ನಾಗಕನ್ಯೆಯಾಗಿ ಕನ್ನಡ ಕಿರುತೆರೆಗೆ ರೀಎಂಟ್ರಿ ನೀಡಲು ಸಜ್ಜಾದ ಗಟ್ಟಿಮೇಳ ಆರತಿ ಖ್ಯಾತಿಯ ನಟಿ ಅಶ್ವಿನಿ!!

Entertainment Featured-Articles Movies News
30 Views

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಈ ಹಿಂದೆ ಆರತಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಅಶ್ವಿನಿ ಅವರು ಮನೆ ಮನೆ ಮಾತಾಗಿದ್ದ ನಟಿ. ಗಟ್ಟಿಮೇಳ ಆರಂಭವಾದಾಗಿನಿಂದ ಅಮೂಲ್ಯಳ ಹಿರಿಯಕ್ಕನಾಗಿ, ತಾಯಿಗೆ ತಕ್ಕ ಮಗಳಾಗಿ, ಮೂರು ಜನ ತಂಗಿಯರಿಗೆ ಎರಡನೇ ತಾಯಿಯ ಹಾಗೆ, ಹೆಚ್ಚು ಮಾತನಾಡದೇ ಮೌನದಲ್ಲೇ ತನ್ನ ಭಾವನೆಗಳನ್ನು ಹಂಚಿಕೊಳ್ಳುವ ಹುಡುಗಿಯಾಗಿ ಅಶ್ವಿನಿ ಅವರು ಆರತಿ ಪಾತ್ರಕ್ಕೆ ಜೀವ ತುಂಬುತ್ತಾ ಬಂದಿದ್ದರು. ಗಟ್ಟಿಮೇಳ ಮಾಡುವಾಗಲೇ ಅಶ್ವಿನಿ ಅವರು ತೆಲುಗಿನಲ್ಲಿ ನಾಗಭೈರವಿ ಹೆಸರಿನ ಸೀರಿಯಲ್ ನಲ್ಲಿ ನಾಗಿಣಿ ಪಾತ್ರಕ್ಕೆ ಬಣ್ಣ ಹಚ್ಚಿದರು.

ಇದಾದ ನಂತರ ಗಟ್ಟಿಮೇಳ ಧಾರಾವಾಹಿಯಿಂದ ಅವರು ಕೆಲವು ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದರು. ಆರತಿ ಪಾತ್ರಕ್ಕೆ ಬೇರೊಬ್ಬ ನಟಿಯ ಎಂಟ್ರಿ ಕೂಡಾ ಆಯಿತು. ನಟಿ ಅಶ್ವಿನಿ ಅವರು ಗಟ್ಟಿಮೇಳದಿಂದ ಹೊರ ಬಂದರೂ ಸಹಾ ಇಂದಿಗೂ ಅವರು ಆರತಿಯಾಗಿ ತಮ್ಮ ಮುಗ್ಧತೆಯಿಂದ ಜನರ ಮನಸ್ಸನ್ನು ಹೇಗೆ ಗೆದ್ದಿದ್ದರು ಎಂದರೆ ಜನ ಇಂದಿಗೂ ಅವರನ್ನು ಗಟ್ಟಿಮೇಳದ ಆರತಿ ಎಂದೇ ಗುರುತಿಸುವಷ್ಟು ಆ ಪಾತ್ರದ ಮೂಲಕ ಜನಮನ್ನಣೆಯನ್ನು ಅವರು ಪಡೆದುಕೊಂಡಿದ್ದಾರೆ ಎನ್ನುವುದು ನಿಜ.

