ನಾಗಚೈತನ್ಯ ಬಾಳಲ್ಲಿ ಮತ್ತೊಮ್ಮೆ ವಿವಾಹದ ಸಂಭ್ರಮ?? ಎರಡನೇ ಮದುವೆಗೆ ಸಿದ್ಧವಾದ್ರ ನಟ??

Entertainment Featured-Articles News

ದಕ್ಷಿಣ ಸಿನಿಮಾ ರಂಗದ ಮುದ್ದಾದ ಸ್ಟಾರ್ ದಂಪತಿ ಎಂದೇ ಅಭಿಮಾನಿಗಳ ಅಪಾರವಾದ ಅಭಿಮಾನವನ್ನು ಪಡೆದುಕೊಂಡಿದ್ದ ಜೋಡಿ ತೆಲುಗಿನ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಅವರದ್ದಾಗಿತ್ತು. ಆದರೆ ಕಳೆದ ವರ್ಷ ಇದ್ದಕ್ಕಿದ್ದ ಹಾಗೆ ಈ ಜೋಡಿಯು ವಿಚ್ಚೇದನದ ಮೂಲಕ ಬೇರೆಯಾಗಿದ್ದು ಮಾತ್ರ ದೊಡ್ಡ ಶಾ ಕಿಂ ಗ್ ಸುದ್ದಿಯಾಗಿದ್ದು ಸಹಾ ವಾಸ್ತವ. ಈ ಜೋಡಿಯ ಅಭಿಮಾನಿಗಳು ಆರಂಭದಲ್ಲಿ ಸ್ಟಾರ್ ದಂಪತಿಯ ನಡುವೆ ಮೈಮನಸ್ಸು ಉಂಟಾಗಿದೆ ಎನ್ನುವ ಸುದ್ದಿಗಳು ಬಂದಾಗ ಅರೆ, ಅದೆಲ್ಲಾ ಕೇವಲ ಗಾಸಿಪ್ ಎಂದಿದ್ದರು.

ಆದರೆ ಅನಂತರ ಅದೇ ಗಾಸಿಪ್ ನಿಜವಾದಾಗ,‌ಈ ಜೋಡಿ ವಿಚ್ಚೇದನದ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಿದಾಗ ಖಂಡಿತ ಅಭಿಮಾನಿಗಳು ಶಾ ಕ್ ಆದರು. ಅಲ್ಲದೇ ಈ ಜೋಡಿ ಮತ್ತೆ ಒಂದಾಗಬೇಕೆಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ಇನ್ನು ವಿಚ್ಚೇದನದ ನಂತರ ಸಮಂತ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ‌ಸದಾ ಹೊಸ ಹೊಸ ವಿಚಾರಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ ಇವೆಲ್ಲವುಗಳ ನಡುವೆ ವಿಚ್ಚೇದನದ ಕಾರಣ ಮಾತ್ರ ಇನ್ನೂ ಬಹಿರಂಗವಾಗಿಲ್ಲ.

ಸದಾ ಸಮಂತಾ ಸುದ್ದಿಯಲ್ಲಿ ಇರುವಾಗಲೇ ಇದೀಗ ನಾಗಚೈತನ್ಯ ಸಹಾ ಹೊಸ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು, ನಟ ನಾಗಚೈತನ್ಯ ಅವರು ಎರಡನೇ ಮದುವೆಯಾಗಲು ಸಿದ್ಧರಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಈ ಸುದ್ದಿ ಟಾಲಿವುಡ್ ವಲಯದಲ್ಲಿ ಒಂದು ಚರ್ಚೆಯನ್ನು ಹುಟ್ಟು ಹಾಕಿದೆ. ಇನ್ನು ಸುದ್ದಿಗಳ ಪ್ರಕಾರ ನಾಗಚೈತನ್ಯ ಯಾವುದೇ ಸಿನಿಮಾ ನಟಿಯನ್ನು ಮದುವೆಯಾಗುತ್ತಿಲ್ಲ ಎಂದು ಹೇಳಲಾಗಿದೆ.

ನಾಗಚೈತನ್ಯ ಅವರ ಲವ್ ಲೈಫ್ ಬಗ್ಗೆ ಹೇಳುವುದಾದರೆ ಸಮಂತಾಗೂ ಮೊದಲು ಅವರ ಜೀವನದಲ್ಲಿ ನಟಿ ಶೃತಿ ಹಾಸನ್ ಇದ್ದರು. ಆದರೆ ಅನಂತರ ವೈಯುಕ್ತಿಕ ಕಾರಣಗಳಿಂದ ಅವರು ದೂರಾದರು. ಅದಾದ ನಂತರವೇ ನಾಗಚೈತನ್ಯ ಜೀವನಕ್ಕೆ ಬಂದಿದ್ದು ಸಮಂತಾ. ಇಬ್ಬರು ಮದುವೆ ಕೂಡಾ ಆದರು. ಆದರೆ ಅದು ಹೆಚ್ಚು ವರ್ಷ ಉಳಿಯಲಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ನಟ ‌ನಾಗಚೈತನ್ಯ ಮತ್ತೊಬ್ಬ ನಟಿ ದಿವ್ಯಾಂಶ ಕೌಶಿಕ್ ಜೊತೆ ಅಫೇರ್ ಹೊಂದಿದ್ದಾರೆ ಎನ್ನುವ ಗಾಸಿಪ್ ಕೂಡಾ ಹರಡಿತ್ತು.

ದಿವ್ಯಾಂಶ ಕೌಶಿಕ್ ಮಜಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಎಲ್ಲಾ ಸುದ್ದಿಗಳ ಬೆನ್ನಲ್ಲೇ ಈಗ ಎರಡನೇ ಮದುವೆಯ ಸುದ್ದಿ ಕೇಳಿ ಬಂದಿದೆ. ಆದರೆ ನಾಗಚೈತನ್ಯ ಯಾವುದೇ ಸಿನಿಮಾ ನಟಿಯನ್ನು ಮದುವೆಯಾಗಲು ಆಸಕ್ತಿ ತೋರಿಲ್ಲ ಎನ್ನಲಾಗಿದ್ದು, ಅವರ ಎರಡನೇ ಮದುವೆ ವಿಷಯ ಎಷ್ಟು ನಿಜ ಎಂಬುದಕ್ಕೆ ಅಕ್ಕಿನೇನಿ ಕುಟುಂಬದ ಅಧಿಕೃತ ಹೇಳಿಕೆ ಬರುವವರೆಗೂ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *