ನಾಗಾರ್ಜುನ ಔಟ್, ಸಮಂತಾ ಇನ್: ಮಾಜಿ ಮಾವನಿಗೆ ಸಮಂತಾ ಜನಪ್ರಿಯತೆ ಕೊಟ್ಟಿದೆ ದೊಡ್ಡ ಶಾಕ್!!!

Entertainment Featured-Articles Movies News

ದಕ್ಷಿಣ ಸಿನಿಮಾರಂಗದಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸುದ್ದಿಯನ್ನು ಮಾಡುತ್ತಿರುವ ಏಕೈಕ ನಟಿಯೆಂದರೆ ಸಮಂತಾ. ಪ್ರತಿದಿನವೂ ಸಮಂತಾ ಕುರಿತಾಗಿ ಒಂದಲ್ಲಾ ಒಂದು ವಿಚಾರವಾಗಿ ಬಹಳ ದೊಡ್ಡ ಮಟ್ಟಕ್ಕೆ ಸುದ್ದಿಯಾಗುತ್ತಲೇ ಇದೆ. ಸಾಲು-ಸಾಲು ಸಿನಿಮಾಗಳು ಅದರ ಜೊತೆಗೆ ಜಾಹಿರಾತುಗಳು ಹೀಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಇದೀಗ ತಮ್ಮ ಮಾಜಿ ಮಾವ ತೆಲುಗು ಚಿತ್ರರಂಗದ ಹಿರಿಯ ಸ್ಟಾರ್ ನಟ ನಾಗಾರ್ಜುನ ಅವರಿಗೆ ದೊಡ್ಡ ಶಾಕ್ ನೀಡಿದ್ದಾರೆ. ಅಲ್ಲದೆ ಈ ವಿಷಯ ಈಗ ಮತ್ತೊಮ್ಮೆ ದೊಡ್ಡ ಸುದ್ದಿಯಾಗಿದೆ.

ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಖ್ಯಾತಿಯನ್ನು ಗಳಿಸಿರುವ ಬಿಗ್ ಬಾಸ್ ಈಗಾಗಲೇ ಹಲವು ಭಾಷೆಗಳಲ್ಲಿ ಪ್ರಸಾರ ಕಾಣುವ ಮೂಲಕ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ. ತೆಲುಗಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಟ ನಾಗಾರ್ಜುನ ಅವರು ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆದರೆ ಈಗ ಬಂದಿರುವ ಹೊಸ ಸುದ್ದಿಗಳ ಪ್ರಕಾರ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಟಿ ಸಮಂತಾ ನಿರೂಪಣೆ ಮಾಡುತ್ತಾರೆ ಎನ್ನಲಾಗಿದೆ.

ಕಳೆದ ವರ್ಷ ಟಾಲಿವುಡ್ ನಲ್ಲಿ ಕ್ಯೂಟ್ ಕಪಲ್ಸ್ ಎನಿಸಿಕೊಂಡಿದ್ದ ಸಮಂತ ಹಾಗೂ ನಾಗಚೈತನ್ಯ ವಿಚ್ಛೇದನದ ವಿಷಯ ಹೊರ ಬಂದಾಗ ಇದು ಅಭಿಮಾನಿಗಳಿಗೆ ಮಾತ್ರವೇ ಅಲ್ಲದೆ ದಕ್ಷಿಣ ಸಿನಿಮಾರಂಗದಲ್ಲಿ ಒಂದು ಶಾಕಿಂಗ್ ನ್ಯೂಸ್ ಆಗಿತ್ತು. ಇನ್ನು ವಿಚ್ಛೇದನದ ನಂತರ ಸಮಂತ ಹಿಂದೆಂದಿಗಿಂತಲೂ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಬೇಡಿಕೆ ಗಗನಕ್ಕೆ ಏರುತ್ತಿದೆ. ತೆಲುಗು, ತಮಿಳು, ಹಿಂದಿ ಹಾಗೂ ಹಾಲಿವುಡ್ ಚಿತ್ರಗಳಲ್ಲಿ ಕೂಡಾ ತೊಡಗಿಕೊಂಡಿದ್ದಾರೆ ಸಮಂತಾ.

ಈಗ ಇವೆಲ್ಲವುಗಳ ನಡುವೆ ಹೊರಬಂದಿರುವ ಹೊಸ ಸುದ್ದಿಯ ಪ್ರಕಾರ ತೆಲುಗಿನ ಬಿಗ್ ಬಾಸ್ ನ ಹೊಸ ಸೀಸನ್ ಅಂದರೆ ಸೀಸನ್ 6 ಅನ್ನು ಸಮಂತಾ ನಿರೂಪಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಒಮ್ಮೆ ಸಮಂತಾ ತಮ್ಮ ಮಾವನ ಗೈರುಹಾಜರಿಯಲ್ಲಿ ಅತಿಥಿ ನಿರೂಪಕಿಯಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು. ಈಗ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಸಮಂತಾ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವುದು ವಾಹಿನಿಯ ಆಸೆಯಾಗಿದೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಹೊರಬರಬೇಕಾಗಿದೆ.

Leave a Reply

Your email address will not be published.