ಇನ್ನು ಗಟ್ಟಿಮೇಳದಿಂದ ಹೊರ ಬಂದ ನಂತರ ಅಶ್ವಿನಿ ಅವರು ಕನ್ನಡದ ಬೇರೆ ಯಾವುದೇ ಧಾರಾವಾಹಿಯಲ್ಲಿ ಸಹಾ ಕಾಣಿಸಿಕೊಂಡಿರಲಿಲ್ಲ. ಅವರು ಅಭಿಮಾನಿಗಳು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ನಟಿಯನ್ನು ಯಾವ ಹೊಸ ಪ್ರಾಜೆಕ್ಟ್ ಮಾಡುತ್ತಿರುವಿರಿ ಎಂದು ಹಲವು ಬಾರಿ ಪ್ರಶ್ನಿಸುತ್ತಲೇ ಇದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ ನಟಿ ಅಶ್ವಿನಿ ಅವರು ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದು ಈ ವಿಷಯ ಅವರ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದೆ. ಹಾಗಾದರೆ ಯಾವ ಸೀರಿಯಲ್ ನಲ್ಲಿ ಅಶ್ವಿನಿ ಅವರು ನಟಿಸುತ್ತಿದ್ದಾರೆ ಅನ್ನೋದಕ್ಕೆ ಉತ್ತರ ಇಲ್ಲಿದೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಅಶ್ವಿನಿ ಅವರಿಗೆ ಇನ್ಸ್ಟಾಗ್ರಾಂ ನಲ್ಲಿ ದೊಡ್ಡ ಫಾಲೋಯಿಂಗ್ ಇದೆ. ಅಲ್ಲಿ ರೀಲ್ಸ್ ವೀಡಿಯೋಗಳ ಮೂಲಕ, ಹೊಸ ಹೊಸ ಫೋಟೋ ಶೂಟ್ ಗಳ ಫೋಟೋಗಳ ಮೂಲಕ ಅಶ್ವಿನಿ ಅವರು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಲೇ ಇರುತ್ತಾರೆ. ತೆಲುಗಿನಲ್ಲಿ ನಾಗಭೈರವಿ ಸೀರಿಯಲ್ ನಲ್ಲಿ ಅವರ ನಾಗಿಣಿ ಪಾತ್ರಕ್ಕೆ ತೆಲುಗಿನ ಜನರ ಅಪಾರ ಮೆಚ್ಚುಗೆ ಸಿಕ್ಕಿತ್ತು. ಕಾರಣಾಂತರಗಳಿಂದ ಆ ಪಾತ್ರದಿಂದಲೂ ಹೊರ ನಡೆದಿದ್ದ ಅಶ್ವಿನಿ ಅವರು ಜನರ ಕೋರಿಕೆ ಮೇಲೆ ಮತ್ತೆ ತಮ್ಮ ಪಾತ್ರಕ್ಕೆ ಹಿಂತಿರುಗಿದ್ದರು.

ಇನ್ನು ಈಗ ಬಹುದಿನಗಳ ನಂತರ ಅವರು ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ಸಾಗುತ್ತಿರುವ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಸೀರಿಯಲ್ ಮೂಲಕ ಕನ್ನಡಕ್ಕೆ ರೀ ಎಂಟ್ರಿ ನೀಡಿದ್ದಾರೆ. ವಿಶೇಷ ಎಂದರೆ ಅಶ್ವಿನಿ ಅವರು ಇದರಲ್ಲಿ ಕೂಡಾ ನಾಗಕನ್ಯೆಯಾಗಿ ಜನರ ಮುಂದೆ ಬರಲಿದ್ದಾರೆ. ತಮ್ಮ‌ ಕಣ್ಣುಗಳ ಕಾರಣದಿಂದಲೇ ಜನರ ಗಮನ ಸೆಳೆಯುವ ಅಶ್ವಿನಿ ಅವರು ನಾಗಕನ್ಯೆಯಾಗಿ ಪಾತ್ರ ನಿರ್ವಹಿಸುವ ವಿಚಾರ ತಿಳಿದು ಅವರ ಅಭಿಮಾನಿಗಳು ಸಂತೋಷ ಪಟ್ಟಿದ್ದಾರೆ.

Leave a Reply

Your email address will not be published. Required fields are marked *