ನಾಗಚೈತನ್ಯ ನೆನಪು ಅಳಿಸಿ ಹಾಕಲು ಸಮಂತಾ ಹೀಗೆ ಮಾಡ್ತಾರಂತ ಯಾರೂ ಊಹೆ ಮಾಡಿರಲಿಲ್ಲ

Written by Soma Shekar

Published on:

---Join Our Channel---

ನಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಅಧಿಕೃತವಾಗಿ ಘೋಷಣೆಯಾಗಿ ದಿನಗಳೂ ಕಳೆದರೂ ಕೂಡಾ ಸಮಂತಾ ವಿಷಯ ಇನ್ನೂ ಬಹಳ ಚರ್ಚೆಗಳಿಗೆ ಕಾರಣವಾಗಿದೆ. ಬಹುಶಃ ವಿಚ್ಚೇದನದ ನಂತರ ನಾಗಚೈತನ್ಯ ಗಿಂತ ಹೆಚ್ಚು ಗಾಸಿಪ್ ಗಳಿಗೆ ಕಾರಣವಾಗಿರುವುದು ಸಮಂತಾ ವಿಚಾರ. ಸುದ್ದಿಗಳಾಗಿರುವುದು ಸಹಾ ಸಮಂತಾ ವಿಚಾರವಾಗಿಯೇ ಎನ್ನುವುದು ಕೂಡಾ ವಾಸ್ತವ. ಈ ಎಲ್ಲಾ ವಿಚಾರಗಳಿಂದ ಬೇಸತ್ತ ಸಮಂತಾ ಟ್ರಾವೆಲಿಂಗ್ ನಲ್ಲಿ ಸಮಯ ಕಳೆಯುತ್ತಾ ಮನಸ್ಸಿಗೊಂದು ನೆಮ್ಮದಿಯನ್ನು ಪಡೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ತನ್ನ ಬಗ್ಗೆ ಗಾಸಿಪ್ ಗಳನ್ನು ಹರಡಿರುವುದಕ್ಕೆ ಬೇಸತ್ತು ಸಮಂತಾ ಈಗಾಗಲೇ ಕೆಲವು ಯೂಟ್ಯೂಬ್ ಚಾನೆಲ್ ಗಳ ವಿ ರು ದ್ಧ ಕೋರ್ಟ್ ಮೆಟ್ಟಿಲೇರಿದ್ದು ತೀರ್ಪು ಕೂಡಾ ಸಮಂತಾ ಪರವಾಗಿ ಬಂದಿದೆ. ಕೋರ್ಟ್ ಯೂಟ್ಯೂಬ್ ಚಾನೆಲ್ ಗಳಿಗೆ ಸಮಂತಾ ಬಗ್ಗೆ ಪ್ರಸಾರ ಮಾಡಿರುವ ಸುದ್ದಿಗಳ ವೀಡಿಯೋಗಳನ್ನು ತೆಗೆಯುವ ಆದೇಶವನ್ನು ನೀಡಿಯಾಗಿದೆ. ಈಗ ಇನ್ನೊಂದೆಡೆ ಸಮಂತಾ ನಾಗಚೈತನ್ಯ ಅವರ ನೆನಪನ್ನು ಒಂದೊಂದಾಗಿ ಅಳಿಸಿ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಹೌದು, ಸಮಂತಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಈ ಹಿಂದೆ ನಾಗಚೈತನ್ಯ ಜೊತೆಗೆ ಇದ್ದ, ನಾಗಚೈತನ್ಯ ಜೊತೆ ಕಳೆದ ಮಧುರ ಕ್ಷಣಗಳಿಗೆ ಸಾಕ್ಷಿ ಎಂಬಂತೆ ಶೇರ್ ಮಾಡಿಕೊಂಡಿದ್ದಂತಹ ಫೋಟೋಗಳನ್ನು ಒಂದೊಂದಾಗಿ ಸಮಂತಾ ಡಿಲೀಟ್ ಮಾಡುತ್ತಾ ಬಂದಿದ್ದಾರೆ. ಹೌದು ಸಮಂತಾ ಇಂದು ಬೆಳಿಗ್ಗೆಯಿಂದಲೇ ಇನ್ಸ್ಟಾಗ್ರಾಂ ನಲ್ಲಿ ಬಹುತೇಕ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಸುಮಾರು 80 ಫೋಟೋಗಳನ್ನು ಸಮಂತಾ ಡಿಲೀಟ್ ಮಾಡಿದ್ದು, ಇದು ಎಲ್ಲರ ಗಮನ ಸೆಳೆದಿದೆ.

ಹಾಗೆಂದು ಸಮಂತ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿಲ್ಲ. ಒಂದೆರಡು ಫೋಟೋಗಳನ್ನು ಹಾಗೆ ಇರಿಸಿದ್ದಾರೆ. ಆದರೆ ಅದನ್ನೂ ಡಿಲೀಟ್ ಮಾಡಬಹುದೇನೋ ಗೊತ್ತಿಲ್ಲ. ಈ ಹಿಂದೆ ಅಂದರೆ ವಿಚ್ಚೇದನದ ವೇಳೆಯಲ್ಲಿ ಸಮಂತಾ ಹಾಗೂ ನಾಗಚೈತನ್ಯ ತಾವು ವಿಚ್ಚೇದನದ ನಂತರವೂ ಸ್ನೇಹಿತರಂತೆ ಇರುತ್ತೇವೆ ಎಂದು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

Leave a Comment