನ್ಮದಿನದ ಸಂಭ್ರಮದಲ್ಲಿ ಸಮಂತ ಮಿಸ್ಸಿಂಗ್: ಸಮಂತ ಎಲ್ಲಿ? ಅಭಿಮಾನಿಗಳ ಪ್ರಶ್ನೆ

Entertainment Featured-Articles News
45 Views

ಟಾಲಿವುಡ್ ನ ಜನಪ್ರಿಯ ತಾರಾ ದಂಪತಿಯಾದ ನಾಗ ಚೈತನ್ಯ ಮತ್ತು ಸಮಂತಾ ನಡುವಿನ ವೈವಾಹಿಕ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎನ್ನುವ ಸುದ್ದಿಗಳು ಈಗಾಗಲೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿರುವಾಗಲೇ ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ನಡೆದು ಸಿಕ್ಕಾಪಟ್ಟೆ ಸದ್ದು ಸುದ್ದಿ ಮಾಡಿದೆ. ಹೌದು ಟಾಲಿವುಡ್ ನ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಅವರು ಇತ್ತೀಚೆಗಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಹೊರಗೆ ಕೊರೊನಾ ಕಾರಣದಿಂದಾಗಿ ನಾಗಾರ್ಜುನ ಅವರು ಮನೆಯಲ್ಲೇ ಸರಳವಾಗಿ ಕುಟುಂಬದ ಸದಸ್ಯರ ಜೊತೆಗೆ ತಮ್ಮ ಜಬ್ಮದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ಅವರ ಜನ್ಮ ದಿನದ ಆಚರಣೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿದೆ.

ನಟ ನಾಗಾರ್ಜುನ ಅವರು ಮನೆಯಲ್ಲಿ ಕುಟುಂಬದ ಸದಸ್ಯರ ಜೊತೆಗೆ ತೆಗೆದುಕೊಂಡ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಮೇಲೆ ಫೋಟೋ ಗಮನಿಸಿದವರಿಗೆ ಸಮಂತಾ ಅಲ್ಲಿ ಮಿಸ್ ಆಗಿರುವುದು ಕಂಡಿದೆ. ಇದನ್ನು ನೋಡಿದ ಅಭಿಮಾನಿಗಳು ಸಮಂತ ಎಲ್ಲಿ ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ‌. ಹುಟ್ಟುಹಬ್ಬದ ಈ ಸಂಭ್ರಮಾಚರಣೆಯಲ್ಲಿ ನಾಗಾರ್ಜುನ ಅವರ ಸೊಸೆ ಸಮಂತಾ ಕಾಣದೇ ಇರುವುದು ಇದೀಗ ಅನುಮಾನಗಳು ಹಾಗೂ ಪ್ರಶ್ನೆಗಳು ಎದ್ದಿವೆ. ನಾಗ ಚೈತನ್ಯ ಹಾಗೂ ಸಮಂತ ಸಂಬಂಧದ ಬಗ್ಗೆ ಎದ್ದಿರುವ ಅನುಮಾನಗಳಿಗೆ ಇದು ಇಂಬು ನೀಡುವಂತಾಗಿದೆ.

ಹೌದು ಕಳೆದ ಜುಲೈ ಕೊನೆಯಲ್ಲಿ ಇದ್ದಕ್ಕಿದ್ದಂತೆ ನಟಿ ಸಮಂತ ತಮ್ಮ ಹೆಸರಿನ ಜೊತೆಗಿದ್ದ ಅಕ್ಕಿನೇನಿ ಎನ್ನುವ ಸರ್ ನೇಮ್ ಅನ್ನು ತೆಗೆದು ಹಾಕಿದ್ದಾರೆ. ಅದಾದ ನಂತರ ಅವರು ಈ ವಿಚಾರವಾಗಿ ತಾನು ವಿ ವಾದಗಳು ಹಾಗೂ ಟ್ರೋಲ್ ಗಳ ಬಗ್ಗೆ ಜನರು ಪ್ರಶ್ನೆ ಮಾಡಿದಾಗ ಅಲ್ಲ, ತನಗೆ ಇಷ್ಟವಾದಾಗ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯಗಳು ಇರುತ್ತದೆ ಎಂದು ಹೇಳುತ್ತಾರೆ. ಒಟ್ಟಾರೆ ಈ ವಿಷಯದ ಬಗ್ಗೆ ನಾಗ ಚೈತನ್ಯ ಆಗಲೀ, ಸಮಂತ ಆಗಲೀ ಇನ್ನೂ ಯಾವುದೇ ವಿಷಯವನ್ನು ಮಾತನಾಡಿಲ್ಲ.

Leave a Reply

Your email address will not be published. Required fields are marked *