ನಾಗಚೈತನ್ಯ ಮತ್ತು ಸಮಂತಾ ಪ್ರೇಮ ಶುರುವಾಗೋದಕ್ಕೆ ಮಹೇಶ್ ಬಾಬು ಕಾರಣ? ಸಖತ್ ಇಂಟರೆಸ್ಟಿಂಗ್ ಸ್ಟೋರಿ

Entertainment Featured-Articles Movies News

ಟಾಲಿವುಡ್ ನಲ್ಲಿ ನಟ ಮಹೇಶ್ ಬಾಬು ಸ್ಟಾರ್ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ವಯಸ್ಸು 40 ದಾಟದ್ದರೂ ಇಂದಿಗೂ ಯುವಕನಂತೆ ಕಾಣಿಸುವ ಮಹೇಶ್ ಬಾಬು ವರ್ಚ ಕಳೆದಂತೆ ವಯಸ್ಸು ಕಡಿಮೆಯಾಗುತ್ತಿದೆಯೇನೋ ಎನ್ನುವಂತೆ ಕಾಣುತ್ತಿದ್ದಾದೆ. ಬಹು ದೊಡ್ಡ ಸ್ಟಾರ್ ಡಂ ಪಡೆದಿರುವ ಇವರಿಗೆ ಅಭಿಮಾನಿಗಳ ಸಂಖ್ಯೆ ಸಹಾ ಕಡಿಮೆಯೇನಿಲ್ಲ. ಅದರಲ್ಲೂ ಅನೇಕ ಯುವತಿಯರಿಗೆ ಪ್ರಿನ್ಸ್ ಮಹೇಶ್ ಬಾಬು ಕನಸಿನ ರಾಜಕುಮಾರನಾಗಿದ್ದಾರೆ ಎನ್ನುವುದು ನಿಜ. ಮತ್ತೊಂದು ಕಡೆ ನಟಿ ಸಮಂತಾ ಟಾಲಿವುಡ್ ನ ಸ್ಟಾರ್ ನಟಿ, ಈಗ ಬಾಲಿವುಡ್ ಕಡೆಗೂ ಹೊರಟಾಗಿದೆ.

ಇತ್ತೀಚಿನ ದಿನಗಳಲ್ಲಿ ಸಮಂತಾ ಹವಾ ಜೋರಾಗಿಯೇ ಇದೆ. ಸಿನಿಮಾ, ಫೋಟೋ ಶೂಟ್, ಜಾಹೀರಾತುಗಳು ಎಂದು ಸಮಂತಾ ಸಿಕ್ಕಾಪಟ್ಟೆ ಬ್ಯುಸಿ. ಸಮಂತಾ ಎಲ್ಲಿದ್ದರೆ ಅಲ್ಲಿ ಸುದ್ದಿ ಎನ್ನುವಷ್ಟು ಕ್ರೇಜ್ ಸೃಷ್ಟಿಯಾಗಿದೆ. ಸಮಂತ ಮತ್ತು ನಟ ಮಹೇಶ್ ಬಾಬು ಇಬ್ಬರೂ ದೂಕುಡು ಸಿನಿಮಾದಲ್ಲಿ, ನಂತರ ಬ್ರಹ್ಮೋತ್ಸವಂ ಸಿನಿಮಾದಲ್ಲಿ ಜೊತೆಯಾಗಿ ತೆರೆಯ ಮೇಲೆ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು‌. ಆದರೆ ಅದಕ್ಕೂ ಮುನ್ನ ಮಹೇಶ್ ಬಾಬು ಸಮಂತಾ ಜೊತೆಗೆ ಒಂದು ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು ಎನ್ನುವ ವಿಷಯ ಅನೇಕರಿಗೆ ತಿಳಿದಿಲ್ಲ. ‌ಹಾಗಾದ್ರೆ ಯಾವುದು ಆ ಸಿನಿಮಾ ತಿಳಿಯೋಣ ಬನ್ನಿ‌.

