ನಾಗಚೈತನ್ಯ ಬಹಳ ಮುಗ್ಧ, ನನಗೆ ಸ್ಪೂರ್ತಿ ಎಂದು ಹಾಡಿ ಹೊಗಳಿದ ಸಮಂತಾ: ವೀಡಿಯೋ ಮತ್ತೊಮ್ಮೆ ವೈರಲ್

Entertainment Featured-Articles News Viral Video
35 Views

ನಟಿ ಸಮಂತಾ ಮತ್ತು ನಟ ನಾಗಚೈತನ್ಯ ವಿಚ್ಚೇದನ ಪಡೆದು ದೂರವಾದ ಮೇಲೂ ಸಹಾ ಇಂದಿಗೂ ಈ ವಿಚಾರದಲ್ಲಿ ಅವರ ಅಭಿಮಾನಿಗಳಲ್ಲಿ ಒಂದು ಬೇಸರವಿದೆ. ಟಾಲಿವುಡ್ ನ ಮುದ್ದಾದ ಜೋಡಿಯೆಂದೇ ಹೆಸರಾಗಿದ್ದವರು ಏಕಾಏಕೀ ವಿಚ್ಚೇದನ ಪಡೆಯುವ ವಿಚಾರ ಹಂಚಿಕೊಂಡು ಹೀಗೆ ದೂರಾಗಿದ್ದು ಅವರ ಜೋಡಿಯನ್ನು ಮೆಚ್ಚಿದ್ದವರ ಮನಸ್ಸಿಗೆ ಬೇಸರವನ್ನು ತಂದಿತ್ತು. ಪರಿಸ್ಥಿತಿ ಈಗಲೂ ಹೇಗಿದೆ ಎಂದರೆ ಸೋಶಿಯಲ್ ಮೀಡಿಯಾಗಳಲ್ಲಿ ಸಮಂತಾ ಅಥವಾ ನಾಗಚೈತನ್ಯ ಮತ್ತೆ ಒಂದಾಗಬೇಕು ಎಂದು ಬೇಡಿಕೆ ಇಡುವ ಅಭಿಮಾನಿಗಳ ಸಹಾ ಇದ್ದಾರೆ.

ಅಭಿಮಾನಿಗಳು ಈ ಜೋಡಿ ಹಿಂದೆ ಮಾತನಾಡಿದ್ದ ಮಾತುಗಳು, ಒಬ್ಬರ ಬಗ್ಗೆ ಮತ್ತೊಬ್ಬರು ಹಂಚಿಕೊಂಡಿದ್ದ ವಿಚಾರಗಳನ್ನು ಆಗಾಗ ಶೇರ್ ಮಾಡಿಕೊಂಡು ಮೆಲುಕು ಹಾಕುವುದುಂಟು. ಸಮಂತಾ ಮತ್ತು ನಾಗಚೈತನ್ಯ ಪರಸ್ಪರ ಇಷ್ಟಪಟ್ಟು, ಪ್ರೀತಿಸಿ ಮದುವೆಯಾದ ಜೋಡಿ. ಹಲವು ವರ್ಷಗಳ ಅವರ ಬಾಂಧವ್ಯವನ್ನು ಮದುವೆಯ ಮೂಲಕ ಇನ್ನೊಂದು ಸಂಭ್ರಮದ ಹಂತಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ಆ ಸಂಭ್ರಮ, ಸಂತೋಷ ಅಲ್ಪ ಕಾಲದಲ್ಲೇ ಕೊನೆಯಾಗಿದ್ದು ಮಾತ್ರ ಬೇಸರ ತಂದಿತ್ತು.

ಇನ್ನು ಈಗ ಸಮಂತಾ ಈ ಹಿಂದೆ ಒಂದು ಶೋ ನಲ್ಲಿ ನಾಗಚೈತನ್ಯ ಬಗ್ಗೆ ಆಡಿದ್ದ ಕೆಲವು ಆಸಕ್ತಿಕರ ಮಾತುಗಳು, ಹಂಚಿಕೊಂಡಿದ್ದ‌ ವಿಚಾರಗಳ ವೀಡಿಯೋ ಈಗ ಮತ್ತೊಮ್ಮೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಂದು ಸಮಂತಾ ಹೇಳಿದ್ದ ಮಾತುಗಳನ್ನು ಕೇಳಿ ಅಭಿಮಾನಿಗಳು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹೌದು ತೆಲುಗಿನ ಖ್ಯಾತ ನಟ, ಬಾಹುಬಲಿ ಖ್ಯಾತಿ ನಟ ರಾಣಾ ದಗ್ಗುಬಾಟಿ ನಿರೂಪಣೆ ಮಾಡುತ್ತಿದ್ದ ನಂಬರ್ ಒನ್ ಯಾರಿ ವಿತ್ ರಾಣಾ‌ ಶೋ ಗೆ ಸಮಂತಾ ಒಮ್ಮೆ ಅತಿಥಿಯಾಗಿ ಆಗಮಿಸಿದ್ದರು.

ಶೋ ನಲ್ಲಿ ಫಿಟ್ನೆಸ್ ಕುರಿತಾಗಿ ಹೆಚ್ಚು ಗಮನ ನೀಡುತ್ತಾ, ಹೆಚ್ಚು ಸಮಯವನ್ನು ಜಿಮ್, ವರ್ಕೌಟ್ ಎಂದು ಕಳೆಯುವ ಸಮಂತಾಗೆ ಈ ವಿಷಯದಲ್ಲಿ ಯಾರು ಸ್ಪೂರ್ತಿ ಎಂದು ಕೇಳಿದಾಗ ಸಮಂತಾ ನಾಗಚೈತನ್ಯ ಹೆಸರನ್ನು ಹೇಳಿದ್ದರು. ಅದು ಮಾತ್ರವೇ ಅಲ್ಲದೇ ನಟ ರಾಣಾ ತೆಲುಗು ಸಿನಿಮಾ ರಂಗದಲ್ಲಿನ ನಾಯಕರ ಕೆಲವು ಕ್ಯಾಟಗರಿ ಕೇಳಿ, ಅದಕ್ಕೆ ನಿಮ್ಮ ಆಯ್ಕೆಯ ನಟ ಯಾರು ಎನ್ನುವ ಪ್ರಶ್ನೆಗಳನ್ನು ಕೇಳುವಾಗ, ಬಹಳ ಮುಗ್ಧ ನಾಯಕ ಎನ್ನುವ ಬಿರುದು ಯಾರಿಗೆ ನೀಡುವಿರಿ?? ಎಂದು ಕೇಳಿದ ಪ್ರಶ್ನೆಗೂ ಸಹಾ ಸಮಂತಾ ನಾಗಚೈತನ್ಯ ಹೆಸರನ್ನೇ ಹೇಳಿದ್ದರು. ಇದೇ ದೃಶ್ಯದ ವೀಡಿಯೋ ಈಗ ಮತ್ತೊಮ್ಮೆ ವೈರಲ್ ಆಗಿದೆ.

Leave a Reply

Your email address will not be published. Required fields are marked *