ನವರಾತ್ರಿ ಸಂಭ್ರಮ: ಮಗಳ ಜೊತೆ ದೇವಿ ರೂಪದಲ್ಲಿ ಬಂದ ನಟಿ ಶ್ವೇತಾ ಶ್ರೀವಾತ್ಸವ

Written by Soma Shekar

Published on:

---Join Our Channel---

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾ ಖ್ಯಾತಿಯ ಸ್ಯಾಂಡಲ್ವುಡ್ ನಟಿ ಶ್ವೇತಾ ಶ್ರೀವಾತ್ಸವ ಅವರು ಸಿನಿಮಾ ಗಳಿಂದ ದೂರವುಳಿದಿದ್ದರೂ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಕ್ರಿಯವಾಗಿದ್ದಾರೆ. ವಿಶೇಷ ದಿನಗಳಿಗೆ ವಿಶೇಷ ರೀತಿಯ ಫೋಟೋ ಗಳನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ ಶ್ವೇತಾ ಅವರು. ತಮ್ಮ ಹಾಗೂ ತಮ್ಮ ಮುದ್ದು ಮಗಳ ಸುಂದರವಾದ ಫೋಟೋ ಶೂಟ್ ನ ಫೋಟೋಗಳನ್ನು ಅವರು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಪ್ರತಿಯೊಂದು ಹಬ್ಬವನ್ನು ಸಹಾ ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸುವ ಶ್ವೇತಾ ಅವರು ಇದೀಗ ನವರಾತ್ರಿ ಯನ್ನು ಸಹಾ ಸಂಭ್ರಮದಿಂದ ಆಹ್ವಾನಿಸಿದ್ದಾರೆ.‌ ಶ್ವೇತಾ ಅವರು ನವರಾತ್ರಿ ಯನ್ನು ತಮ್ಮ ಮಗಳು ಅಶ್ಮಿತಾ ಜೊತೆಗೆ ಸಂಭ್ರಮಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು, ನವರಾತ್ರಿ ಗೆ ಎಲ್ಲರಿಗೂ ಸಹಾ ಶುಭಾಶಯವನ್ನು ತಿಳಿಸಿದ್ದಾರೆ. ಶ್ವೇತಾ ಶ್ರೀ ವಾತ್ಸವ ಅವರು. ಮಗಳ ಜೊತೆ ದೇವಿ ರೂಪದಲ್ಲಿ ಫೋಟೋ ಶೂಟ್ ಮಾಡಿಸಿರುವ ಫೋಟೋಗಳನ್ನು ನಟಿ ಶ್ವೇತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶ್ವೇತಾ ಅವರು ಕೆಂಪು ಸೀರೆಯುಟ್ಟು ಕೈಯಲ್ಲಿ ತ್ರಿಶೂಲ ಹಿಡಿದು ಕುಳಿತಿದ್ದು, ಮಗಳು ಅಶ್ಮಿತಾ ಬಿಳಿಯ ಬಣ್ಣ, ಕೆಂಪು ಅಂಚು ಉಳ್ಳ ಸೀರೆಯನ್ನುಟ್ಟು ಅಮ್ಮನ ಮಡಿಲಿನಲ್ಲಿ ಕುಳಿತಿರುವ ಬಹಳ ಸುಂದರವಾದ ಫೋಟೋ ವನ್ನು ಶ್ವೇತ ಅವರು ಶೇರ್ ಮಾಡಿಕೊಂಡಿದ್ದಾರೆ. ಅಮ್ಮ ಮಗಳು ಇಬ್ಬರೂ ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅಷ್ಟ ಭುಜೆ ದೇವಿ ರೂಪದಲ್ಲಿ ಕಂಡಿರುವ ಶ್ವೇತ ಅವರ ಫೋಟೋ ಬಹಳ ವಿಶೇಷವಾಗಿದೆ.

ಇದರಲ್ಲಿ ಅವರು ಎಂಟು ಕೈಗಳಲ್ಲಿ ಆಯುಧಗಳ ಬದಲಾಗಿ ಇಂದಿನ ಆಧುನಿಕ ಕಾಲದ ವಸ್ತುಗಳು ಅಂದರೆ ಲ್ಯಾಪ್ ಟಾಪ್, ಚಾಕು, ಪೆನ್ನು, ಯೋಗ ಮ್ಯಾಟ್, ತಮ್ಮ ಮಗಳು, ಭಗವದ್ಗೀತೆ ಹಿಡಿದಿದ್ದು, ಆಧುನಿಕ ಮಹಿಳೆಯ ಶಕ್ತಿ ರೂಪದ ಹಾಗೆ ಅದು ಕಂಡಿದೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಶಕ್ತಿಯ ರೂಪವನ್ನು ಕಂಡು ಖುಷಿ ಪಟ್ಟಿದ್ದು, ಸಂಭ್ರಮ ಪಟ್ಟಿದ್ದಾರೆ.

ಕಾಮೆಂಟುಗಳಲ್ಲಿ ಅಭಿಮಾನಿಗಳು ನೆಚ್ಚಿನ ನಟಿಗೆ ನವರಾತ್ರಿ ಶುಭಾಶಯವನ್ನು ಕೋರುವ ಜೊತೆಗೆ ಶ್ವೇತ ಹಾಗೂ ಅವರ ಮಗಳ ಈ ಸುಂದರವಾದ ಫೋಟೋ ಶೂಟ್ ನೋಡಿ ಅದಕ್ಕೂ ಸಹಾ ತಮ್ಮ ಮೆಚ್ಚುಗೆಯನ್ನು ನೀಡುತ್ತಿದ್ದು, ಸಾವಿರಾರು ಜನರು ಫೋಟೋಗಳಿಗೆ ಲೈಕ್ ಗಳನ್ನು ನೀಡಿದ್ದಾರೆ. ಶ್ವೇತ ಅವರು ಕೆಲವೇ ದಿನಗಳ ಹಿಂದೆ ಸರಳವಾಗಿ ತಮ್ಮ ಜನ್ಮದಿನ ಆಚರಿಸಿಕೊಂಡ ಫೋಟೋಗಳನ್ನು ಸಹಾ ಹಂಚಿಕೊಂಡಿದ್ದನ್ನು ನಾವು ಸ್ಮರಿಸಬಹುದು.

Leave a Comment