ನಾಗಚೈತನ್ಯ ಜೊತೆಗೆ 3.5 ವರ್ಷದ ವೈವಾಹಿಕ ಸಂಬಂಧದಲ್ಲಿ ಎದುರಾಯ್ತಾ ಸಮಸ್ಯೆ?? ನಟಿ ಸಮಂತ ಹೇಳಿದ್ದೇನು??

Written by Soma Shekar

Published on:

---Join Our Channel---

ನಟಿ ಸಮಂತ ಅಕ್ಕಿನೇನಿ ಫ್ಯಾಮಿಲಿ ಮ್ಯಾನ್ ಸೀಸನ್ ಟು ವೆಬ್ ಸೀರೀಸ್ ನಲ್ಲಿ ರಾಜಿಯಾಗಿ ನಟಿಸಿ ತಮ್ಮ ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಬಹಳಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇದರಲ್ಲಿನ ಅವರ ಅತ್ಯುತ್ತಮ ಅಭಿನಯಕ್ಕಾಗಿ ಮೆಲ್ಬರ್ನ್ ನಲ್ಲಿ ನಡೆದಂತಹ ಭಾರತೀಯ ಚಲನ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಎನ್ನುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ನಟಿ ಸಮಂತಾ. ಈ ನಟಿ ಜನಪ್ರಿಯ ನಟ ಅಕ್ಕಿನೇನಿ ನಾಗ ಚೈತನ್ಯ ಅವರ ಪತ್ನಿಯಾಗಿದ್ದಾರೆ. ಈ ದಂಪತಿ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ತಾರಾ ದಂಪತಿಯಾಗಿದ್ದಾರೆ. ಇವರ ಅಭಿಮಾನಿಗಳು ತಮ್ಮ ಅಭಿಮಾನ ನಟ ಹಾಗೂ ನಟಿಯ ಹೆಸರನ್ನು ಸೇರಿಸಿ ಚೈಸಮ್ ಎಂದು ಕರೆಯುವುದು ಉಂಟು,‌ಈ ಚೈಸಮ್ ಎಂದೇ ಜನಪ್ರಿಯವಾಗಿದೆ ಕೂಡಾ.

ಇವೆಲ್ಲವುಗಳ ನಡುವೆ ಕೆಲವು ದಿನಗಳ ಹಿಂದೆಯಷ್ಟೇ ನಟಿ ಸಮಂತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದಂತಹ ಸರ್ ನೇಮ್ ಅಕ್ಕಿನೇನಿ ಯನ್ನು ತೆಗೆದುಹಾಕಿದ ನಂತರ ಅವರ ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಗಳು ಉಂಟಾಗಿದೆಯೇ? ನಾಗಚೈತನ್ಯ ಹಾಗೂ ಸಮಂತಾ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆಯೇ, ಎನ್ನುವಂತಹ ಊಹಾಪೋಹಗಳು ಎಲ್ಲೆಡೆ ಸದ್ದು ಮಾಡುತ್ತಿದೆ. ಅಭಿಮಾನಿಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಈ ವಿಷಯವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜುಲೈ 31ರಂದು ಸಮಂತ ತಮ್ಮ ಹೆಸರಿನ ಜೊತೆಗಿದ್ದ ಅಕ್ಕಿನೇನಿ ಪದವನ್ನು ಟ್ವಿಟರ್ ಖಾತೆಯಿಂದ ತೆಗೆದುಹಾಕಿದ್ದರು.

ಅಂದಿನಿಂದಲೂ ಇದ್ದಕ್ಕಿದ್ದಂತೆ ಸಮಂತ ತಮ್ಮ ಹೆಸರಿನ ಜೊತೆಗಿದ್ದ ಜನಪ್ರಿಯ ಸ್ಟಾರ್ ಕುಟುಂಬದ ಹೆಸರಾದ ಅಕ್ಕಿನೇನಿಯನ್ನು ತೆಗೆದುಹಾಕಿದ್ದು ಏಕೆ?? ಎನ್ನುವ ಪ್ರಶ್ನೆ ಸಹಜವಾಗಿಯೇ ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ. ಈ ವಿಷಯದ ಕುರಿತಾಗಿ ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಸಮಂತ ಅವರನ್ನು ಪ್ರಶ್ನೆ ಮಾಡಲಾಯಿತು. ಆದರೆ ಸಮಂತಾ ಅದರ ಬಗ್ಗೆ ತುಟಿ ಬಿಚ್ಚಲಿಲ್ಲ, ಆ ವಿಚಾರವಾಗಿ ಅವರು ಹೆಚ್ಚೇನು ಮಾತನಾಡಲು ಬಯಸಲಿಲ್ಲ. ಆದರೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮಂತ ಯಾವುದೇ ಟ್ರೋಲ್ ಅಥವಾ ವಿವಾದದ ಬಗ್ಗೆ ನನಗೆ ಪ್ರತಿಕ್ರಿಯೆ ನೀಡಬೇಕು ಅನಿಸಿದಾಗ ಮಾತ್ರ ಪ್ರತಿಕ್ರಿಯಿಸುತ್ತೇನೆ ಜನ ಕೇಳಿದಾಗ ಅಲ್ಲ ಎಂದು ಹೇಳಿದ್ದಾರೆ.

ಯಾವುದೇ ವಿಷಯಗಳಿಗೂ ಪ್ರತಿಕ್ರಿಯಿಸಲು ನನಗೆ ಇಷ್ಟವಿಲ್ಲ. ಯಾವುದೇ ಸಂಘರ್ಷವನ್ನು ನಾನು ಬಯಸುವುದಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಸ್ವಂತ ಅಭಿಪ್ರಾಯಗಳು ಇರುತ್ತದೆ. ಅದೇ ರೀತಿ ನನಗೂ ನನ್ನ ಸ್ವಂತ ಅಭಿಪ್ರಾಯಗಳಿವೆ ಎಂದು ಹೇಳಿದ್ದಾರೆ. ಇನ್ನು ನಾಗಚೈತನ್ಯ ಅವರು ಕೂಡಾ ಸಿನಿಮಾ‌ ಸೆಟ್ ಗಳಲ್ಲಿ ಅಥವಾ ಹೊರಗೆ ಕುಟುಂಬದಲ್ಲಿ ಏನಾದರೂ ತೊಂದರೆ ಆಗಿದೆಯೇ ಎನ್ನುವ ಬಗ್ಗೆ ಯಾವುದೇ ರೀತಿಯ ವಿಷಯಗಳನ್ನು ಹೇಳುತ್ತಿಲ್ಲ. ನಾಗಚೈತನ್ಯ ಹಾಗೂ ಸಮಂತ ಗೋವಾ ದಲ್ಲಿ ಹೊಸ ಜಮೀನನ್ನು ಖರೀದಿ ಮಾಡಿದ್ದಾರೆ ಎನ್ನುವ ವಿಷಯವನ್ನು ಹೊರಬಂದಿದ್ದು, ಅಲ್ಲಿಹೊಸ ಸುಂದರವಾದ ಫಾರ್ಮ್ ಹೌಸ್ ನಿರ್ಮಾಣದ ಕಡೆಗೆ ಗಮನ ನೀಡಿದ್ದಾರೆ ಎಂದು ಸುದ್ದಿಗಳಾಗಿವೆ.

Leave a Comment