ನಟಿ ಸಮಂತಾ 2010 ರಲ್ಲಿ ಏಮ್ ಮಾಯಾ ಚೇಸಾವೇ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟರು. ಈ ಸಿನಿಮಾದಲ್ಲಿ ನಟ ನಾಗಚೈತನ್ಯ ಅವರು ನಾಯಕನಾಗಿದ್ದರು. ನಾಗಚೈತನ್ಯ ಜೋಶ್ ಸಿನಿಮಾದ ಮೂಲಕ ಎಂಟ್ರಿ ನೀಡಿದ್ದರಾದರೂ ಆ ಸಿನಿಮಾದಿಂದ ಅವರು ಹೆಸರನ್ನು ಪಡೆಯುವುದು ಸಾಧ್ಯವಾಗಿರಲಿಲ್ಲ. ಆದರೆ ಏಮ್ ಮಾಯ ಚೇಸಾವೇ ಸಿನಿಮಾದ ಮೂಲಕ ನಾಗಚೈತನ್ಯ ಸಹಾ ಸದ್ದು ಮಾಡಿದರು. ಗೌತಮ್ ಮೆನೆನ್ ನಿರ್ದೇಶನದ ಈ ಸಿನಿಮಾ ತಮಿಳಿನಲ್ಲಿ ಸಿಂಬು ನಟಿಸಿದ್ದರು, ಅಲ್ಲಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅನಂತರ ನಾಗಚೈತನ್ಯ ಮತ್ತು ಸಮಂತಾ ನಡುವೆ ಸ್ನೇಹ ಸಹಾ ಆಗಿತ್ತು.

ತಮಿಳಿನ ಸಿನಿಮಾವನ್ನು ತೆಲುಗಿಗೆ ಡಬ್ ಮಾಡುವ ಬದಲು ರೀಮೇಕ್ ಆಲೋಚನೆ ಮಾಡಿದಾಗ, ನಿರ್ದೇಶಕ ಗೌತಮ್ ಮೆನನ್ ಅವರು ಈ ಕಥೆಯನ್ನು ತೆಗೆದುಕೊಂಡು ಹೋಗಿ ಮಹೇಶ್ ಬಾಬು ಅವರಿಗೆ ಹೇಳಿದ್ದಾರೆ.‌ ನಟ ಮಹೇಶ್ ಬಾಬು ಅವರಿಗೆ ಸಿನಿಮಾ ಕಥೆ ಇಷ್ಟವೇನೋ ಆಗಿತ್ತು. ಆದರೆ ಅವರ ಸ್ಟಾರ್ ಡಂ ಗೆ, ಅವರ ಇಮೇಜ್ ಗೆ ಆ ಪಾತ್ರ ಹೊಂದುವುದಿಲ್ಲ ಎನ್ನುವ ಕಾರಣಕ್ಕೆ ಅವರು ಆ ಸಿನಿಮಾ ರಿಜೆಕ್ಟ್ ಮಾಡಿದರು. ನಂತರ ಆ ಪಾತ್ರಕ್ಕೆ ನಟ ನಾಗಚೈತನ್ಯ ಎಂಟ್ರಿ ಕೊಟ್ಟರು, ದೊಡ್ಡ ಹಿಟ್ ಪಡೆದರು. ಒಂದು ವೇಳೆ ಮಹೇಶ್ ಬಾಬು ಸಮಂತಾ ಜೊತೆಗೆ ಈ ಸಿನಿಮಾಕ್ಕೆ ಓಕೆ ಎಂದಿದ್ರೆ? ನಾಗಚೈತನ್ಯ ಮತ್ತು ಸಮಂತಾ ಎಲ್ಲಿ ಮೊದಲ‌ ಮೀಟ್ ಆಗ್ತಿದ್ರೋ ಏನೋ.

Leave a Reply

Your email address will not be published.