ನಾಗಚೈತನ್ಯ ರನ್ನು ನಂಬಿದ ಸಮಂತಾಗೆ ಎದುರಾಯ್ತು ಈ ಎರಡು ಪ್ರಮುಖ ನಷ್ಟಗಳು: ಬೇಸರ ಪಟ್ಟ ಅಭಿಮಾನಿಗಳು

Written by Soma Shekar

Published on:

---Join Our Channel---

ಕಳೆದ ಕೆಲವು ತಿಂಗಳುಗಳಿಂದ ದಕ್ಷಿಣ ಸಿನಿ ರಂಗದ ಪ್ರಖ್ಯಾತ ನಟಿ ಸಮಂತಾ ಬದುಕಿನ ಹಲವು ವಿಚಾರಗಳು ದೊಡ್ಡ ಮಟ್ಟದಲ್ಲಿ ಸದ್ದು ಸುದ್ದಿಯನ್ನು ಮಾಡಿದೆ. ಸಮಂತಾ ಅವರ ವೈಯಕ್ತಿಕ ಜೀವನದಲ್ಲಿ ಎದ್ದ ಕಲಹಗಳು ಅದರಿಂದ ಆದ ಪರಿಣಾಮ ಎಲ್ಲರ ಮುಂದೆ ಇದೆಯಾದರೂ, ಅದರ ಹಿಂದಿನ ಕಾರಣ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಸಮಂತಾ ಅಧಿಕೃತವಾಗಿ ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿದ ನಂತರವೂ ಸಹಾ ಆಕೆಯ ಕುರಿತಾದ ಗಾಸಿಪ್ ಗಳಿಗೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ. ತನ್ನ ಬಗ್ಗೆ ಹರಡುತ್ತಿರುವ ಗಾಸಿಪ್ ಗಳ ಬಗ್ಗೆ ಸಮಂತಾ ಈಗಾಗಲೇ ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಹೊರಹಾಕಿದ್ದಾರೆ.

ಇನ್ನು ವಿಚಿತ್ರವೆಂದರೆ ಇಷ್ಟು ವರ್ಷ ಪ್ರೀತಿಸಿ, ಮದುವೆಯಾಗಿ, ಜೊತೆಯಲ್ಲಿದ್ದು ಬೇರೆಯಾದ ನಂತರ ನಾಗಚೈತನ್ಯ ಮಾತ್ರ ಸಮಂತ ಬಗ್ಗೆ ಇಷ್ಟೆಲ್ಲಾ ಸುದ್ದಿಗಳು ಹರಡುತ್ತಿದ್ದರೂ ಸಹಾ ಯಾವುದಕ್ಕೂ ಅದು ಸುಳ್ಳು ಎಂದಾಗಲೀ, ಅದೆಲ್ಲಾ ಗಾಳಿ ಸುದ್ದಿಗಳು ಎಂದಾಗಲೀ ಹೇಳದೆ ತನ್ನ ಪಾಡಿಗೆ ತಾನು ಮೌನವಾಗಿ ಉಳಿದಿದ್ದಾರೆ. ಇಷ್ಟೆಲ್ಲ ನಡೆದಾದ ಮೇಲೆ ಬಹಳ ಪ್ರೀತಿಯಿಂದ ಇದ್ದ ಈ ಜೋಡಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಇಂತಹದೊಂದು ಬಿರುಗಾಳಿ ಏಕೆ ಎದ್ದಿತು ಎನ್ನುವ ವಿಚಾರ ಮತ್ತೆ ಮತ್ತೆ ಚರ್ಚೆಗೆ ಒಳಪಡುತ್ತಿದೆ.

ಈಗ ಇವೆಲ್ಲವುಗಳ ನಡುವೆ ನಾಗಚೈತನ್ಯ ರನ್ನು ನಂಬಿದ್ದಕ್ಕೆ ಸಮಂತಾಗೆ ಎದುರಾದ ಪ್ರಮುಖ ನಷ್ಟಗಳ ಕುರಿತಾಗಿ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿ ಎರಡು ಪ್ರಮುಖವಾದ ನಷ್ಟಗಳು ಯಾವುದು ಎನ್ನುವ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಒಂದು ಮೂಲದ ಪ್ರಕಾರ ಸಮಂತಾ ಸಿನಿಮಾ ರಂಗದಿಂದ ಒಂದು ಬ್ರೇಕ್ ಪಡೆದುಕೊಂಡು ನಾಗಚೈತನ್ಯ ಜೊತೆಗೆ ಮಗುವನ್ನು ಪಡೆಯುವ ಆಲೋಚನೆ ಮಾಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ನಟಿ ತನ್ನ ಹೊಸ ಸಿನಿಮಾ ಶಾಕುಂತಲಂ ಬೇಗ ಮುಗಿಸುವಂತೆ ನಿರ್ದೇಶಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಗು ಮಾಡಿಕೊಳ್ಳುವ ಆಸೆಯಿಂದ ಸಿನಿಮಾದಿಂದ ಬ್ರೇಕ್ ಪಡೆಯಲು ನಿರ್ಧರಿಸಿದ್ದ ಸಮಂತಾ, ತಮಿಳು ನಿರ್ದೇಶಕ ಆ್ಯಟ್ಲಿ ಶಾರುಖ್ ಖಾನ್ ಗಾಗಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾವನ್ನು ಕೂಡಾ ರಿಜೆಕ್ಟ್ ಮಾಡಿದ್ದರು ಎನ್ನಲಾಗಿದೆ.. ಪ್ರಸ್ತುತ ಶಾರುಖ್ ಖಾನ್ ಜೊತೆ ನಟಿ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆದರೆ ಈ ಅವಕಾಶ ಮೊದಲು ಸಮಂತಾಗೆ ತಂದಿದ್ದು ಎನ್ನಲಾಗಿದೆ. ಆದರೆ ನಟಿ ಸಮಂತಾ ವೈಯಕ್ತಿಕ ಕಾರಣದಿಂದ ನಟಿಸಲು ಆಗುವುದಿಲ್ಲ ಎಂದು ಸಿನಿಮಾ ರಿಜೆಕ್ಟ್ ಮಾಡಿದ್ದರು ಹ ಎನ್ನಲಾಗಿದೆ.

ಹಾಗಾದರೆ ಆ ವೈಯಕ್ತಿಕ ಕಾರಣ ನಟಿ ಸಿನಿಮಾ ರಂಗದಿಂದ ಪಡೆಯಲು ನಿರ್ಧರಿಸಿದ್ದ ಬ್ರೇಕ್ ಎಂದು ಹೇಳಲಾಗುತ್ತಿದೆ. ಫ್ಯಾಮಿಲಿ ಮ್ಯಾನ್ ಟು ವೆಬ್ ಸಿರೀಸ್ ನ ದೊಡ್ಡ ಯಶಸ್ಸಿನ ನಂತರ ಸಮಂತಾಗೆ ಬಾಲಿವುಡ್ ನ ದ್ವಾರ ತೆರೆದುಕೊಂಡು, ಹೊಸ ಹೊಸ ಅವಕಾಶಗಳು ಹರಿದು ಬರ ತೊಡಗಿದ್ದವು. ಇನ್ನು ವಿಚ್ಚೇದನದ ನಂತರ ಸಮಂತಾ ದೊಡ್ಡ ಮೊತ್ತದ ಸಂಭಾವನೆ ಪಡೆದು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುವುದು ಎನ್ನಲಾಗಿದೆ.

Leave a Comment